23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕಳಿಯ ಗ್ರಾ.ಪಂ. ನ ಮೂರನೇ ವಾರ್ಡ್ ಮತ್ತು ನ್ಯಾಯತರ್ಪು ಗ್ರಾಮದ ಪ್ರಥಮ ಸುತ್ತಿನ ವಾರ್ಡ್ ಸಭೆ

ಬೆಳ್ತಂಗಡಿ: ಕಳಿಯ ಗ್ರಾಮ ಪಂಚಾಯತ್ ನ ಕಳಿಯ ಮೂರನೇ ವಾರ್ಡ್ ಮತ್ತು ನ್ಯಾಯತರ್ಪು ಗ್ರಾಮದ ಪ್ರಥಮ ಸುತ್ತಿನ ವಾರ್ಡ್ ಸಭೆಯು ನಾಳ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಮ್ ಉಪಸ್ಥಿತಿಯಲ್ಲಿ ಕಳಿಯ ವಾರ್ಡ್ ಮೂರನೇ ವಾರ್ಡ್ ನ ಸದಸ್ಯರಾದ ಸುಧಾಕರ ಮಜಲು ರವರ ಅಧ್ಯಕ್ಷತೆಯಲ್ಲಿ ಮೂರನೇ ಬ್ಲಾಕ್ ನ ವಾರ್ಡ್ ಸಭೆ ಹಾಗೂ ನ್ಯಾಯತರ್ಪು ಗ್ರಾಮದ ವಾರ್ಡ್ ಸದಸ್ಯರಾದ ವಿಜಯ ಗೌಡ ಅಧ್ಯಕ್ಷತೆಯಲ್ಲಿ ನ್ಯಾಯತರ್ಪು ಗ್ರಾಮದ ವಾರ್ಡ್ ಸಭೆ ಜರಗಿತು.


ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್,ಸದಸ್ಯರಾದ ಶ್ರೀಮತಿ ಮೋಹಿನಿ, ಲತೀಫ್ ಪರಿಮ, ಯಶೋದರ ಶೆಟ್ಟಿ, ಶ್ರೀಮತಿ ಕುಸುಮ ಎನ್ ಬಂಗೇರ,ಶ್ರೀಮತಿ ಪುಷ್ಪಾ ಹಾಗೂ ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಹಾಜರಿದ್ದರು.
ಗ್ರಾಮಸ್ಥರಿಂದ ಕರತ್ತೂರು ರಸ್ತೆಯನ್ನು ದುರಸ್ಥಿ ಪಡಿಸುವಂತೆ ತಿಳಿಸಿದರು.


ವಾರ್ಡ್ ನ ವಿವಿಧ ಕಡೆಗಳಲ್ಲಿ ಸೋಲಾರ್ ಲೈಟ್ ಅಳವಡಿಸಲು, ತೀವೃ ಹದಗೆಟ್ಟ ಬಟ್ಟೆಮಾರು ವಂಜಾರೆ ರಸ್ತೆಯನ್ನು ಡಾಮರೀಕರಣಗೊಳಿಸಲು, ವಂಜಾರೆ ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರವನ್ನು ತೆರವುಗೊಳಿಸಲು ಗ್ರಾಮಸ್ಥರು ತಿಳಿಸಿದಾಗ ಈ ಬಗ್ಗೆ ಈಗಾಗಲೇ ಅರಣ್ಯ ಮತ್ತು ಮೆಸ್ಕಾಮ್ ಇಲಾಖೆಗೆ ಪತ್ರ ಬರೆದಿರುವುದಾಗಿ ಅಧಿಕಾರಿಗಳು ತಿಳಿಸಿದರು.
ಕಳೆದ ವಾರ್ಡ್ ಸಭೆಗಳಲ್ಲಿ ಸೋಲಾರ್ ದೀಪ ಅಳವಡಿಸಲು ಬೇಡಿಕೆ ಸಲ್ಲಿಸಿದಂತೆ ಈಗಾಗಲೇ ಪಂಚಾಯತ್ ವತಿಯಿಂದ ಬಟ್ಟೆಮಾರು ಕಜೆ ವಂಜಾರೆ ರಸ್ತೆ ಬದಿಯಲ್ಲಿ ಸೋಲಾರ್ ದೀಪ ಅಳವಡಿಸಿದ್ದಕ್ಕೆ ಪಂಚಾಯತ್ ಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.


ಅಭಿವೃದ್ಧಿ ಅಧಿಕಾರಿ ಸ್ವಾಗತಿಸಿ ದನ್ಯವಾದವಿತ್ತರು. ಸಿಬ್ಬಂದಿಗಳಾದ ರವಿ ಎಚ್,ಸುರೇಶ್ ಗೌಡ ಸಹಕರಿಸಿದರು.

Related posts

ವೇಣೂರು: ಬರ್ಕಜೆ ದೆತ್ತರ ನದಿಗೆ ಸ್ನಾನಕ್ಕೆ ತೆರಳಿದ ಮೂವರು ವಿದ್ಯಾರ್ಥಿಗಳು ನೀರುಪಾಲು

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 10ನೇ ವರ್ಷದ ಯೋಗ ದಿನಾಚರಣೆ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಪತ್ತೆಯಾದ ಬಂದೂಕು ಪ್ರಕರಣ ಮಧ್ಯಂತರ ತಡೆ ಮುಂದೂಡಿದ ಹೈಕೋರ್ಟ್

Suddi Udaya

ಮೇ 20-22: ಸಾಲುಕಾಯೇರು ಶ್ರೀ ಮಹಮ್ಮಾಯಿ ಅಮ್ಮನವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Suddi Udaya

ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಶ್ರೀಮತಿ ತಾರಾಕೇಸರಿ ನೇಮಕ

Suddi Udaya

ವಾಣಿ ಕಾಲೇಜು: ರಾಷ್ಟ್ರೀಯ ಮತದಾರರ ದಿನಾಚರಣೆ ಕುರಿತು ಕಾನೂನು ಅರಿವು ಕಾರ್ಯಕ್ರಮ

Suddi Udaya
error: Content is protected !!