25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜೆಸಿಐ ಮಡಂತ್ಯಾರು ಆತಿಥ್ಯದಲ್ಲಿ ಅದ್ದೂರಿ ವ್ಯವಹಾರ ಸಮ್ಮೇಳನ 2025 – ಮೃದಂಗ

ಮಡಂತ್ಯಾರು : ಜೆಸಿಐ ಭಾರತ ವಲಯ 15ರ ವ್ಯವಹಾರ ವಿಭಾಗದ “ಮೃದಂಗ” ಸಾಧಕ ಜೇಸಿಗಳ ಸಾಧನೆಯ ತರಂಗ, ವ್ಯವಹಾರ ಸಮ್ಮೇಳನ ಜೆಸಿಐ ಮಡಂತ್ಯಾರು ಆತಿಥ್ಯದಲ್ಲಿ ಸೇಕ್ರೆಡ್ ಹಾರ್ಟ್ ಚರ್ಚ್ ಸಭಾಂಗಣ, ಮಡಂತ್ಯಾರಿನಲ್ಲಿ ಜು.27 ರಂದು ವಲಯ ವ್ಯವಹಾರ ವಿಭಾಗದ ನಿರ್ದೇಶಕರಾದ ಅಶೋಕ್ ಗುಂಡಿಯಲ್ಕೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ವಲಯ ಅಧ್ಯಕ್ಷ ಅಭಿಲಾಷ್ ಬಿ. ಎ ಕಾರ್ಯಕ್ರಮವನ್ನು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿ, ಇಂತಹ ವ್ಯವಹಾರ ಸಮ್ಮೇಳನಗಳ ಮುಖ್ಯ ರೂವಾರಿ ಜೆಸಿ ಸೆನಟರ್ ಸಂಪತ್ ಬಿ. ಸುವರ್ಣ ಎಂಬ ಮಾತನ್ನು ಹೇಳಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಸಭಾಧ್ಯಕ್ಷ ಅಶೋಕ್ ಗುಂಡಿಯಲ್ಕೆ ಮಾತನಾಡಿ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಪೂರ್ವ ರಾಷ್ಟ್ರೀಯ ನಿರ್ದೇಶಕರಾದ ಸಂಪತ್ ಬಿ ಸುವರ್ಣ ಇವರ ಸಾಧನೆಯನ್ನು ಜೇಸಿ ಆರ್ ಕೆ ಬಂಟ್ವಾಳ್ ಪರಿಚಯಿಸುವುದರೊಂದಿಗೆ ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಇವರು ಇಂತಹ ವ್ಯವಹಾರ ಸಮ್ಮೇಳನಗಳು ಪ್ರತಿ ವರ್ಷವೂ ನಡೆದು ಸಮಾಜದ ತೆರೆಮರೆಯ ಸಾಧಕರನ್ನು ಸಮಾಜಕ್ಕೆ ಪರಿಚಯಿಸಿ, ಅವರನ್ನು ಗುರುತಿಸುವಂತಹ ಕೆಲಸಗಳು ಮುಂದೆಯೂ ನಡೆಯುವಂತಾಗಲೆಂದು ಶುಭವನ್ನು ಹಾರೈಸಿದರು.

