22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಾಯಿಲ: ಪಡ್ಲಾಡಿ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ: ಅಧ್ಯಕ್ಷರಾಗಿ ವಿನಯ್ ಎಂ.ಎಸ್. : ಕಾರ್ಯದರ್ಶಿಯಾಗಿ ದಿನಕರ್ ದೇವೊಟ್ಟು

ಬೆಳ್ತಂಗಡಿ: ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ಪಡ್ಲಾಡಿ ಲಾಯಿಲ ಇದರ ವಾರ್ಷಿಕ ಸಭೆಯು ಉತ್ಸಾಹಿ ಯುವಕ ಮಂಡಲ ಪಡ್ಲಾಡಿಯಲ್ಲಿ  ಜು. 27 ರಂದು  ಸಮಿತಿಯ ಅಧ್ಯಕ್ಷ ರವಿ ಚಂದ್ರ ನಾಡೆಂಜ‌ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ 2024ನೇ ಸಾಲಿನ ಕಾರ್ಯಕ್ರಮಗಳ ವರದಿಗಳನ್ನು ಕಾರ್ಯದರ್ಶಿ ಅನಿಲ್ ವಿಕ್ರಂ ಸಭೆಯ ಮುಂದಿಟ್ಟರು, ಜಮಾ ಖರ್ಚು ವಿವರಗಳನ್ನು ಕೋಶಾಧಿಕಾರಿ ಸಂತೋಷ್ ಹಿಮರಡ್ಡ ನೀಡಿದರು. ನಂತರ 2025-26ನೇ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಲಾಯಿಲ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ, ಅಧ್ಯಕ್ಷರಾಗಿ ವಿನಯ್ ಎಂ
ಎಸ್. ಪಡ್ಲಾಡಿ, ಕಾರ್ಯದರ್ಶಿಯಾಗಿ ದಿನಕರ್ ದೇವೊಟ್ಟು, ಕೋಶಾಧಿಕಾರಿಯಾಗಿ ರಾಜೇಶ್ ಅಂಕಾಜೆ , ಜೊತೆ ಕಾರ್ಯದರ್ಶಿಯಾಗಿ ವರುಣ್, ಜೊತೆ ಕೋಶಾಧಿಕಾರಿಯಾಗಿ ಪವನ್ ಇವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಆಗಸ್ಟ್ 15 ರಂದು 34 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಪಡ್ಲಾಡಿ ಶಾಲಾ ವಠಾರದಲ್ಲಿ ಮೊಸರು ಕುಡಿಕೆ ಉತ್ಸವ ಹಾಗೂ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಆಟೋಟ ಸ್ಪರ್ಧೆ ನಡೆಸುವ ಬಗ್ಗೆ ತೀರ್ಮಾನಿಸಿ  ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ  ಚರ್ಚಿಸಲಾಯಿತು. ಅಧ್ಯಕ್ಷ ವಿನಯ್ ಎಂ. ಎಸ್ ಎಲ್ಲರ ಸಹಕಾರ ಕೋರಿದರು. ಕಾರ್ಯದರ್ಶಿ ದಿನಕರ್ ಧನ್ಯವಾದವಿತ್ತರು.

Related posts

ಉಜಿರೆ ಎಸ್.ಡಿ.ಎಮ್ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಶಿಕ್ಷಕರಿಗೆ ‘ಅನುಭವ ಕಲಿಕೆ’ ಕಾರ್ಯಾಗಾರ

Suddi Udaya

ಸುದ್ದಿ ಉದಯ ವಾರಪತ್ರಿಕೆಯು ನವರಾತ್ರಿ ಹಬ್ಬದ ಪ್ರಯುಕ್ತ ಆಯೋಜಿಸಿದ “ಹೇ ಶಾರದೆ” ಫೋಟೊ ಸ್ಪರ್ಧೆಯ ಫಲಿತಾಂಶ ಪ್ರಕಟ

Suddi Udaya

ಉರುವಾಲು ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕುಣಿತಾ ಭಜನಾ ಉದ್ಘಾಟನೆ

Suddi Udaya

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ರವರಿಂದ ಕೊಯ್ಯೂರು ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಕೊಡೆ ವಿತರಣೆ

Suddi Udaya

ಜನರ ಸುರಕ್ಷಿತ ದೃಷ್ಟಿಯಿಂದ ಗುರುವಾಯನಕೆರೆ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಇನ್ನುಳಿದ ರಸ್ತೆ ಡಾಮರೀಕರಣಕ್ಕೆ ನಮ್ಮ ಪ್ರಯತ್ನ ನಿರಂತರ :ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಹೇಳಿಕೆ

Suddi Udaya

ಬೆಳ್ತಂಗಡಿ: ಬಿಎಂಎಸ್ ರಿಕ್ಷಾ ಚಾಲಕರ ಸಂಘದ ಆಪತ್ಕಾಲದ ಕ್ಷೇಮ ನಿಧಿ ಯೋಜನೆಯ 30 ನೇ ಸಹಾಯಧನ ಹಸ್ತಾಂತರ

Suddi Udaya
error: Content is protected !!