ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಕೆಸರಡ್ ಒಂಜಿ ದಿನ” ಕಾರ್ಯಕ್ರಮ

ಧರ್ಮಸ್ಥಳ : ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ “ಕೆಸರಡ್ ಒಂಜಿ ದಿನ” ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಶಾಲೆಯ ಪರಿಸರ ಸಂಘ, ಸ್ಕೌಟ್ ಅಂಡ್ ಗೈಡ್ ನ ವಿದ್ಯಾರ್ಥಿಗಳು ಮತ್ತು ಸಂಸ್ಕೃತಿಕ ಸಂಘದ ಸದಸ್ಯರು ಭತ್ತದ ಗದ್ದೆಯಲ್ಲಿ ಸೇರಿ ವಿವಿಧ ಚಟುವಟಿಕೆಗಳನ್ನು ನಡೆಸಿದರು. ಸ್ಕೌಟ್ ಅಂಡ್ ಗೈಡ್, ಪರಿಸರ ಸಂಘ ಮತ್ತು ಸಾಂಸ್ಕೃತಿಕ ಸಂಘದ ವಿದ್ಯಾರ್ಥಿಗಳಿಗೆ ಶಾರೀರಿಕ ಚಟುವಟಿಗೆಗೆ ಪ್ರೋತ್ಸಾಹ ನೀಡುವ ಜೊತೆಗೆ, ಮಕ್ಕಳಲ್ಲಿ ತಂಡಭಾವನೆ ಹಾಗೂ ಸ್ನೇಹ ಭಾವ, ಸ್ಪರ್ಧಾತ್ಮಕ ಮನೋಭಾವವೂ ಬೆಳೆಯುವ ಪರಿಸರ ಒದಗಿಸಲಾಗಿತ್ತು.


ಪರಿಸರ ಸಂಘದ ಹಾಗೂ ಸ್ಕೌಟ್ ಹಾಗೂ ಗೈಡ್ ಸದಸ್ಯರು ಗದ್ದೆಯ ಬದುವನ್ನು ಸರಿಪಡಿಸಿ, ಕಲ್ಲು ಹಾಗೂ ಕಸವನ್ನು ತೆಗೆದು, ಮಣ್ಣನ್ನು ಹದಗೊಳಿಸಿ ನಾಟಿಗೆ ಅಣಿಗೊಳಿಸಿದರು.


ಸಾಂಸ್ಕೃತಿಕ ಸಂಘದ ವಿದ್ಯಾರ್ಥಿಗಳ ಜೊತೆಗೆ ಪರಿಸರ ಸಂಘದ ಹಾಗೂ ಸ್ಕೌಟ್ ಹಾಗೂ ಗೈಡ್ ವಿದ್ಯಾರ್ಥಿಗಳು ತುಳುನಾಡು ನುಡಿಗೆ ಸಂಬಂಧಿಸಿದ ನೃತ್ಯಗಳನ್ನು ಪ್ರದರ್ಶಿಸಿದರು.ಅಡಿಕೆ ಹಾಳೆಯಲ್ಲಿ ಕುಳಿತು ಕೆಸರಿನಲ್ಲಿ ಎಳೆಯುವ ಆಟ, ಕೆಸರು ಗದ್ದೆ ಓಟ ಇತ್ಯಾದಿ ವಿವಿಧ ವಿನೋದಾವಳಿ ಆಟಗಳನ್ನು ಆಡಿ ವಿದ್ಯಾರ್ಥಿಗಳು ಸಂತಸ ಪಟ್ಟರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪರಿಮಳ ಎಂ ವಿ ಅವರ ಮಾರ್ಗದರ್ಶನದಲ್ಲಿ ಮೂಡಿಬಂದ ಈ ಕಾರ್ಯಕ್ರಮವನ್ನು ಶಾಲೆಯ ಸ್ಕೌಟ್ ಅಂಡ್ ಗೈಡ್ ಉಸ್ತುವಾರಿ ಶಿಕ್ಷಕರು, ಪರಿಸರ ಸಂಘದ ಶಿಕ್ಷಕರು ಮತ್ತು ಸಾಂಸ್ಕೃತಿಕ ಸಂಘದ ಶಿಕ್ಷಕರು ಸಂಯೋಜಿಸಿ ಯಶಸ್ವಿಯಾಗಿ ನಡೆಸಿಕೊಟ್ಟರು.

Related posts

ಸರಗಳ್ಳತನದ ಆರೋಪಿಯನ್ನು ಬಂಧಿಸಿ, ರೂ 5,05,000 ಮೌಲ್ಯದ ಸೊತ್ತನ್ನು ವಶಪಡಿಸಿದ ಉಪ್ಪಿನಂಗಡಿ ಠಾಣಾ ಪೊಲೀಸರು

Suddi Udaya

ಅಳದಂಗಡಿ ಸರ್ಕಾರಿ ಕಾಲೇಜಿನಲ್ಲಿ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ

Suddi Udaya

ನಾವೂರು ಜಾತ್ರಾ ಮಹೋತ್ಸವ: ಡಾ. ವೀಣಾ ಬನ್ನಂಜೆ ಅವರಿಂದ ಮೂರನೇ ದಿನದ ಶ್ರೀ ಕೃಷ್ಣ ಕಥಾಮೃತ ಪ್ರವಚನ

Suddi Udaya

ಎನ್.ಇ.ಟಿ. ನರ್ಸಿಂಗ್ ಕಾಲೇಜಿನಲ್ಲಿ ಬಿ.ಎಸ್.ಸಿ. ನರ್ಸಿಂಗ್ ವಿದ್ಯಾರ್ಥಿಗಳ ದೀಪ ಬೆಳಗಿಸುವಿಕೆ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭ

Suddi Udaya

ಕುಕ್ಕಾವು ಸ.ಹಿ.ಪ್ರಾ. ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕಿ ಲೀಲಾ ರವರಿಗೆ ಅಭಿನಂದನಾ ಸಮಾರಂಭ

Suddi Udaya

22ನೇ ಮಹಿಳಾ ಆಲ್ ಇಂಡಿಯಾ ಇಂಟರ್ ಝೋನಲ್ ನೆಟ್ಬಾಲ್ ಪಂದ್ಯಾಟ: ಎಸ್ ಡಿ ಎಂ ಕಾಲೇಜಿನ 2 ಕ್ರೀಡಾಪಟುಗಳಿಗೆ ಬೆಳ್ಳಿ ಪದಕ

Suddi Udaya
error: Content is protected !!