July 23, 2026
ಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿ

ಜಿ.ಎಸ್.ಟಿ ನೋಟಿಸ್ ಹಿಂಪಡೆದ ರಾಜ್ಯ ಸರ್ಕಾರ: ಕಾಂಗ್ರೆಸ್ ಸರ್ಕಾರದ ತುಘಲಕ್ ನೀತಿ ಬಟಾ ಬಯಲು – ಹರೀಶ್ ಪೂಂಜ

ಬೆಳ್ತಂಗಡಿ: ಯೋಜನಾ ಬದ್ಧವಲ್ಲದ ಅವೈಜ್ಞಾನಿಕ ಗ್ಯಾರಂಟಿಗಳಿಂದ ತನ್ನ ಆಶ್ವಾಸನೆಯನ್ನು ಅನುಷ್ಠಾನಗೊಳಿಸಲೂ ಆಗದೆ ಇತ್ತ ದಿವಾಳಿಯಂಚಿಗೆ ತಲುಪಿದ ಆರ್ಥಿಕ ವ್ಯವಸ್ಥೆಯನ್ನು ವಾಮ ಮಾರ್ಗದ ಮೂಲಕ ಬೀದಿ ಬದಿಯ ವ್ಯಾಪಾರಿಗಳಿಗೆ ಜಿಎಸ್ ಟಿ ನೋಟಿಸ್ ಕಳುಹಿಸಿ ಭರ್ತಿ ಮಾಡಲು ವಿಫಲಯತ್ನ ನಡೆಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ನೋಟಿಸ್ ಅನ್ನು ಹಿಂಪಡೆದಿದ್ದನ್ನು ಗಮನಿಸಿದಾಗ ಶಾಲಾ ಪಠ್ಯಪುಸ್ತಕದಲ್ಲಿ ಓದಿದ ತುಘಲಕ್ ದರ್ಬಾರ್ ನ್ನು ನೆನಪಿಗೆ ತರುತ್ತದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರತಿಕ್ರಿಯಿಸಿದ್ದಾರೆ.

ಜಿ ಎಸ್ ಟಿ ಕಾಯ್ದೆಯ ಪ್ರಕಾರ ಹಾಲು, ತರಕಾರಿ, ಮಾಂಸ, ಹಣ್ಣಿನಂತಹ ಆಹಾರ ವಸ್ತುಗಳಿಗೆ ತೆರಿಗೆ ವಿನಾಯಿತಿ ಇದೆ ಎಂಬ ಅರಿವಿದ್ದರೂ, ಬೀದಿ ಬದಿಯ ವ್ಯಾಪಾರಿಗಳಿಗೆ ಸಣ್ಣ ವರ್ತಕರಿಗೆ ವಹಿವಾಟು ರೂ. 40 ಲಕ್ಷ ದಾಟಿದೆಂಬ ನೆಪದಲ್ಲಿ ಅವರ ಹೊಟ್ಟೆಗೆ ಹೊಡೆಯಲು ಯತ್ನಿಸಿ, ಶೇಕಡ 18ರಂತೆ ತೆರಿಗೆ, ಬಡ್ಡಿ, ದಂಡ ಇತ್ಯಾದಿಗಳನ್ನು ನಮೂದಿಸಿ ನಿಯಮ ಬಾಹಿರವಾಗಿ ನೋಟಿಸ್ ನೀಡಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿದ ನಿಜ ಬಣ್ಣ ಈಗ ರಾಜ್ಯದ ಜನತೆಯ ಮುಂದೆ ಬಟಾ ಬಯಲಾಗಿದೆ ಎಂದು ಹರೀಶ್ ಪೂಂಜ ಪತ್ರಿಕ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.

Related posts

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಜು. 24 ರಿಂದ ಮುಳಿಯ ಮಾನ್ಸೂನ್ ಧಮಾಕ: ಮುಂಗಾರಿನ ಸಂಭ್ರಮವನ್ನು ಇಮ್ಮಡಿಗೊಳಿಸಲು ಗ್ರಾಹಕರಿಗೆ ಆಕರ್ಷಕ ರಿಯಾಯಿತಿ: ಆ. 5 ಮುಳಿಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ,ಗ್ರಾಹಕರ ಸಮಾಗಮ,

Suddi Udaya

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿಯಾಗಿ ಸಮಾಜ ಸೇವಕ ಕೆ. ಮೋಹನ್ ಕುಮಾರ್ ಆಯ್ಕೆ

Suddi Udaya

ಬೆಳ್ತಂಗಡಿ : ತಾಲೂಕು ಆಶಾ ಕಾರ್ಯಕರ್ತರ ಸಭೆ

Suddi Udaya

ಬೆಳ್ತಂಗಡಿ: ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ನಾಯಕರ ಆಯ್ಕೆ

Suddi Udaya

ಗರ್ಡಾಡಿ ಸೌಭಾಗ್ಯ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ

Suddi Udaya

ಸೆ.28 : ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟ

Suddi Udaya
error: Content is protected !!