29.8 C
ಪುತ್ತೂರು, ಬೆಳ್ತಂಗಡಿ
October 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮುಂಡಾಜೆ ಪ. ಪೂ. ಕಾಲೇಜಿನಲ್ಲಿ ‘ಆಟಿಡೊಂಜಿ ದಿನ’ ಕಾರ್ಯಕ್ರಮ

ಮುಂಡಾಜೆ : ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧೀನ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಸಂಘದ ವತಿಯಿಂದ ‘ಆಟಿಡೊಂಜಿ ದಿನ’ವನ್ನು ನಡೆಸಲಾಯಿತು.

ಕಾರ್ಯಕ್ರಮವನ್ನು ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿನಯಚಂದ್ರ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಪ್ರಖ್ಯಾತ ತುಳುರಂಗಭೂಮಿ ಕಲಾವಿದ ವಿ ಎಸ್ ಶಶಿಧರ್ ದೇವಾಡಿಗ ನೆಲ್ಲಿಕಾರು ಅವರು ಆಗಮಿಸಿ ಆಟಿ ತಿಂಗಳ ವೈಜ್ಞಾನಿಕ ಹಿನ್ನಲೆ, ಮಹತ್ವ, ಹಾಗೂ ಸಂಪ್ರದಾಯಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಗೀತಾ ಮಾತನಾಡಿ ಹಿಂದಿನ ಕಾಲದ ಆಟಿ ತಿಂಗಳ ಕಷ್ಟದ ಜೀವನದ ನೆನಪುಗಳನ್ನು ಹಂಚಿಕೊಂಡರು.
ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕಿ ವಸಂತಿ ನಿರೂಪಿಸಿ, ಸಾಂಸ್ಕೃತಿಕ ಸಂಘದ ಮುಖ್ಯಸ್ಥ ಪದ್ಮನಾಭ ಬಿ ಕೆ ಸ್ವಾಗತಿಸಿ, ಇಂಗ್ಲಿಷ್ ಉಪನ್ಯಾಸಕ ಪುರುಷೋತ್ತಮ ಶೆಟ್ಟಿ ವಂದಿಸಿದರು.
ತುಳುನಾಡಿನ ಸಂಸ್ಕೃತಿ ಪರಂಪರೆಗಳನ್ನು ಬಿಂಬಿಸುವ ತುಳು ಸಾಂಸ್ಕೃತಿಕ ಕಾರ್ಯಕ್ರಮ, ವಸ್ತು ಪ್ರದರ್ಶನ, ಆಟಿ ತಿಂಗಳ ತಿನಿಸುಗಳ ಪ್ರದರ್ಶನ ಹಾಗೂ ಆಟಿಯ ಭೋಜನವು ಕಾರ್ಯಕ್ರಮದ ವಿಶೇಷವಾಗಿತ್ತು.

Related posts

ಎ.14 ರವರೆಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ಡೈಮಂಡ್ ಹಬ್ಬ

Suddi Udaya

ಕಡಿರುದ್ಯಾವರ: ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆಯಲ್ಲೇ ಹರಿದ ಮಳೆಯ ನೀರು

Suddi Udaya

ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ಹಿರಿಯ ನಾಗರಿಕರಿಗೆ ಸನ್ಮಾನ

Suddi Udaya

ನಾರಾವಿ ಸಂತ ಅಂತೋನಿ ಪ.ಪೂ. ಕಾಲೇಜಿಗೆ ಶೇ.93 ಫಲಿತಾಂಶ

Suddi Udaya

ಶಾಸಕರ ಅಧಿವೇಶನದ ಬಲವಾದ ಧ್ವನಿಗೆ ಅಭೂತಪೂರ್ವ ಜಯ: ಬೆಳ್ತಂಗಡಿ ಸೇರಿದಂತೆ ದ.ಕ. ಜಿಲ್ಲೆಯ 3 ತಾಲೂಕುಗಳು ಅಧಿಕೃತವಾಗಿ ‘ಬರಪೀಡಿತ ಪ್ರದೇಶ’ ಎಂದು ಘೋಷಣೆ!: ಕೃಷಿಕರ ಹಿತರಕ್ಷಣೆಗೆ ಶಾಸಕರ ನಿರಂತರ ಶ್ರಮ ಸಾಕಾರ- ಬೆಳ್ತಂಗಡಿ, ಬಂಟ್ವಾಳ ಮತ್ತು ಉಳ್ಳಾಲ ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ: ಬೆಳೆ ನಷ್ಟ ಜಂಟಿ ಸಮೀಕ್ಷೆಗೆ ಸರ್ಕಾರದಿಂದ ತಕ್ಷಣದ ಆದೇಶ: SDRF ನಿಧಿಯಿಂದ ಶೀಘ್ರವೇ ಬರ ಪರಿಹಾರ ಕಾರ್ಯಾಚರಣೆ

Suddi Udaya

ಅ.10-11: ಬಾಲಕರ ಹಾಗೂ ಬಾಲಕಿಯರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

Suddi Udaya
error: Content is protected !!