25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಿಕ್ಷಣ ಸಂಸ್ಥೆ

ಬೆಳ್ತಂಗಡಿ: MIFSE ಮತ್ತು ಅನುಗ್ರಹ ಟ್ರೈನಿಂಗ್ ಕಾಲೇಜಿನ ಸಹಯೋಗದಲ್ಲಿ ಡಿಪ್ಲೋಮಾ ಹಾಗೂ ವೃತ್ತಿಪರ ಶಿಕ್ಷಣದ ತರಗತಿಗಳ ಆರಂಭೋತ್ಸವ

“ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಮೊಟ್ಟ ಮೊದಲ ಬಾರಿಗೆ MIFSE (Mangalore Institute of Fire and Safety Engineering) ಮತ್ತು ಅನುಗ್ರಹ ಟ್ರೈನಿಂಗ್ ಕಾಲೇಜಿನ ಜಂಟಿ ಸಹಯೋಗದಲ್ಲಿ ಡಿಪ್ಲೋಮಾ, ಪಿ.ಜಿ ಡಿಪ್ಲೋಮಾ ಮತ್ತು ವಿವಿಧ ತಾಂತ್ರಿಕ ಹಾಗೂ ವೃತ್ತಿಪರ ತರಬೇತಿ ಕೋರ್ಸ್ಗಳ ಶಿಕ್ಷಣ ಸಂಸ್ಥೆಯು ಸಂತೆಕಟ್ಟೆ ಶ್ರೀರಾಮ ಕಾಂಪ್ಲೆಕ್ಸ್ ನಲ್ಲಿ ಪ್ರಾರಂಭಗೊಂಡಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ, ಅನುಗ್ರಹ ಎಜುಕೇಶನ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ , ಮತ್ತು ಅನುಗ್ರಹ ಟ್ರೈನಿಂಗ್ ಕಾಲೇಜು ಮ್ಯಾನೇಜಿಂಗ್ ಡೈರೆಕ್ಟರ್ ಎಂ ಜಿ ತಲ್ಹತ್ ಸವಣಾಲು ವಹಿಸಿದ್ದು, ಯುವಕರಿಗೆ ತಾಂತ್ರಿಕ ಶಿಕ್ಷಣದ ಅಗತ್ಯತೆಯನ್ನು ಮನದಟ್ಟಾಗಿಸಿದರು. “ಇಂದು ಕೇವಲ ಡಿಗ್ರಿ ಸಾಕಾಗದು. ಉದ್ಯೋಗ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆಯನ್ನು ಎದುರಿಸಲು ತಾಂತ್ರಿಕ ಕೌಶಲ್ಯ ಅತ್ಯಗತ್ಯ” ಎಂದು ತಿಳಿಸಿದರು.

ಸುನ್ನಿ ಮ್ಯಾನೇಜ್ಮೆಂಟ್ ಅಸೋಶಿಯೇಶನ್ (SMA) ಇದರ ರಾಜ್ಯಾಧ್ಯಕ್ಷ ಸಯ್ಯೆದ್ ಇಸ್ಮಾಯಿಲ್ ತಂಞಲ್ ಉಜಿರೆ ಇವರ ಪುತ್ರ ಸಯ್ಯದ್ ಇಸ್ಮಾಯಿಲ್ ಸವಾದ್ ಸಹದಿ ಅಲ್ ಅಝ್ಹರಿ ಉಜಿರೆ ಇವರು ಶೈಕ್ಷಣಿಕ ಜೀವನದಲ್ಲಿ ಶಿಸ್ತು ಮತ್ತು ಧಾರ್ಮಿಕ ನೀತಿಮೌಲ್ಯಗಳ ಮಹತ್ವವನ್ನು ಸಾರಿದರು.

ಬೆಳ್ತಂಗಡಿಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ರೆ. ಫಾ. ಕ್ಲಿಪರ್ಡ್ ಪಿಂಟೋ ಇವರು ವಿದ್ಯಾರ್ಥಿಗಳು ಶಿಕ್ಷಣವನ್ನು ಕೇವಲ ಉದ್ದೇಶವಲ್ಲದೆ ಜೀವನದ ಮಾರ್ಗದರ್ಶನವಾಗಿ ಕಾಣಬೇಕು ಹಾಗೂ ಜ್ಞಾನ ಹಾಗೂ ಉದ್ಯೋಗ ಸಿದ್ಧತೆ ಹೊಂದಿದ ಶಿಕ್ಷಣವೊಂದೇ ಭವಿಷ್ಯವನ್ನು ಬಲಪಡಿಸುತ್ತದೆ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ (ಗ್ರಾಮೀಣ) ಅಧ್ಯಕ್ಷ ಕೆ ಎಂ ನಾಗೇಶ್ ಕುಮಾರ್ ಮಾತನಾಡಿ ಗ್ರಾಮೀಣ ಯುವಕರಿಗೆ ತಾಂತ್ರಿಕ ಶಿಕ್ಷಣ ಒಂದು ಆಶಾಕಿರಣ ಹಾಗೂ ಇಂದು ಯುವಕರಿಗೆ ಕೇವಲ ಡಿಗ್ರಿ ಸಾಕಾಗದು. ತಂತ್ರಜ್ಞಾನ, ಕೌಶಲ್ಯ ಮತ್ತು ಉದ್ಯೋಗ ಪರಿಧಿಯನ್ನು ವಿಸ್ತರಿಸುವಂತಹ ತಾಂತ್ರಿಕ ತರಬೇತಿಯೇ ಅವರ ಭವಿಷ್ಯದ ಬಲವಾಗಿದೆ ಎಂದು ಹೇಳಿದರು.

