ಮೇಲಂತಬೆಟ್ಟು:ಬದಿನಡೆ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ಸಂಭ್ರಮದ ನಾಗರ ಪಂಚಮಿ ಆಚರಣೆಯು ಜು 29 ನಡೆಯಿತು.
ಬೆಳಿಗ್ಗೆ ಶ್ರೀ ನಾಗಬ್ರಹ್ಮ ದೇವರಿಗೆ ಕ್ಷೀರಾಭಿಷೇಕ, ಸೀಯಾಳಾಭಿಷೇಕ, ಪಂಚಾಮೃತಾಭಿಷೇಕ ಹಾಗೂ ನಾಗತಂಬಿಲ ಸೇವೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ ಬರಮೇಲು,ಕಾರ್ಯದರ್ಶಿ ಶ್ರೀಮತಿ ಮಧುರ ರಾಘವ ಅತ್ತೋಡಿ, ಕೋಶಾಧಿಕಾರಿ ಹರ್ಷ ಹೆಚ್.ಆರ್.ಪಕ್ಕಿದಕಲ, ಸದಸ್ಯರಾದ ಶ್ರೀಮತಿ ಜಯಂತಿ ಪಕ್ಕಿದಕಲ,ಗಿರೀಶ್ ಕುಮಾರ್ ಒಡ್ಯಾಣೆ,ಸೋಮಪ್ಪ ಪೂಜಾರಿ ಅಡ್ಕದಬೈಲು,ಬೋಜ ಪೂಜಾರಿ ನಡುವಡ್ಕ,ಅವಿನಾಶ್ ಕುರ್ತೋಡಿ,ಪ್ರ.ಅರ್ಚಕರಾದ ಅನಂತ ಇರ್ವತ್ರಾಯ ಹಾಗೂ ನೂರಾರು ಭಕ್ತಾಧಿಗಳು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.











