September 6, 2026
ವರದಿ

ಸುಬ್ರಹ್ಮಣ್ಯ ರೋಟರಿ ಹಾಗೂ ಸೀನಿಯರ್ ಚೇಂಬರ್ ವತಿಯಿಂದ ಸ್ವಚ್ಛತಾ ಅಭಿಯಾನ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ರೋಟರಿ ಕ್ಲಬ್, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆಶ್ರೀ ಸುಬ್ರಹ್ಮಣ್ಯ ಲಿಜನ್ ಹಾಗೂ ಡಾ. ರವಿ ಸಮಾಜ ಸೇವಾ ಟ್ರಸ್ಟ್ ಇವರ ಜಂಟಿ ಆಶಯದಲ್ಲಿ ಇಂದು ಕುಮಾರಧಾರ ಕುಲುಕುಂದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಜು.20ರಂದು ಕೈಗೊಳ್ಳಲಾಯಿತು.

ಕುಮಾರಧಾರ ಸೇತುವೆ ಬದಿಯಿಂದ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಮೂಲಕವಾಗಿ ಕುಲುಕುಂದ ಮುಖ್ಯ ರಸ್ತೆಯ ಇಕ್ಕಲೆಗಳಲ್ಲಿ ಹಾಗೂ ಕಾಲೋನಿ ರಸ್ತೆಯ ಪರಿಸರದಲ್ಲಿ ಇದ್ದಂತಹ ಕಸ ಕಡ್ಡಿಗಳು,ಪ್ಲಾಸ್ಟಿಕ್ ಬಾಟ್ಲುಗಳು ಪ್ಲಾಸ್ಟಿಕ್ ಚೀಲಗಳು ಹಾಗೂ ಇನ್ನಿತರ ಕೊಚ್ಚೆ ವಸ್ತುಗಳನ್ನ ಹಿಕ್ಕಿ, ಶೇಖರಿಸಿ ಇಡೀ ಪರಿಸರವನ್ನು ಸ್ವಚ್ಛಗೊಳಿಸುವ ಕೆಲಸವನ್ನು ಕೈಗೊಳ್ಳಲಾಯಿತು.

ಸೇವಾ ಕಾರ್ಯದಲ್ಲಿ ಡಾlರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ನಾಯಕರು ಹಾಗೂ ಸ್ವಯಂಸೇವಕರುಗಳು ಸಂಘ ಸಂಸ್ಥೆಯ ಸ್ವಯಂಸೇವಕರು ಭಾಗವಹಿಸಿದ್ದರು.

ರೋಟರಿ ಕ್ಲಬ್ ಅಧ್ಯಕ್ಷ ಜಯಪ್ರಕಾಶ್ ಆರ್ ಅವರು ಮಾತನಾಡುತ್ತಾ ” ಸ್ವಚ್ಛ ಪರಿಸರದ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಲೇಬೇಕು, ಕುಕ್ಕೆ ಕ್ಷೇತ್ರದಂತಹ ಪವಿತ್ರ ಕ್ಷೇತ್ರವನ್ನು ನಾವು ಸ್ವಚ್ಛತೆಯಿಂದ ಇಟ್ಟುಕೊಳ್ಳಲು ಶ್ರಮಿಸೋಣ. ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ದೇವರ ಸಾನಿಧ್ಯಇದೆ. ಆ ರೀತಿಯಾಗಿ ನಾವೆಲ್ಲರೂ ದೇವರ ಸೇವೆಯನ್ನು ನಿರಂತರವಾಗಿ ಮಾಡೋಣ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಮಾಜ ಸೇವ ಟ್ರಸ್ಟ್ ನ ಮುಖ್ಯಸ್ಥರಾದ ಡಾl ರವಿ ಕಕ್ಕೆಪಧವು, ಸೀನಿಯರ್ ಚೇಂಬರ್ ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ, ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಜಯಪ್ರಕಾಶ್, ಸೀನರ್ ಚೇಂಬರ್ ಕಾರ್ಯದರ್ಶಿ ಹಾಗೂ ರೋಟರಿ ಪೂರ್ವ ಅಧ್ಯಕ್ಷ ಗೋಪಾಲ ಎಣ್ಣೆಮಜಲ್ ಮತ್ತಿತರರು ಉಪಸ್ಥಿತರಿದ್ದರು.

Related posts

ನಿಡ್ಲೆ: ಸಿಡಿಲು ಬಡಿದು ಗಾಣಂತಿ ರಾಜೇಂದ್ರ ಗೌಡರವರ ಪಂಪು ಶೆಡ್, ಬೋರ್ ಪಂಪು ಸಹಿತ ಮನೆಗೆ ಹಾನಿ

Suddi Udaya

ತೆಕ್ಕಾರು : ಸಿಡಿಲು ಬಡಿದು ಮನೆಗೆ ಹಾನಿ

Suddi Udaya

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಉದ್ಯಮಶೀಲತಾಭಿವೃದ್ಧಿ ತರಬೇತಿಯ ಸಮಾರೋಪ

Suddi Udaya

ವೇಣೂರು : ಮನೆಯ ಅಂಗಳದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಸೇವಾಪ್ರತಿನಿಧಿ ಜಯಂತಿ

Suddi Udaya

ಸಬರಬೈಲು ಶಾಲಾ ಬಳಿ ಚರಂಡಿಯ ವ್ಯವಸ್ಥೆ ಇಲ್ಲದೆ ಮಾರ್ಗದಲ್ಲಿ ಹರಿಯುತ್ತಿರುವ ನೀರು: ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಅಗ್ರಹ

Suddi Udaya

ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ವಂಚನೆ ಪ್ರಕರಣ:ಸೊಸೈಟಿಯಲ್ಲಿ ಎರಡು ದಿನದ ಸಿಐಡಿ ಶೋಧ ಅಂತ್ಯ

Suddi Udaya
error: Content is protected !!