ಎಸ್.ಡಿ.ಪಿ.ಐ ಕ್ಷೇತ್ರ ಸಮಿತಿ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ಮಾತನಾಡಿ ಶಿಕ್ಷಣದಿಂದ ಸಮಾಜದಲ್ಲಿ ಬದಲಾಗುವ ಸಾಧ್ಯತೆಯ ಬಗ್ಗೆ ಮತ್ತು ಯುವಶಕ್ತಿಯ ಸಬಲೀಕರಣಕ್ಕೆ ತಾಂತ್ರಿಕ ತರಬೇತಿಯು ಅತ್ಯಗತ್ಯ ಎಂಬ ಪ್ರೇರಣಾದಾಯಕ ಮಾತುಗಳನ್ನಾಡಿದರು.

MIFSE – MINERVA COLLEGE ಚೇರ್ಮನ್ ಮನೋಜ್ ಕೆ ಜಾನ್ ಮಾತನಾಡಿ MIFSE – MINERVA COLLEGE , “ಫೈರ್ & ಸೇಫ್ಟಿ, ಏರೋನಾಟಿಕಲ್, ಮರೈನ್, ಲಾಜಿಸ್ಟಿಕ್ಸ್ ಕ್ಷೇತ್ರಗಳು ರಾಷ್ಟ್ರದ ಮತ್ತು ವಿದೇಶದ ಉದ್ಯೋಗ ಮಾರುಕಟ್ಟೆಯಲ್ಲಿ ಭವಿಷ್ಯದ ಕನಸುಗಳನ್ನು ನನಸು ಮಾಡುವ ಅವಕಾಶ ಸಂಸ್ಥೆ ಒದಗಿಸುತ್ತವೆ, ವೃತ್ತಿಪರ ತರಬೇತಿ ವಿಭಾಗದ ನೈಜ ಶ್ರೇಷ್ಠತೆ ಕುರಿತು ಮಾತನಾಡಿದರು ಮಾತ್ರವಲ್ಲ ಅವರು ತಮ್ಮ ಭಾಷಣದಲ್ಲಿ, “ಇಂದು ಲಾಜಿಸ್ಟಿಕ್ಸ್, ಫೈರ್ ಅಂಡ್ ಸೆಫ್ಟಿ ಮುಂತಾದ ಕೋರ್ಸ್ಗಳು ಕೇವಲ ನೌಕರಿಯ ಕೀಲುಬಾಗಿಲುಗಳಲ್ಲ; ಇವು ಉದ್ಯೋಗ ಮಾರುಕಟ್ಟೆಯಲ್ಲಿ ಅತ್ಯಂತ ಬೇಡಿಕೆ ಹೊಂದಿರುವ ಕ್ಷೇತ್ರಗಳಾಗಿವೆ. ಸರಿಯಾದ ತರಬೇತಿಯೊಂದಿಗೆ ವಿದ್ಯಾರ್ಥಿಗಳು ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಆಕರ್ಷಕ ಉದ್ಯೋಗಗಳತ್ತ ಮುನ್ನಡೆಯಬಹುದು” ಎಂದು ಉದಾಹರಣೆಗಳೊಂದಿಗೆ ವಿವರಿಸಿದರು.

ಅನುಗ್ರಹ ಟ್ರೈನಿಂಗ್ ಕಾಲೇಜಿನ ನಿರ್ದೇಶಕರಾದ ಅಬ್ದುಲ್ ಖಾದರ್ ಮತ್ತು ಮುಹಮ್ಮದ್ ತೌಸೀಫ್ , ವಿದ್ಯಾರ್ಥಿಗಳಿಗೆ “ಕೌಶಲ್ಯ ಮತ್ತು ಆತ್ಮವಿಶ್ವಾಸ” ಎಂಬುದು ಜೀವನದ ಪ್ರಮುಖ ಅಸ್ತ್ರ ಎಂದು ತಿಳಿಸಿದರು. “ವಿದೇಶದಲ್ಲಿ ಉದ್ಯೋಗ ಮಾರುಕಟ್ಟೆಗೆ ಸ್ಪರ್ಧಾತ್ಮಕವಾಗಿ ವಿದ್ಯಾರ್ಥಿಗಳನ್ನು ಸಜ್ಜು ಮಾಡುವುದು ನಮ್ಮ ಗುರಿ” ಎಂದು ಹೇಳಿದರು.