ಊರಿನ ವ್ಯವಹಾರ ಕ್ಷೇತ್ರದ ಸಾಧಕ ಯೋಗೀಶ್ ಪೂಜಾರಿ ಕಡ್ತಿಲ ಇವರಿಗೆ “ವ್ಯವಹಾರ ರತ್ನ” ಮತ್ತು ಪ್ರಶಾಂತ್ ಶೆಟ್ಟಿ ಮುಡಾಯೂರು ಇವರಿಗೆ “ಮೃದಂಗ ವ್ಯವಹಾರ ಸಮ್ಮೇಳನ ಪುರಸ್ಕಾರವನ್ನು” ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಲಾಯಿತು. ವ್ಯವಹಾರ ಸಂಬಂಧಿ ವಿಷಯಗಳ ಕುರಿತಾಗಿ ಸಂಪನ್ಮೂಲ ವ್ಯಕ್ತಿಗಳಿಂದ “ಪವರ್ ಟಾಕ್” ನಡೆಯಿತು. ಸ್ಥಳೀಯ ಡಾನ್ಸ್ ತಂಡಗಳಿಂದ ನೃತ್ಯ ಕಾರ್ಯಕ್ರಮ, JCOM Table C2C ಸಭೆಯೂ ನಡೆಯಿತು. ವಲಯದ ಮೂರು ಕಂದಾಯ ಜಿಲ್ಲೆಗಳನ್ನೊಳಗೊಂಡ ವಲಯ 15ರ 42 ಘಟಕಗಳಿಂದ ತಲಾ ಒಬ್ಬರಂತೆ ಆಯ್ಕೆಯಾದ 42 ಮಂದಿಗೆ ಸಾಧಕರಿಗೆ ಸಾಧನಾಶ್ರೀ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಯಿತು. ಜೊತೆಗೆ ವ್ಯವಹಾರ ವಿಭಾಗದಿಂದ ನಡೆಸಲ್ಪಟ್ಟ ಹಲವಾರು ಕಾರ್ಯಕ್ರಮಗಳಿಗಾಗಿ ಘಟಕ ಮನ್ನಣೆ ಪ್ರಶಸ್ತಿಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷ ಜೇಸಿ ರಂಜಿತ್ ಎಚ್. ಡಿ. ಕಾರ್ಯಕ್ರಮದ ರಾಯಬಾರಿ, ವಲಯ ಉಪಾಧ್ಯಕ್ಷ ಜೆಸಿ ಸಂತೋಷ್ ಶೆಟ್ಟಿ, ವಲಯ ಕಾರ್ಯದರ್ಶಿ ಜೆಸಿ ರವಿಚಂದ್ರ ಪಾಟಲಿ, ಉಪಾಧ್ಯಕ್ಷರಾದ ಜೆಸಿ ಸುಹಾಸ್ ಮರಿಕ್ಕೆ, ಜೆಸಿ ಪ್ರಶಾಂತ್ ಕುಮಾರ್, ಜೆಸಿ ಅನ್ವೇಶ್ ಶೆಟ್ಟಿ ಹಾಗೂ ಎಲ್ಲ ವಿಭಾಗಗಳ ವಲಯ ಅಧಿಕಾರಿ ಮಿತ್ರರು ಉಪಸ್ಥಿತರಿದ್ದರು.

ಪೂರ್ವಾಧ್ಯಕ್ಷ ತುಳಸಿದಾಸ್ ಪೈ ಮತ್ತು ಮಹಿಳಾ ಸಂಯೋಜಕಿ ಸಾಯಿಸುಮ ನಾವಡ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ, ಕಾರ್ಯದರ್ಶಿ ಆದರ್ಶ ಹಟ್ಟತ್ತೊಡಿ ಜೆಸಿವಾಣಿ ವಾಚಿಸಿ, ಜೆಸಿಐ ಮಡಂತ್ಯಾರಿನ ಅಧ್ಯಕ್ಷೆ ಅಮಿತ ಅಶೋಕ್ ಸ್ವಾಗತಿಸಿ, ಯತೀಶ್ ರೈ ಸಭಾಧ್ಯಕ್ಷರ ಪರಿಚಯ, ಸಂಜೆಯ ಸಮಾರೋಪ ಕಾರ್ಯಕ್ರಮ ಸಂಯೋಜಕ ಅಜಯ್ ಜೆ. ಶೆಟ್ಟಿ ಧನ್ಯವಾದವಿತ್ತರು.

Related posts

ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ “ತನ್’ಶೀತ್ವ್” ದ‌ಅ್‌ವಾ ಕ್ಯಾಂಪ್

Suddi Udaya

ಆಮಂತ್ರಣ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷರಾಗಿ ಶಿವಪ್ರಸಾದ್ ಅಜಿಲ

Suddi Udaya

ನಾರಾವಿ ಉದ್ಯಮಿ ಸುಂದರ ಕೋಟ್ಯಾನ್ ನಿಧನ

Suddi Udaya

ನೀರಚಿಲುಮೆ ನರ್ಸರಿಯ ಮಣ್ಣಿನ ಅಡಿಯಲ್ಲಿ ಬಿಳಿ ಬಣ್ಣದ ಉದ್ದನೆಯ 28 ಮೊಟ್ಟೆಗಳು ಪತ್ತೆ

Suddi Udaya

ಪಾರೆಂಕಿ ಶ್ರೀ ರಾಮನಗರ ಹಾರಬೆಯಲ್ಲಿ ದೈವಗಳ ವಾರ್ಷಿಕ ನೇಮೋತ್ಸವ

Suddi Udaya

ಉಜಿರೆ ಎಸ್.ಡಿ.ಎಮ್ ಸ್ನಾತಕೋತ್ತರ ಕಾಲೇಜಿನಲ್ಲಿ “ಆರೋಗ್ಯ ಸುಖಶಾಂತಿ ಮತ್ತು ಒತ್ತಡ ನಿರ್ವಹಣೆ” ಕುರಿತು ಕಾರ್ಯಾಗಾರ

Suddi Udaya
error: Content is protected !!