25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

“ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ , ಬಿ.ವಿ.ಕೆ ಇರ್ವತ್ರಾಯ ಮೆಮೋರಿಯಲ್ ಚಾರಿಟೆಬಲ್ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಶಿಬಿರ

ಕಕ್ಕಿಂಜೆ: “ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ , ಬಿ.ವಿ.ಕೆ ಇರ್ವತ್ರಾಯ ಮೆಮೋರಿಯಲ್ ಚಾರಿಟೆಬಲ್ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಕೆಎಂಸಿ ತುರ್ತು ಚಿಕಿತ್ಸಾ ವಿಭಾಗ – ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ ಇವರ ಸಹಕಾರದೊಂದಿಗೆ, “ಪ್ರಥಮ ಚಿಕಿತ್ಸೆ (First Aid ,Basic Life Support) ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಶಿಬಿರವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಯಲು, ನೆರಿಯ ಇಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆಯ ವೈದ್ಯಕೀಯ ನಿರ್ದೇಶಕರಾದ ಡಾ‌.ಮುರಳಿಕೃಷ್ಣ ಇರ್ವತ್ರಾಯ ಮಾತನಾಡಿ ತುರ್ತು ಸಂದರ್ಭಗಳಲ್ಲಿ ಹಾಗೂ ಇನ್ನಿತರ ಅನಾರೋಗ್ಯದ ಅಥವಾ ಅನಾಹುತಗಳು ಸಂಭವಿಸುವ ಸಮಯದಲ್ಲಿ ವಿದ್ಯಾರ್ಥಿಗಳು ಜೀವ ಉಳಿಸಲು ದೈರ್ಯ ಮಾಡಬೇಕು, ಹಾಗೂ ಎದೆಗುಂದದೆ ಪ್ರಥಮ ಚಿಕಿತ್ಸೆ ನೀಡಬೇಕು, ಹೃದಯಾಘಾತ, ಪಾರ್ಶ್ವವಾಯು, ನೀರಿನಲ್ಲಿ ಮುಳುಗುವುದು, ಅಗ್ನಿ ಅವಘಡ ಹಾಗೂ ಅಪಘಾತಗಳು/ಆಘಾತ, ಹಾವು ಕಡಿತ, ನಾಯಿ ಕಡಿತ, ವಿದ್ಯುತ್ ಆಘಾತ ಮತ್ತು ಸುಟ್ಟಗಾಯಗಳು, ಸಿಡಿಲು/ಮಿಂಚು,ರಕ್ತಸ್ರಾವದ ಗಾಯಗಳು ಮುಂತಾದ ಸಂದರ್ಭಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಬಗ್ಗೆ ಇನ್ನಿತರ ತುರ್ತು ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ವಿವರಿಸಿದರು, ಹೃದಯ ಸ್ತಂಭನ ಸಂದರ್ಭದಲ್ಲಿ ಸಿಪಿ ಆರ್ ಕೊಡುವುದರ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿಯನ್ನು ನಡೆಸಿಕೊಟ್ಟರು,

ವೈದ್ಯಕೀಯ ತುರ್ತು ಪರಿಸ್ಥಿತಿಗಳು ಮತ್ತು ವಿಪತ್ತುಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ರೋಗಿಗಳನ್ನು ಅಥವಾ ಸಂತ್ರಸ್ತರನ್ನು ನಿಭಾಯಿಸಲು ಕನಿಷ್ಠ ಮೂಲಭೂತ ಜ್ಞಾನ ಅತ್ಯಗತ್ಯ, ಜೀವ ಉಳಿಸಲು ವೈದ್ಯರೇ ಆಗಬೇಕೆಂದಿಲ್ಲ ಸಾಮಾಜಿಕ ಕಳಕಳಿ ಇರುವವರು ಯಾರು ಬೇಕಾದರೂ ಈ ಕಾರ್ಯವನ್ನು ಮಾಡಬಹುದು ಎಂದರು. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಅಲ್ಬಿನ್ ಜೋಸೆಫ್, ಸಿಬ್ಬಂದಿಗಳಾದ ಗಣೇಶ್, ಮ್ಯಾಥ್ಯೂ, ಆರೀಶ್, ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್, ಹಾಗೂ ಸಹಶಿಕ್ಷಕರು ಉಪಸ್ಥಿತರಿದ್ದರು.


ಕಳೆದ ಎರಡು ತಿಂಗಳ ಅವಧಿಯಲ್ಲಿ ಇದು ಆರನೇ ತರಬೇತಿ ಶಿಬಿರವಾಗಿದ್ದು,ಇತರ ಶಾಲೆಗಳಾದ ಸೈಂಟ್ ಸಾವಿಯೊ ಶಾಲೆ ಬೆಂದ್ರಾಳ, ಸರ್ಕಾರಿ ಪ್ರೌಢಶಾಲೆ ಕಕ್ಕಿಂಜೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತೋಟತ್ತಾಡಿ, ಸೈಂಟ್ ಥೋಮಸ್ ಪ್ರೌಢಶಾಲೆ ಗಂಡಿಬಾಗಿಲು, ಕಾರುಣ್ಯ ಆಂಗ್ಲ ಮಾಧ್ಯಮ ಶಾಲೆ ಕಕ್ಕಿಂಜೆ ಸೇರಿದಂತೆ ಇತರ ಶಾಲೆಗಳನ್ನು ಒಳಗೊಂಡಿದೆ.

Related posts

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಮೂತ್ರರೋಗ ತಪಾಸಣಾ ಶಿಬಿರ

Suddi Udaya

ಪುದುವೆಟ್ಟು ಪಂ. ಉಪಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಲಕ್ಷ್ಮೀ ಯವರಿಂದ ನಾಮಪತ್ರ ಸಲ್ಲಿಕೆ

Suddi Udaya

ಬಂದಾರು ಸ.ಉ.ಪ್ರಾ ಶಾಲಾ ‘ಪ್ರತಿಭಾ ಪುರಸ್ಕಾರ’ ಸಮಾರಂಭ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಸಪ್ರಶ್ನೆ ಸ್ಪರ್ಧೆ

Suddi Udaya

ಮೊಗ್ರು ಕಡಮ್ಮಾಜೆ ಫಾರ್ಮ್ಸ್ ನಲ್ಲಿ 3 ದಿನ ನಡೆಯಲಿರುವ ಮೀನು ಮೇಳಕ್ಕೆ ಚಾಲನೆ: ವಿಶೇಷ ಆಕರ್ಷಣೆ ಮೀನಿಗೆ ಗಾಳ ಹಾಕುವ ಸ್ಪರ್ಧೆ

Suddi Udaya

ಪಡ್ಡಂದಡ್ಕ ನೂರುಲ್ ಹುಧಾ ಕೇಂದ್ರ ಮಸೀದಿ ಖತೀಬ್ ಜನಾಬ್ ಅಶ್ರಫ್ ಫೈಝಿ ಅರ್ಕಾನರವರಿಗೆ ಪವಿತ್ರ ಉಮ್ರಾ ಯಾತ್ರೆಗೆ ಬೀಳ್ಕೊಡುಗೆ

Suddi Udaya
error: Content is protected !!