24.8 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಬೆಳ್ತಂಗಡಿವರದಿ

ನಿವೃತ್ತ ಉಪತಹಶೀಲ್ದಾರ್, ಪ್ರಗತಿಪರ ಕೃಷಿಕ, ನಾಳ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಗುಂಡೂರಾವ್ ವಿಧಿವಶ

ಗೇರುಕಟ್ಟೆ : ನ್ಯಾಯತಪು೯ ಗ್ರಾಮದ ಗೇರುಕಟ್ಟೆ ಬಳಿಯ ನಾಳ ಹೊಸಮನೆ ನಿವಾಸಿ, ಪ್ರಗತಿಪರ ಕೃಷಿಕ, ನಿವೃತ್ತ ಉಪತಹಶೀಲ್ದಾರ್, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರಾಗಿ ಸೇವೆ ಸಲ್ಲಿಸಿದ್ದ ಗುಂಡೂರಾವ್ (72 ವ) ಅವರು ಅಲ್ಪಕಾಲದ ಅಸೌಖ್ಯದಿಂದ ಜು.16 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.


ಗುಂಡೂರಾವ್ ಅವರು 2002 ರಿಂದ 2008 ರವರೆಗೆ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರಾಗಿ, ಜೀರ್ಣೋದ್ದಾರ ಸಮಿತಿಯ ಮಾಜಿ ಅಧ್ಯಕ್ಷರಾಗಿ, ದೇವಸ್ಥಾನದ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಸಕ್ರೀಯವಾಗಿ ಭಾಗವಹಿಸುತ್ತಿದ್ದರು. ಪ್ರಗತಿಪರ ಕೃಷಿಕರಾಗಿದ್ದ ಇವರು ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ, ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ ಉಪತಹಶೀಲ್ದಾರ್ ಆಗಿ ಭಡ್ತಿಗೊಂಡು ಬಂಟ್ವಾಳ ತಾಲೂಕು ಕಚೇರಿಗೆ ವರ್ಗಾವಣೆಗೊಂಡು ಬಳಿಕ ಅಲ್ಲಿಯೇ ನಿವೃತ್ತಿ ಹೊಂದಿದ್ದರು.


ಮೃತರು ಇಬ್ಬರು ಗಂಡು ಮಕ್ಕಳು, ಓರ್ವ ಹೆಣ್ಣುಮಗಳು, ಬಂಧು ವರ್ಗದವರನ್ನು ಅಗಲಿದ್ದಾರೆ.

Related posts

ನೆರಿಯ: ಸಂಜೀವ ಗೌಡ ನಿಧನ

Suddi Udaya

ಧರ್ಮಸ್ಥಳದಲ್ಲಿ ಡಾ. ಹೆಗ್ಗಡೆಯವರ ಪಟ್ಟಾಭಿಷೇಕದ 56ನೇ ವರ್ಧಂತ್ಯುತ್ಸವದ ಅಂಗವಾಗಿ ಛದ್ಮವೇಷ ಸ್ಪರ್ಧೆ

Suddi Udaya

ಬಡಗಕಾರಂದೂರು ಕಟ್ಟೂರು ಸರಕಾರಿ ಜಾಗದಲ್ಲಿ ಕಾಣಿಸಿಕೊಂಡ ಬೆಂಕಿ : ಬೆಂಕಿ ನಂದಿಸಿದ ಅಗ್ನಿ ಶಾಮಕ ದಳ

Suddi Udaya

ಮಿತ್ತಬಾಗಿಲು:ಹರ್ಝತ್ ಸೈದಾನಿ ಬೀಬಿ ದರ್ಗಾದಲ್ಲಿ ಮಾಸಿಕ 9 ನೇ ಸ್ವಲಾತ್ ಕಾರ್ಯಕ್ರಮ

Suddi Udaya

ಕೊಕ್ಕಡ: ಸೌತಡ್ಕ ನಿವಾಸಿ ಸಿರಾಜುದ್ದೀನ್ ನಿಧನ

Suddi Udaya

ದ.ಕ ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ಸದಸ್ಯರಾಗಿ ಕೆ.ಎಮ್ ಅಬ್ದುಲ್‌ ಕರೀಮ್ ಹಾಗೂ ಜಯರಾಮ್ ಅಲಂಗಾರು ಆಯ್ಕೆ

Suddi Udaya
error: Content is protected !!