25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ: ಅನುಗ್ರಹ ಆಂ.ಮಾ. ಪ್ರೌಢಶಾಲೆಯಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ದುಷ್ಪರಿಣಾಮಗಳ ಮಾಹಿತಿ ಕಾರ್ಯಾಗಾರ

ಉಜಿರೆ: ಮಾದಕ ವಸ್ತು ವಿರೋಧಿ ದಿನದ ಪ್ರಯುಕ್ತ ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳು ಹಾಗೂ ಅದರ ದುಷ್ಪರಿಣಾಮಗಳು ಎಂಬ ವಿಷಯದ ಬಗ್ಗೆ ಜು. 18 ರಂದು ಅನುಗ್ರಹ ಶಾಲಾ ಸಭಾಂಗಣದಲ್ಲಿ ಮಾಹಿತಿ ಕಾರ್ಯಗಾರವನ್ನುಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ವಂ.ಫಾ| ವಿಜಯ್ ಲೋಬೊ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಾದಕ ವಸ್ತುಗಳು ಹವ್ಯಾಸವಾಗಿ ಹೇಗೆ ಚಟವಾಗಿ ಮಾರ್ಪಾಡುತ್ತಿದೆ ಎಂಬುದರ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ವಿಜಯಕುಮಾರ್ ರೈ ಕಾನ್ಸ್ಟೇಬಲ್ ವೃತ್ತಕಚೇರಿ ಬೆಳ್ತಂಗಡಿ ಇವರು, ಮಾದಕ ವಸ್ತುಗಳು ಎಂದರೇನು? ಅಪ್ರಾಪ್ತ ವಯಸ್ಕರು ಹೇಗೆ ಇದಕ್ಕೆ ಬಲಿಯಾಗುತ್ತಿದ್ದಾರೆ? ಹಾಗೂ ಇದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಪ್ರಶಾಂತ್ ಹಾಗೂ ಸಂತೋಷ್ ಇವರು ಉಪಸ್ಥಿತರಿದ್ದರು. ಸಹ ಶಿಕ್ಷಕ ಗಣೇಶ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ಧನ್ಯವಾದಗಳನ್ನುಅರ್ಪಿಸಿದರು.

Related posts

ಖೇಲೋ ಇಂಡಿಯಾ ವೇಟ್  ಲಿಫ್ಟಿಂಗ್ ಚಾಂಪಿಯನ್ ಷಿಪ್ ನಲ್ಲಿ: ನಿಡ್ಲೆಯ ಪ್ರತ್ಯುಶ್ ರವರಿಗೆ ಕಂಚಿನ ಪದಕ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ದ.ಕ. ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯದ ನೂತನ ಪದಾಧಿಕಾರಿಗಳ ಪದಪ್ರಧಾನ ಕಾರ್ಯಕ್ರಮ

Suddi Udaya

ಬಂಟರ ಸಂಘ ಕಾವಳಕಟ್ಟೆ ವಲಯ : ಸಾಧಕರಿಗೆ ಸನ್ಮಾನ ಮತ್ತು ಮಾಹಿತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಕುಂಬಾರ ಸೇವಾ ಸಂಘ ವತಿಯಿಂದ ಆಯೋಜಿಸಿದ ಮಹಮ್ಮಾಯಿ ಟ್ರೋಫಿ -2025 ಕಾರ್ಯಕ್ರಮದಲ್ಲಿ ಚಂದ್ರಹಾಸ ಕುಂಬಾರ ಬಂದಾರು ಇವರಿಗೆ ಸಾಹಿತ್ಯ ರತ್ನ ಪ್ರಶಸ್ತಿ ಗೌರವ

Suddi Udaya

ಉಜಿರೆ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ; ಕಿರಿಯಾಡಿ ಭಜನಾ ಮಂಡಳಿ ಸದಸ್ಯರಿಂದ ಶ್ರಮದಾನ

Suddi Udaya

ಪೆರಾಲ್ದರಕಟ್ಟೆ ಸ್ವಲಾತ್ ಕಮಿಟಿ ನೂತನ ಆಡಳಿತ ಸಮಿತಿ ರಚನೆ

Suddi Udaya
error: Content is protected !!