32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತಣ್ಣೀರುಪಂತ: ಕಲ್ಲೇರಿ ನವಚೇತನ ತೋಟಗಾರಿಕಾ ರೈತ ಉತ್ಪಾದಕರ ಸಂಘದ ವಾರ್ಷಿಕ ಸಾಮಾನ್ಯ ಸಭೆ: ರೂ.2.26 ಕೋಟಿ ವ್ಯವಹಾರ, ರೂ.5.47 ಲಕ್ಷ ಲಾಭ

ತಣ್ಣೀರುಪಂತ: ಕಲ್ಲೇರಿ ನವಚೇತನ ತೋಟಗಾರಿಕಾ ರೈತ ಉತ್ಪಾದಕರ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಜು. 25 ರಂದು ತಣ್ಣೀರುಪಂತ ಸೇವಾ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಲಿಂಗಪ್ಪ ನಾಯ್ಕ ವಹಿಸಿ ಮಾತನಾಡಿ ರೂ. 2,26,96,647 (2.26 ಕೋಟಿ ) ವ್ಯವಹಾರ ಮಾಡಿ 547018 (5.47 ಲಕ್ಷ ) ಲಾಭಗಳಿಸಿದೆ ಎಂದರು.


ವಾರ್ಷಿಕ ವರದಿಯನ್ನು ಸಿಬ್ಬಂದಿ ನಿತಿನ್ ಕುಮಾರ್ ಮತ್ತು ಲೆಕ್ಕ ಪತ್ರ ವನ್ನು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾರಾಯಣ ಶೆಟ್ಟಿ ಸಭೆಗೆ ಮಂಡಿಸಿದರು.


ಈ ವೇಳೆ 2024 -25 ನೇ ಸಾಲಿನಲ್ಲಿ ಅತಿ ಹೆಚ್ಚು ವ್ಯವಹಾರ ಮಾಡಿದ ಹತ್ತು ಜನ ಸಂಸ್ಥೆಯ ಸದಸ್ಯರನ್ನು ಮತ್ತು ಸದಸ್ಯರೇತರ 5 ಮಂದಿಯನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಜೋರೋಮ್ ಬ್ರಗ್ಸ್, ವಾಸಪ್ಪ ಗೌಡ., ಮೋನಪ್ಪ ಗೌಡ, ಯೋಗೀಶ್ ಪೂಜಾರಿ, ಸುಬ್ರಹ್ಮಣ್ಯ ರಾವ್, ಮಂಜುನಾಥ್ ಸಾಲಿಯಾನ್, ದಯಾನಂದ. ಪಿ. ಮತ್ತು ಸದಸ್ಯರು ಮತ್ತು ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಪುರಂದರ ಗೌಡ ಎನ್‌. ಸ್ವಾಗತಿಸಿದರು. ನಿರ್ದೇಶಕರಾದ ತಿಮ್ಮಪ್ಪ ಗೌಡ ಧನ್ಯವಾದ ವಿತ್ತರು

Related posts

ಗುರುವಾಯನಕೆರೆ: ಶ್ರೀ ಲಕ್ಷ್ಮಿ ಫ್ಯಾನ್ಸಿಯಲ್ಲಿ ಚಪ್ಪಲ್ ಮೇಲೆ 10-50% ಡಿಸ್ಕೌಂಟ್ ಸೇಲ್

Suddi Udaya

ವೇಣೂರು: ಬರ್ಕಜೆ ದೆತ್ತರ ನದಿಗೆ ಸ್ನಾನಕ್ಕೆ ತೆರಳಿದ ಮೂವರು ವಿದ್ಯಾರ್ಥಿಗಳು ನೀರುಪಾಲು

Suddi Udaya

ಮುಂಡಾಜೆ ಅಂಗನವಾಡಿಗೆ ಲಯನ್ಸ್ ಕ್ಲಬ್ ನಿಂದ ಚಾಪೆ ಕೊಡುಗೆ

Suddi Udaya

ಬೆಳ್ತಂಗಡಿ : ಶ್ರೀ ಧ.ಮಂ.ಆಂ.ಮಾ. ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಹಾಗೂ ಸಂಚಾರಿ ನಿಯಮದ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ಕ್ಷುಲ್ಲಕ ವಿಚಾರಕ್ಕೆ ಯುವಕನ ಮೇಲೆ ಜಾತಿ ನಿಂದನೆ, ಹಲ್ಲೆ ಪ್ರಕರಣ : ಆರೋಪಿ ಕರುಣಾಕರ ಗೌಡನಿಗೆ ನ್ಯಾಯಾಂಗ ಬಂಧನ

Suddi Udaya

ಬೆಳ್ತಂಗಡಿ ವಕೀಲರ ಸಂಘದ ವತಿಯಿಂದ ಹಿರಿಯ ಶ್ರೇಣಿ ನ್ಯಾಯಾಧೀಶರಿಗೆ ಸ್ವಾಗತ ಸಮಾರಂಭ

Suddi Udaya
error: Content is protected !!