23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಕುವೆಟ್ಟು ಓಡಿಲ್ನಾಳ ಗ್ರಾಮ ಸಮಿತಿ ಆಶ್ರಯದಲ್ಲಿ ಆಟಿಡೊಂಜಿ ಕೂಟ ವಿಶೇಷ ಕಾರ್ಯಕ್ರಮ

ಕುವೆಟ್ಟು: ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಕುವೆಟ್ಟು ಓಡಿಲ್ನಾಳ ಗ್ರಾಮ ಸಮಿತಿ ಇದರ ಆಶ್ರಯದಲ್ಲಿ ಆಟಿಡೊಂಜಿ ಕೂಟ ವಿಶೇಷ ಕಾರ್ಯಕ್ರಮ ಜು 27 ರಂದು ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಕೆ ಲಲಿತಾ ಕೇದಳಿಕೆ ಇವರ ಮನೆಯಲ್ಲಿ ಜರಗಿತು.

ಬೆಳಿಗ್ಗೆ ಕೆನರಾ ಬ್ಯಾಂಕ್ ಇದರ ನಿವೃತ್ತ ಪ್ರಬಂಧಕರು ರಾಮಪ್ಪ ಎಸ್ ಪೂಜಾರಿ ಪಣೆಜಾಲು ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಶ್ರೀಮತಿ ಸುಕನ್ಯಾ ಭಗೀರಥ್ ಗುಂಪೋಳಿ ಅವರು ಚೆನ್ನೆದ ಮನೆ ಆಡುವ ಮೂಲಕ ವಿವಿಧ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಶಾoತಾ ಜೆ ಬಂಗೇರ ಇವರ ನೇತೃತ್ವದಲ್ಲಿ ಮಕ್ಕಳಿಗೆ ಮಹಿಳೆಯರಿಗೆ ಮಹನೀಯರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘ ಕುವೆಟ್ಟು ಓಡಿಲ್ನಾಳ ಗ್ರಾಮ ಸಮಿತಿ ಇದರ ಅಧ್ಯಕ್ಷ ನಾಗೇಶ್ ಅದೇಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯ ವಿಕ್ರಮ ಕಲ್ಲಾಪು ಮಾತನಾಡಿ ನಾವೆಲ್ಲರೂ ಹಿರಿಯರು ತೋರಿಸಿ ಕೊಟ್ಟ ಸoಸ್ಕ್ರತಿ ಆಚಾರ ವಿಚಾರಗಳೊoದಿಗೆ ಮುನ್ನಡೆಯಬೇಕು ಎoದರು.

ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ ಕೆ ಪ್ರಸಾದ್ ಆಟಿದ ಕೂಟ ಆಚರಣೆಯ ಮಹತ್ವದ ಬಗ್ಗೆ ತಿಳಿಸಿದರು. ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಶ್ರೀಮತಿ ಸುಮತಿ ಪ್ರಮೋದ್, ಪದ್ಮನಾಭ ಸಾಲಿಯನ್ ಮಾಲಾಡಿ ಆಗಮಿಸಿದ್ದರು. ವೇದಿಕೆಯಲ್ಲಿ ಕುವೆಟ್ಟು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಕೆ ಲಲಿತಾ ಕೇದಳಿಕೆ, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಅನೂಪ್ ಬಂಗೇರ ಉಪಸ್ಥಿತರಿದ್ದರು. ವಿಶೇಷ ಆಹ್ವಾನಿತರಾಗಿ ಪಾರೆಂಕಿ ಗ್ರಾಮದ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ವೆoಕಪ್ಪ ಪೂಜಾರಿ ಕೊಡ್ಲಕ್ಕೆ, ಗೌರವಾಧ್ಯಕ್ಷ ಯೋಗಿಶ್ ಪೂಜಾರಿ ಕಡ್ತಿಲ, ಪ್ರಧಾನ ಕಾರ್ಯದರ್ಶಿ ಶುಭಾಶ್ ಪೂಜಾರಿ ಹಾರಬೆ, ತಾಲೂಕು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕ ತರುಷ್ ಜೆ ಬಂಗೇರ, ಮಹಿಳಾ ಬಿಲ್ಲವ ವೇದಿಕೆಯ ಕಾರ್ಯದರ್ಶಿ ಶಾoಭವಿ ಪಿ ಬoಗೇರ ಆಗಮಿಸಿದ್ದರು.

ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಅತಿಥಿಗಳು ಬಹುಮಾನ ನೀಡಿದರು. ಪ್ರೀತಿಕಾ‌ ಪ್ರಾರ್ಥನೆ ಗೈದರು, ಅನೂಪ್ ಬoಗೇರ ಸ್ವಾಗತಿಸಿ, ಗ್ರಾಮ ಸಮಿತಿಯ ಗೌರವಾಧ್ಯಕ್ಷ ಚoದ್ರಶೇಖರ್ ಕೋಟ್ಯಾನ್ ಧನ್ಯವಾದ ನೀಡಿದರು. ಆನಂದ ಕೋಟ್ಯಾನ್ ಮತ್ತು ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ಆಟಿ ತಿoಗಳ ವಿಶೇಷವಾದ ಸುಮಾರು 45 ಮನೆಗಳಿಂದ ತಯಾರಿಸಿದ ತುಳು ನಾಡ ಪರoಪರೆಯ ತಿoಡಿ ತಿನಸುಗಳೊoದಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಯುವ ಬಿಲ್ಲವ ವೇದಿಕೆ ಮಹಿಳಾ ಬಿಲ್ಲವ ವೇದಿಕೆಯ ಪದಾಧಿಕಾರಿಗಳು ಸದಸ್ಯರು ಹಾಗೂ ಗೌರವ ಸಲಹೆಗಾರರು ಕಾರ್ಯಕ್ರಮದ ಯಶಸ್ಸಿಗೆ‌ ಸಹಕರಿಸಿದರು.

ವರದಿ: ಮನು ಮದ್ದಡ್ಕ

Related posts

ಎಸ್.ಡಿ.ಎಂ. ಕಾಲೇಜಿನಲ್ಲಿ ರೋವರ್ಸ್ & ರೇಂಜರ್ಸ್ ಸಂಬಂಧಿತ ‘ವಸ್ತುಪ್ರದರ್ಶನ’, ‘ಅಂತರ್ ತರಗತಿ ಸ್ಪರ್ಧೆ’ ಪ್ರಮುಕ’23 ಸಮಾರೋಪ

Suddi Udaya

ದ.ಕ ಜಿಲ್ಲಾ ಉಸ್ತುವಾರಿ ಸಚಿವರಾಗಿ ದಿನೇಶ್ ಗುಂಡೂರಾವ್ ನೇಮಕ

Suddi Udaya

ನೂತನ ಡಿವೈಎಸ್‌ಪಿ ಅವರನ್ನು ಭೇಟಿ ಮಾಡಿ ತಾಲೂಕಿಗೆ ಸ್ವಾಗತಿಸಿದ ಮುಸ್ಲಿಂ ಒಕ್ಕೂಟದ ಮುಖಂಡರು

Suddi Udaya

ಬೆಳ್ತಂಗಡಿ ‘ಶಾಂತಿಶ್ರೀ ‘ ಜೈನ ಮಹಿಳಾ ಸಮಾಜ ವತಿಯಿಂದ ‘ಆಹಾರೋತ್ಸವ ‘ ಕಾರ್ಯಕ್ರಮ

Suddi Udaya

ಅರಸಿನಮಕ್ಕಿ: ಬರಮೇಲು ನಿವಾಸಿ ನಾಗಮ್ಮ ನಿಧನ

Suddi Udaya

ಪದ್ಮಂಜ ಸಹಕಾರಿ ಸಂಘದ ರೈತ ಭವನ ಮತ್ತು ರೈತ ಗೋದಾಮು ಕಟ್ಟಡ ಉದ್ಘಾಟನೆ

Suddi Udaya
error: Content is protected !!