ಕೊಕ್ಕಡ: ನೆಲ್ಯಾಡಿ ಹೊಸಮಜಲು ನಿವಾಸಿ, ಕೊಕ್ಕಡ ಅಂಚೆ ಕಛೇರಿಯ ನಿವೃತ್ತ ಅಂಚೆ ಪಾಲಕ ಬಾಲಕೃಷ್ಣ(70ವ)ರವರು ಅಸೌಖ್ಯದಿಂದ ಇಂದು (ಜು. 19) ನಿಧನರಾಗಿದ್ದಾರೆ.
ಇವರು ಕೊಕ್ಕಡ ಅಂಚೆ ಕಛೇರಿಯಲ್ಲಿ ಹಲವು ವರ್ಷಗಳಿಂದ ಅಂಚೆ ಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡಿದ್ದರು. ಕೊಕ್ಕಡ ಗ್ರಾಮದಲ್ಲಿ ಪೋಸ್ಟ್ ಮ್ಯಾನ್ ಬಾಲಣ್ಣ ಎಂದೇ ಚಿರಪರಿಚಿತರಾಗಿದ್ದರು.
ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಮತ್ತು ಅಳಿಯ , ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿರುತ್ತಾರೆ.











