23.5 C
ಪುತ್ತೂರು, ಬೆಳ್ತಂಗಡಿ
March 7, 2026
ಸಂಘ-ಸಂಸ್ಥೆಗಳು

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

ಬೆಳ್ತಂಗಡಿ :ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಎಕ್ಸೆಲ್ ಪದವಿಪೂರ್ವ ಕಾಲೇಜು ಗುರುವಾಯನಕೆರೆ ಆಶ್ರಯದಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ ಜು. 27ರಂದು ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಎಕ್ಸೆಲ್ ಪದವಿಪೂರ್ವ ಕಾಲೇಜಿನ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ನೆರವೇರಿಸಿದರು.

ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷರಾದ ಲಯನ್ ಮುರಳಿ ಬಲಿಪ ವಹಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಶ್ರೀ ಮಂಜುನಾಥ ನಾಯ್ಕ ಇವರನ್ನು ಗೌರವಿಸಲಾಯಿತು. ಬೆಳ್ತಂಗಡಿ ಲಯನ್ಸ್ ಕ್ಲಬ್ ಸೇವಾ ಆಂದೋಲನದಲ್ಲಿ ಸಕ್ರಿಯರಾಗಿರುವ ನಿವೃತ್ತ ಸೈನಿಕರುಗಳಾದ ಲಯನ್ ಗೋಪಾಲಕೃಷ್ಣ ಕಾಂಚೋಡು, ಲಯನ್ ಎನ್.ಪಿ. ತಂಗಚ್ಚನ್, ಲಯನ್ ಮೋಹನ್ ಕೆ. ಎಚ್ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಎಕ್ಸೆಲ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಡಾ| ನವೀನ್ ಕುಮಾರ್ ಮರಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಳ್ತಂಗಡಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಲಯನ್ ಅಮಿತಾನಂದ ಹೆಗ್ಡೆ ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಲಯನ್ ವಸಂತ ಶೆಟ್ಟಿ ಶ್ರದ್ಧಾ ನಿರ್ವಹಿಸಿದರು. ಪೂರ್ವಾಧ್ಯಕ್ಷ ಲಯನ್ ನಿತ್ಯಾನಂದ ನಾವರ ವಂದಿಸಿದರು. ಲಯನ್ ಸದಸ್ಯರುಗಳಾದ ರಾಮಕೃಷ್ಣ ಗೌಡ, ಉಮೇಶ ಶೆಟ್ಟಿ, ಸುಶೀಲ ಎಸ್. ಹೆಗ್ಡೆ, ಸುರೇಶ ಶೆಟ್ಟಿ ಲ್ಯಾಲ, ದತ್ತಾಶ್ರಯ ಗೊಲ್ಲ, ಅನಂತಕೃಷ್ಣ, ಪಂಚಾಕ್ಷರಪ್ಪ, ಪ್ರವೀಣ್ ಹೆಚ್.ಎಸ್., ರಮೇಶ್, ಹನುಮಂತರಾಯ, ಹೇಮಲತಾ ಲಿಯೋ ಆಧ್ಯಕ್ಷೆ ಡಾ| ಭಾಷಿಣೆ, ಲಿಯೋ ಕಾರ್ಯದರ್ಶಿ ದೀಕ್ಷಿತ್ ಲಯನ್ಸ್ ಹಾಗೂ ಲಿಯೋ ಸದಸ್ಯರು ಸಹಕರಿಸಿದರು. ಎಕ್ಸೆಲ್ ಪಿ.ಯು.ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು

Related posts

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: 12 ನಿರ್ದೇಶಕರುಗಳ ಸ್ಥಾನಕ್ಕೆ 25 ಮಂದಿ ಕಣದಲ್ಲಿ

Suddi Udaya

ಹಳೆಕೋಟೆ ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಹೆಚ್. ಪದ್ಮ ಗೌಡ, ಉಪಾಧ್ಯಕ್ಷರಾಗಿ ಕುಶಾಲಪ್ಪ ಗೌಡ ಪೂವಾಜೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ನೂತನ ಅಧ್ಯಕ್ಷೆ ಆಶಾಲತಾ ಪ್ರಶಾಂತ್ ಮತ್ತು ತಂಡದ ಪದಪ್ರದಾನ ಸಮಾರಂಭ

Suddi Udaya

ಗುರುವಾಯನಕೆರೆ: ನಾಗರಿಕ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಕ್ಸಲೆ೦ಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿರಶ್ಮಿತಾ ಜೈನ್ ರವರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ರೆಖ್ಯ : ಶೌರ್ಯ ವಿಪತ್ತು ಸ್ವಯಂ ಸೇವಕ ತಂಡದಿಂದ ನೆಲ್ಯಡ್ಕ ಶಾಲೆಯಲ್ಲಿ ಕೈತೋಟ ನಿರ್ಮಾಣ

Suddi Udaya
error: Content is protected !!