ಗ್ರಾಮಾಂತರ ಸುದ್ದಿಚಿತ್ರ ವರದಿ

ಪೆರಾಲ್ದರಕಟ್ಟೆ ಬದ್ರಿಯಾ ಜುಮಾ ಮಸೀದಿ ಅಂಗ ಸಂಸ್ಥೆಯಾದ ಸ್ವಲಾತ್ ಕಮಿಟಿ ಪೆರಾಲ್ದರಕಟ್ಟೆ ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಕಮಿಟಿ ರಚನೆ

ತೆಂಕಕಾರಂದೂರು: ಬದ್ರಿಯಾ ಜುಮಾ ಮಸೀದಿ ಪೆರಾಲ್ದರಕಟ್ಟೆ ಇದರ ಅಂಗ ಸಂಸ್ಥೆಯಾದ ಸ್ವಲಾತ್ ಕಮಿಟಿ ಪೆರಾಲ್ದರಕಟ್ಟೆ ಇದರ ವಾರ್ಷಿಕ ಮಹಾಸಭೆ ಜು. 25 ರಂದು ಜುಮಾ ನಮಾಝಿನ ಬಳಿಕ ಹಿದಾಯತುಲ್ ಇಸ್ಲಾಂ ಸೆಕೆಂಡರಿ ಮದರಸ ಹಾಲ್ ಪೆರಾಲ್ದರಕಟ್ಟೆಯಲ್ಲಿ ನಡೆಯಿತು.


ಖತೀಬರಾದ ಶಂಸುದ್ದೀನ್ ದಾರಿಮಿ ಇವರು ದುಹಾಃ ನೇರವೇರಿಸಿದರು. ಸ್ವಲಾತ್ ಕಮೀಟಿ ಪೆರಾಲ್ದರಕಟ್ಟೆ ಇದರ ಪ್ರದಾನ ಕಾರ್ಯದರ್ಶಿಯಾದ ಹಮೀದ್ ಬಾವಿಬಳಿ ವಾರ್ಷಿಕ ವರದಿ ವಾಚನ ಮಾಡಿದರು. ಬದ್ರಿಯಾ ಆಡಳಿತ ಸಮಿತಿಯ ಅಧ್ಯಕ್ಷ ನವಾಝ್ ಶರೀಫ್ ರವರು ಅಧ್ಯಕ್ಷತೆ ವಹಿಸಿದರು. ಎರಡು ವರ್ಷಗಳ ಅವದಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ಹಿಂದಿನ ಸ್ವಲಾತ್ ಕಮೀಟಿಯನ್ನು ಬರ್ಕಾಸ್ತುಗೊಳಿಸಿ ನೂತನ ಸ್ವಲಾತ್ ಕಮಿಟಿಗೆ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.

ಗೌರವ ಅಧ್ಯಕ್ಷರಾಗಿ ಅಬ್ದುಲ್ ಕರೀಂ ಕಾರಂದೂರು, ನೂತನ ಅಧ್ಯಕ್ಷರಾಗಿ ಹಸೈನಾರ್ ಹಸೈ ಮಂಜೊಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಹಮೀದ್ ಬಾವಿಬಳಿ, ಕೋಶಾಧಿಕಾರಿಯಾಗಿ ಬಶೀರ್ ಮಸೀದಿಬಳಿ, ಉಪಾದ್ಯಕ್ಷರಾಗಿ ಅಕ್ಬರ್ ಮಟ್ಲ, ಕಾರ್ಯದರ್ಶಿಯಾಗಿ ಶಮೀರ್ ಮಸೀದಿಬಳಿ ಹಾಗೂ ಕಾರ್ಯಕಾರಣಿ ಸದಸ್ಯರಾಗಿ ನವಾಝ್ ಶರೀಫ್ ಕಟ್ಟೆ, ಸಾದಿಕ್ ಮಸೀದಿಬಳಿ, ಶಂಸುದ್ದೀನ್ ಕಟ್ಟೆ, ಇಬ್ರಾಹಿಂ ತಮುನಾಕ ಮಂಜೊಟ್ಟಿ, ಸಿದ್ದಿಕ್ ಮಸೀದಿಬಳಿ, ಅಶ್ರಫ್ ಗುಂಡೇರಿ, ಇಕ್ಬಾಲ್ ದರ್ಖಾಸ್ ನವಾಝ್ ಮಂಜೊಟ್ಟಿಹಾಗೂ ಸುಲೈಮಾನ್ ಕಟ್ಟೆ ಆಯ್ಕೆಯಾದರು.

Related posts

ಮದ್ದಡ್ಕ ತಾಯಿ ಪಿಲಿಚಾಮುಂಡಿ ದೈವದ ವರ್ಷಾವಧಿ ನೇಮೋತ್ಸವ

Suddi Udaya

ಕಲ್ಮಂಜ: ಅಹಲ್ಯಾ ಯಾನೆ ರಮಾ ಚಿಪ್ಲೂಣ್ಕರ್ ನಿಧನ

Suddi Udaya

ಉಜಿರೆ: ಶ್ರೀ ಧ. ಮಂ. ಪಾಲಿಟೆಕ್ನಿಕ್ ಎನ್ .ಎಸ್. ಎಸ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

Suddi Udaya

ಶಾಸಕ ಹರೀಶ್ ಪೂಂಜಾರ ಮುತುವರ್ಜಿಯಿಂದ ಇಲಂತಿಲ ಪಿದಮಲೆಯಲ್ಲಿ ರಸ್ತೆ ಮಧ್ಯಭಾಗದಲ್ಲಿ ನಿರ್ಮಾಣವಾಗಿದ್ದ ಬೃಹತ್ ಗುಂಡಿಗೆ ತಾತ್ಕಾಲಿಕ ಮುಕ್ತಿ

Suddi Udaya

ಕಲಾ ಸಿಂಚನ 2025: ಅನುಗ್ರಹ ಪ್ರೌಢ ಶಾಲಾ ವಿದ್ಯಾರ್ಥಿನಿಯರಿಗೆ ಪ್ರಥಮ ಸ್ಥಾನ

Suddi Udaya

ಎ.25: ಮರೋಡಿ ದೇವಸ್ಥಾನದಲ್ಲಿ ಚಂಡಿಕಾಯಾಗ, ಮೃತ್ಯುಂಜಯ ಹೋಮ

Suddi Udaya
error: Content is protected !!