September 6, 2026
ರಾಜ್ಯ ಸುದ್ದಿವರದಿಸಮಸ್ಯೆಸರ್ಕಾರಿ ಇಲಾಖಾ ಸುದ್ದಿ

ಕಾಡಾನೆ ದಾಳಿ ಪ್ರಕರಣ: ಮೃತರ ಕುಟುಂಬಕ್ಕೆ ಗರಿಷ್ಠ ಮೊತ್ತ ಪರಿಹಾರ ನೀಡಲು ಉದ್ಯಮಿ ಗಣೇಶ್ ಕಲಾಯಿ ಒತ್ತಾಯ

ಕೊಕ್ಕಡ: ಸೌತಡ್ಕ ಗುಂಡಿ ಎಂಬಲ್ಲಿ ಕಾಡಾನೆ ತಿವಿದು ಬಾಲಕೃಷ್ಣ ಶೆಟ್ಟಿ ಎಂಬವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟ ಕುಟುಂಬಕ್ಕೆ ಸರಕಾರ ಹಾಗೂ ಇಲಾಖೆ ಗರಿಷ್ಠ ಮೊತ್ತ ಪರಿಹಾರ ನೀಡಬೇಕು ಎಂದು ಉದ್ಯಮಿ ಹಾಗೂ ಕೃಷಿಕ ಗಣೇಶ್ ಕಲಾಯಿ ರವರು ಸರಕಾರ ಹಾಗೂ ಇಲಾಖೆಗೆ ಒತ್ತಾಯಿಸಿದ್ದಾರೆ.

ಕಳೆದ 5/6 ವರ್ಷಗಳಿಂದ ಕೊಕ್ಕಡ ಹಾಗೂ ಸುತ್ತ ಮುತ್ತ ಪರಿಸರದಲ್ಲಿ ಕಾಡಾನೆಗಳ ಸಂಚಾರ ಅತಿಯಾಗಿದ್ದು, ಕಳೆದ ವರ್ಷ ರಾಜ್ಯ ಅರಣ್ಯ ಇಲಾಖೆಗೂ ಪತ್ರದ ಮುಖಾಂತರ ತಿಳಿಸಲಾಗಿದೆ, ಆದರೆ ಇಲ್ಲಿಯವರೆಗೆ ಸಂಬಂಧಪಟ್ಟ ಇಲಾಖೆ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿಲ್ಲ. ಇವತ್ತು ಒಂದು ಪ್ರಾಣ ಹಾನಿ ಆಗಿದೆ. ಇದಕ್ಕೆ ಇಲಾಖೆ ನೇರ ಕಾರಣ, ಇಲ್ಲಿನ ಪರಿಸರದ ಕೃಷಿಗಳಿಗೆ ಅದೆಷ್ಟೋ ಹಾನಿ ಆಗಿದೆ, ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ಆಗಬೇಕಾದರೆ ರಿಸರ್ವ್ ಫಾರೆಸ್ಟ್ ಗಳ ಸುತ್ತ ಆನೆ ಕಂದಕ (EPT) ರಚನೆ ಮಾಡಬೇಕಾಗುತ್ತದೆ. ಇದರ ಬಗ್ಗೆ ಇಲಾಖೆ ಬೇಗನೆ ಕ್ರಮ ಕೈಗೊಳ್ಳಬೇಕು. ಇದರಿಂದ ಆನೆ ಗಳು ನಾಡಿಗೆ ಬರುವುದನ್ನು ತಪ್ಪಿಸಬಹುದು ಎಂದು ತಿಳಿಸಿರುತ್ತಾರೆ.

Related posts

ಶಿಶಿಲ : ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಡಿತ; ಮಹಿಳೆ ಸಾವು

Suddi Udaya

ಟೀಂ ಅಭಯಹಸ್ತ ವತಿಯಿಂದ ಸುಲ್ಕೇರಿಮೊಗ್ರು ಸರ್ಕಾರಿ ಶಾಲೆಗೆ ಆರ್ಥಿಕ ಸಹಕಾರದ ಹಸ್ತಾಂತರ-ಬಹುಮಾನ ವಿತರಣೆ

Suddi Udaya

ಬ೦ಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಮಹಾಸಭೆ: ರೂ. 1020.75 ಕೋಟಿ ವ್ಯವಹಾರ, ರೂ. 4.30 ಕೋಟಿ ಲಾಭ, ಶೇ. 17 ಡಿವಿಡೆಂಡ್

Suddi Udaya

ಭಾರೀ ಮಳೆಗೆ : ಕೊಕ್ಕಡ ಎಲ್ಯಣ್ಣ ಗೌಡರವರ ಬಾವಿ ಕುಸಿತ: ಅಪಾರ ನಷ್ಟ

Suddi Udaya

ಕಲ್ಮಂಜ: ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಹಾಗೂ ವಾರ್ಷಿಕ ಜಾತ್ರೋತ್ಸವ ಸಮಿತಿಯ ಪೂರ್ವಭಾವಿ ಸಭೆ

Suddi Udaya

ಬೆಳ್ತಂಗಡಿ ವಲಯದ ಬೆಳ್ತಂಗಡಿ ಪ್ರಗತಿ-ಬಂದು ಸ್ವ-ಸಹಾಯ ಸಂಘಗಳ ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya
error: Content is protected !!