30 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯಲ್ಲಿ ವನಮಹೋತ್ಸವ

ಕುವೆಟ್ಟು: ಸ.ಉ.ಹಿ.ಪ್ರಾ. ಶಾಲೆ ಕುವೆಟ್ಟು ಇಲ್ಲಿ ವನಮಹೋತ್ಸವ ಕಾರ್ಯಕ್ರಮ ಶಾಲಾ ಇಕೋ ಕ್ಲಬ್ ಹಾಗೂ ಶಾಂತಿ ಶ್ರೀ ಮಹಿಳಾ ಸಮಾಜ ಬೆಳ್ತಂಗಡಿ ಇವರ ಪ್ರಾಯೋಜಕತ್ವದಲ್ಲಿ ಜರಗಿತು. ಶಾಲೆಯ 12 ಮಂದಿ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಪೋಷಕರೊಂದಿಗೆ ಗಿಡ ನೀಡುವುದಕ್ಕೆ ಸಸಿಗಳನ್ನು ವಿತರಿಸಲಾಯಿತು. ಅಲ್ಲದೆ ಆಗಮಿಸಿದ ಎಲ್ಲಾ ಅತಿಥಿಗಳಿಗೆ ಒಂದೊಂದು ಗಿಡವನ್ನು ವಿತರಿಸಲಾಯಿತು. ಶಾಲಾ ಆವರಣದಲ್ಲಿ ಇಕೋ ಕ್ಲಬ್ ಸದಸ್ಯರು ಹಾಗೂ ಶಾಂತಿ ಶ್ರೀ ಮಹಿಳಾ ಸಮಾಜದ ಸದಸ್ಯರು ಗಿಡಗಳನ್ನು ನೆಟ್ಟರು.

ಕಾರ್ಯಕ್ರಮದಲ್ಲಿ ಶಾಂತಿ ಶ್ರೀ ಮಹಿಳಾ ಸಮಾಜ ಬೆಳ್ತಂಗಡಿ ಅಧ್ಯಕ್ಷರಾದ ಪ್ರೊಫೆಸರ್ ಶ್ರೀಮತಿ ತ್ರಿಶಾಲ್ ಜೈನ್, ಕಾರ್ಯದರ್ಶಿ ಶ್ರೀಮತಿ ರಾಜಶ್ರೀ ಹೆಗ್ಡೆ, ಸದಸ್ಯರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸಿರಾಜ್ ಎಂ ಚಿಲಿಂಬಿ, ಉಪಾಧ್ಯಕ್ಷೇ ಶ್ರೀಮತಿ ಲಾವಣ್ಯ ಎಸ್ ಶೆಟ್ಟಿ ಮತ್ತು ಸದಸ್ಯರು, ಇಕೋ ಕ್ಲಬ್ ನ ಅಧ್ಯಕ್ಷೆ ಕುಮಾರಿ ರಾಯಿಶ ನಿರ್ವಾಹಕಿ ಶ್ರೀಮತಿ ಪ್ರಮೀಳಾ ಮುಖ್ಯ ಶಿಕ್ಷಕ ಭಾಸ್ಕರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ. ಶಿಕ್ಷಕಿ ಶ್ರೀಮತಿ ದವಲಾ ಎ, ಕಾರ್ಯಕ್ರಮ ನಿರೂಪಿಸಿದರು.

Related posts

ಎಸ್.ಡಿ.ಎಮ್.ಪದವಿ ಪೂರ್ವ ಕಾಲೇಜಿನಲ್ಲಿ ʼಎಮ್ಯುಲೇಶನ್‌ʼ ಕಾರ್ಯಕ್ರಮ

Suddi Udaya

ಲೋಕಸಭಾ ಚುನಾವಣೆ ದಿನಾಂಕ ಪ್ರಕಟ: ಇಂದಿನಿಂದ ನೀತಿ ಸಂಹಿತೆ ಜಾರಿ: ದ.ಕ. ಲೋಕಸಭಾ ಕ್ಷೇತ್ರದಲ್ಲಿ ಎ. 26ರಂದು ಮತದಾನ

Suddi Udaya

ಲಾಯಿಲ ಮತ್ತು ಮೇಲಂತಬೆಟ್ಟು ಗ್ರಾಮಗಳಲ್ಲಿ ಆರ್.ಪಿ.ಸಿ ವತಿಯಿಂದ ಮೂರು ದಿನಗಳ ಚಾರಿಟಿ

Suddi Udaya

“ಎಕ್ಸೆಲ್ – ಬೆಳಕು” ಪ್ರತಿಭಾಶಾಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

Suddi Udaya

ಉಜಿರೆ ಎಸ್‌ಡಿಎಂ ಆಂ.ಮಾ.ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ವೇಣೂರು: ತುಂಬೆದಲ್ಕೆ ನಿವಾಸಿ ಕೃಷಿಕ ಸೇಸಪ್ಪ ಪೂಜಾರಿ ನಿಧನ

Suddi Udaya
error: Content is protected !!