ಧರ್ಮಸ್ಥಳ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಧರ್ಮಸ್ಥಳ ಮತ್ತು ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಸಿಪಿ ಆರ್ ಮಾಹಿತಿ ಮತ್ತು ತರಬೇತಿ ಕಾರ‍್ಯಕ್ರಮವನ್ನು ಜು.28ರಂದು ಸಂಘದ ಅಟಲ್ ಜೀ ಸಭಾ ಭವನ ಧರ್ಮಸ್ಥಳದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾರದಾ ಕ್ಲಿನಿಕ್ ಡಾ| ಸಂಧ್ಯಾ ಸುಮನ್ ನೆರವೇರಿಸಿದರು. ಕೆ.ಎಮ್.ಸಿ ಮಣಿಪಾಲ್ ಅನಿಕೇತ್ ಶೆಟ್ಟಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಪ್ರೌಢಶಾಲೆಯ ಮುಖ್ಯೋಪಾಧ್ಯಯರು ಜಯಶ್ರೀ ಜೈನ್, ಧರ್ಮಸ್ಥಳ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ಪರಿಮಳ ಭಟ್, ಮಣಿಪಾಲ್ ಆಸ್ಪತ್ರೆಯ ಚೇತನ್ ಹಾಗೂ ಧರ್ಮಸ್ಥಳ ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಪ್ರೀತಮ್ ಡಿ, ಉಪಾಧ್ಯಕ್ಷರು, ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿ, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸಿಬ್ಬಂದಿಯಾದ ಸ್ವರ್ಣ ಎಸ್.ಆರ್ ಸ್ವಾಗತಿಸಿ ಕಾರ್‍ಯಕ್ರಮ ನಿರೂಪಿಸಿದರು. ನೀಲಕಂಠ ಶೆಟ್ಟಿ ವಂದಿಸಿದರು.