ಈ ವೇಳೆ ಹಳೆ ವಿದ್ಯಾರ್ಥಿಗಳು ತಮ್ಮ ಯಶಸ್ಸಿನ ಅನುಭವಗಳನ್ನು ಹಂಚಿಕೊಂಡರು. ಪೋಷಕರಿಗೆ ಕಾಲೇಜಿನ ಗುರಿಗಳನ್ನು ವಿವರಿಸಿ ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಈ ತರಬೇತಿ ಕೇಂದ್ರದ ಪಾತ್ರವನ್ನು ಪ್ರಸ್ತುತಪಡಿಸಿದರು.

ಸಂಸ್ಥೆಯ ಸಂಸ್ಥಾಪಕರ ಕುರಿತು ವಿಶೇಷ ಮೆಚ್ಚುಗೆ: –
ಎಂ ಜಿ ತಲ್ಹತ್ ಸವಣಾಲು ಅವರು ಸ್ಥಾಪಿಸಿದ ಅನುಗ್ರಹ ಟ್ರಸ್ಟ್ ದಕ್ಷಿಣ ಕನ್ನಡದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿಯ ಪಥವನ್ನು ಸೃಷ್ಟಿಸಿತು. ಅವರ ಶ್ರಮ, ದೃಷ್ಟಿಕೋನ ಮತ್ತು ಸಮಾಜ ಸೇವೆಯನ್ನು ಎಲ್ಲಾ ಅತಿಥಿಗಳು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಎಂ ಡಿ ಯವರ ತಂದೆ ಜಿ ಯೂಸುಫ್ ಸವಣಾಲು, ತಾಯಿ ಮತ್ತು ಕುಟುಂಬಸ್ಥರು, ಅನುಗ್ರಹ ಬುಕ್ ಕಂಪೆನಿಯ ಮುಖ್ಯಸ್ಥರು ಜಿ ಮುಹಮ್ಮದ್ ಅಶ್ರಫ್ ಫೈಝಿ, ಎಂ ಡಿ ಯವರ ಪತ್ನಿ ಮುನೀರಾ ಕೆ ವೈ, ಅಬ್ದುಲ್ ಖಾದರ್ ಅವರ ಅಣ್ಣ ಮುಹಮ್ಮದ್ ಬಶೀರ್ ದಾರಿಮಿ ನಾವೂರು, ಮುಹಮ್ಮದ್ ತೌಸೀಫ್ ಅವರ ತಂದೆ ಸುಲೈಮಾನ್ ಮತ್ತು ಕುಟುಂಬಸ್ಥರು, ಉದ್ಯಮಿ ಹಾಗೂ ಸಮಾಜ ಸೇವಕ ಅಶ್ರಫ್ ಕಟ್ಟೆ, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು .

ದಾಖಲಾತಿ ಪ್ರಕ್ರಿಯೆಯು ಮುಂದುವರೆದಿದ್ದು ಆಸಕ್ತ ವಿದ್ಯಾರ್ಥಿಗಳು ತಾಂತ್ರಿಕ ವೃತ್ತಿ ಪರ ತರಬೇತಿಗಳನ್ನು ಪಡೆದು ಕೂಡಲೆ ಉದ್ಯೋಗಿಗಳಾಗಬಹುದು, ಆದುದರಿಂದ ಹುಡುಗ ಮತ್ತು ಹುಡುಗಿಯರಿಗೆ ಪ್ರತ್ಯೇಕ ಡಿಪ್ಲೋಮಾ ಕೋರ್ಸುಗಳ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ, ಮಾಹಿತಿಗಾಗಿ ಸಂಸ್ಥೆಯ ಕಚೇರಿ ಅಥವಾ ಮೊಬೈಲ್ ಸಂಖ್ಯೆ: 8861112182 ಈ ನಂಬರ್ ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

Related posts

ತೆಕ್ಕಾರು ಇಬ್ಬನಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಮಹಾಸಭೆ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್ ಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ

Suddi Udaya

ಬಂದಾರು: ಮೈರೋಳ್ತಡ್ಕ ಒಕ್ಕೂಟದ ವತಿಯಿಂದ ಸ್ವಚ್ಛತಾ ಶ್ರಮದಾನ

Suddi Udaya

ಪ್ರಸಿದ್ದ ಪುಣ್ಯಕ್ಷೇತ್ರ ಶಿರ್ಡಿ ಸಾಯಿಬಾಬಾ ಕ್ಷೇತ್ರಕ್ಕೆ ತೀರ್ಥಯಾತ್ರೆ ಕೈಗೊಂಡ ಬೆಳ್ತಂಗಡಿಯ ನೂರಾರು ಭಕ್ತರು

Suddi Udaya

ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ – ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಹದಿಹರೆಯದ ವಿಷಯದ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ಮುಗೇರಡ್ಕ ದೈವಸ್ಥಾನ ವತಿಯಿಂದ ಅಲೆಕ್ಕಿ ಶಿಶುಮಂದಿರಕ್ಕೆ ಧನ ಸಹಾಯ

Suddi Udaya
error: Content is protected !!