25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಎಸ್ ಡಿ ಎಮ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ

ಉಜಿರೆ: ಎಸ್ ಡಿ ಎಮ್ ಪಾಲಿಟಿಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಅಂತಿಮ ವರ್ಷದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶ್ರೀಮತಿ ಬಸವಶ್ರೀ ಪಾಟೀಲ್ ತರಬೇತುದಾರರು, ಸೀಮನ್ಸ್ ಶ್ರೇಷ್ಟತಾ ಕೇಂದ್ರ, ಎನ್ಐಟಿಕೆ ಸುರತ್ಕಲ್ ಇವರು ಆಧುನಿಕ ಪಿ ಎಲ್ ಸಿ ನಿಯಂತ್ರಕಗಳೊಂದಿಗಿನ ಸಂವಹನ ಮತ್ತು ಉದ್ಯಮ 4.0 ಮೇಲೆ ಅದರ ಪರಿಣಾಮದ ಕುರಿತಾಗಿ ವಿಶೇಷ ಉಪನ್ಯಾಸವನ್ನು ನೀಡಿದರು. ಮಾಡರ್ನ್ ಪಿ ಎಲ್ ಸಿ ಯನ್ನು ಕೈಗಾರಿಕಾ ಯಾಂತ್ರೀಕರಣದಲ್ಲಿ ಹೇಗೆ ಬಳಸಲಾಗುತ್ತದೆ ಮತ್ತು ಅವು ಕೈಗಾರಿಕಾ ಅಭಿವೃದ್ಧಿ 4.0 ಯಲ್ಲಿ ಹೇಗೆ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿಕೊಟ್ಟರು.

ವಿಘ್ನೇಶ್ ವಿ ಕಿಣಿ ಸೀಮನ್ಸ್ ಶ್ರೇಷ್ಟತಾ ಕೇಂದ್ರ, ಎನ್ಐಟಿಕೆ ಸುರತ್ಕಲ್ ಇವರು ಸಂವೇದಕಗಳು ಮತ್ತು ಆಕ್ಯೂವೇಟರ್ ಗಳು ಎಂಬ ವಿಷಯದ ಕುರಿತಾಗಿ ಉಪನ್ಯಾಸವನ್ನು ನೀಡಿದರು. ಸಂವೇದಕಗಳು ಮತ್ತು ಆಕ್ಯೂವೇಟರ್ ಗಳ ಮೂಲಗಳು, ಅವುಗಳ ಪ್ರಕಾರಗಳು, ಕಾರ್ಯಗಳು ಮತ್ತು ಆಟೋಮೇಷನ್ ಮತ್ತು ರೋಬೋಟಿಕ್ಸ್ ನಂತಹ ಕ್ಷೇತ್ರಗಳಲ್ಲಿ ನೈಜ ಪ್ರಪಂಚದ ಅನ್ವಯಿಕೆಗಳ ಬಗ್ಗೆ ತಿಳಿಸಿಕೊಟ್ಟರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕರಾದ ಅಮರೇಶ್ ಹೆಬ್ಬಾರ್ ಮತ್ತು ಶಾದ್ವಲ ಸೆಬಾಸ್ಟಿಯನ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಉಪನ್ಯಾಸಕ ಶಿವರಾಜ್ ಪಿ ಮತ್ತು ಸಾಯಿ ಚರಣ್ ಉಪಸ್ಥಿತರಿದ್ದರು.

Related posts

ವೇಣೂರು: ಕೋಮ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿದ್ದ ಶಿಲ್ಪ ಸಾವು: ಮನೆಯವರ ಪ್ರತಿಭಟನೆ

Suddi Udaya

ಜ.11: “ಆಸರೆ” ಸ್ಕಾಲರ್ ಶಿಪ್ ಪರೀಕ್ಷೆ , ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಅವಕಾಶ : ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ 2026-27ನೇ ಸಾಲಿನ ಪಿಯುಸಿ ಶಿಕ್ಷಣಕ್ಕೆ ಕುಂಭಶ್ರೀ ವಿದ್ಯಾಸಂಸ್ಥೆಯಲ್ಲಿ ಉಚಿತ ದಾಖಲಾತಿ

Suddi Udaya

ಸರಕಾರದಿಂದ ಮಂಜೂರುಗೊಂಡಿರುವ ಜಾಗವನ್ನು ಸವೆ೯ ನಡೆಸಲು ನಾಗರಿಕರ ಆಕ್ಷೇಪಣೆ: ಶಿಶಿಲ ಗ್ರಾಮಸ್ಥರಿಂದ ಉಪ್ಪಿನಂಗಡಿ ಉಪ ವಲಯಾಣ್ಯಾಧಿಕಾರಿಗೆ ಮನವಿ

Suddi Udaya

ಉಜಿರೆ ಪ್ರಗತಿ ಮಹಿಳಾ ಮಂಡಲದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

Suddi Udaya

ಬೆಳ್ತಂಗಡಿ ನ್ಯಾಯಾಲಯ ಸಂಕೀರ್ಣದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

Suddi Udaya

ಗೋವಿಂದೂರು ಫ್ರೆಂಡ್ಸ್ ಪ್ರಯಾಣಿಕರ ತಂಗುದಾಣ ಉದ್ಘಾಟನೆ

Suddi Udaya
error: Content is protected !!