32.9 C
ಪುತ್ತೂರು, ಬೆಳ್ತಂಗಡಿ
March 6, 2026
ಆರೋಗ್ಯಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಸರಕಾರಿ ಸಮುದಾಯ ಆಸ್ಪತ್ರೆಯ ರಕ್ಷಾ ಸಮಿತಿ ಸಭೆ: ಆಸ್ಪತ್ರೆಯ ಅಭಿವೃದ್ದಿಯ ಬಗ್ಗೆ ಚರ್ಚೆ

ಬೆಳ್ತಂಗಡಿ ಸರಕಾರಿ ಸಮುದಾಯ ಆಸ್ಪತ್ರೆಯ ರಕ್ಷಾ ಸಮಿತಿ ಸಭೆಯು ಶಾಸಕ ಹರೀಶ್ ಪೂಂಜ ರವರ ಅಧ್ಯಕ್ಷತೆಯಲ್ಲಿ ನಡೆಯಿತು.


ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ನಗರ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ,ವೈದ್ಯಾಧಿಕಾರಿ ಡಾ.ರಮೇಶ್ ಸ್ವಾಗತಿಸಿದರು., ಆರೋಗ್ಯಾಧಿಕಾರಿಯಾದ ಡಾ.ಸಂಜಾತ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಬಂಕಪ್ಪ, ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಕ್ಲೆಮೆಂಟ್ ಬೆಂಜಮಿನ್ ಬ್ರಾಗ್ಸ್, ಡಾ.ಶಶಿಕಾಂತ್ ಡೋಂಗ್ರೆ, ಡಾ.ಶಶಾಂಕ್, ಡಾ.ತಾರಕೇಶ್ವರಿ, ಡಾ.ಆಶಾಲತಾ, ಡಾ.ಹೇಮಲತಾ, ಡಾ.ರಶ್ಮಿ ಉಪಸ್ಥಿತರಿದ್ದರು.


ಸಭೆಯಲ್ಲಿ ಆಸ್ಪತ್ರೆಯ ಅಭಿವೃದ್ದಿಯ ಬಗ್ಗೆ ಚರ್ಚಿಸಲಾಯಿತು. ಆಸ್ಪತ್ರೆಯ ಮೂಲಭೂತ ಸೌಕರ್ಯಗಳಿಗೆ ಸರಕಾರದಿಂದ ಅನುದಾನ ಪಡೆಯಲು ಅಂದಾಜು ಪಟ್ಟಿ ತಯಾರಿಸುವಂತೆ ಸಭೆಯಲ್ಲಿ ತಿಳಿಸಿದರು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಔಷಧವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಲು ಬರೆದು ಮಾಹಿತಿ ನೀಡುವಂತೆ ತಿಳಿಸಲಾಯಿತು.ಕೊರತೆ ಇರುವ ಔಷಧವನ್ನು ಇಲಾಖೆಯಿಂದ ತಕ್ಷಣ ತರಿಸುವಂತೆ ಹೇಳಿದರು. ಆಸ್ಪತ್ರೆಯ ಆವರಣದ ಒಳಗೆ ಖಾಸಗಿ ವಾಹನವನ್ನು ನಿಲ್ಲಿಸುವುದರಿಂದ ತೊಂದರೆ ಆಗುತ್ತಿದೆ ಕೂಡಲೇ ಕ್ರಮ ವಹಿಸುವಂತೆ ತಿಳಿಸಿದರು.
ಒಳರೋಗಿ ಮತ್ತು ಹೊರರೋಗಿಗಳಿಗೆ ಪ್ರತ್ಯೇಕ ಕೌಂಟರ್ ಮಾಡುವಂತೆ ಸಭೆಯಲ್ಲಿ ಸದಸ್ಯರು ತಿಳಿಸಿದರು.ಆಸ್ಪತ್ರೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಬೇಕೆಂದು ತಿಳಿಸಿದರು.


ರಕ್ಷಾ ಸಮಿತಿ ಸದಸ್ಯರಾದ ನವೀನ್ ಗೌಡ ಸವಣಾಲು, ಸೆಬಾಸ್ಟಿಯನ್ ಪಿ.ಟಿ., ವೆಂಕಣ್ಣ ಕೊಯ್ಯೂರು, ವೀರೆಂದ್ರ ಕುಮಾರ್ ಜೈನ್, ಅಬ್ದುಲ್ ರಶೀದ್ ಕಕ್ಕಿಂಜೆ, ಸ್ಟೀವನ್ ಮೋನಿಸ್, ಶ್ರೀಮತಿ ಸವಿತಾ ಸುಲ್ಕೇರಿ, ಆರೋಗ್ಯಾಧಿಕಾರಿ ಕಛೇರಿಯ ಸಿಬ್ಬಂದಿ ಅಜಯ್ ಕಲ್ಲೇಗ ಉಪಸ್ಥಿತರಿದ್ದರು.

Related posts

ದಯಾ ವಿಶೇಷ ಮಕ್ಕಳ ಮುಂದಿನ ಭವಿಷ್ಯ ನಿರ್ಮಾಣಕ್ಕಾಗಿ ಡಿ.29 ರಂದು ಹೋಲಿ ರೆಡಿಮರ್ ಚರ್ಚ್ ವಠಾರದಲ್ಲಿ ದಯಾ ಫಿಯೆಸ್ತಾ-2024

Suddi Udaya

ಅಳದಂಗಡಿ: ಮಾರ್ನಿಂಗ್ ಕ್ರಿಕೆಟರ್ಸ್ ನಿಂದ ರಸ್ತೆ ರಿಪೇರಿ, ಚರಂಡಿ ದುರಸ್ಥಿ

Suddi Udaya

ಶ್ರೀರಾಮ ಶಾಲೆ ಸುಲ್ಕೇರಿಯ ವಿದ್ಯಾರ್ಥಿನಿ ಕು.ನಿಷ್ಕಾ ಜೈನ್ ಕಥೆ ಹೇಳುವ ಸ್ಪರ್ಧೆಯಲ್ಲಿ ಪ್ರಥಮ

Suddi Udaya

ಬೆಳ್ತಂಗಡಿ ರೋಟರಿ ಭವನದಲ್ಲಿ ಪ್ರಥಮ ಚಿಕಿತ್ಸೆ ಬಗ್ಗೆ ತರಬೇತಿ

Suddi Udaya

ಬಳಂಜ‌ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯ ಯುವ ಸಾಧಕಿ ಮಾನ್ಯರವರಿಗೆ ಸನ್ಮಾನ

Suddi Udaya

ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಪ್ರಜ್ವಲ್ ಗೆ ನೀಟ್ ನಲ್ಲಿ 720ರಲ್ಲಿ 710

Suddi Udaya
error: Content is protected !!