ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎಸ್ ಡಿ ಎಂ ಪಾಲಿಟೆಕ್ನಿಕ್ ನಲ್ಲಿ ಇಂಟರ್ ಪಾಲಿಟೆಕ್ನಿಕ್ ಟೆಕ್ನಿಕಲ್ ಸ್ಪರ್ಧೆ

ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ನಲ್ಲಿ ಇಂಜಿನಿಯರ್ಸ್ ದಿನಾಚರಣೆಯ ಪ್ರಯುಕ್ತ ಟೆಕ್ ಟ್ರಿಕ್ಸ್ 2025 ಜಿಲ್ಲಾ ಮಟ್ಟದ ಇಂಟರ್ ಪಾಲಿಟೆಕ್ನಿಕ್ ಟೆಕ್ನಿಕಲ್ ಸ್ಪರ್ಧೆಯು ಸೆ. 15 ರಂದು ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕುಕ್ಕೆ ಸುಬ್ರಹ್ಮಣ್ಯದ ಸ್ಪೆಷಲ್ ಸಬ್ ಡಿವಿಜನ್ ಅಸಿಸ್ಟೆಂಟ್ ಇಂಜಿನಿಯರ್ ಪ್ರಮೋದ್ ಕುಮಾರ್ ಕೆ. ಕೆ. ಉದ್ಘಾಟಿಸಿ ಮಾತನಾಡಿ ಇಂಜಿನಿಯರ್ ಕ್ಷೇತ್ರ ದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ರವರ ಸಾಧನೆ ಅಮೋಘ ಅದಕ್ಕಾಗಿ ಅವರ ಜನ್ಮ ದಿನವನ್ನು ಭಾರತ ದೇಶದಲ್ಲಿ ಮಾತ್ರ ಅಲ್ಲದೆ ಇತರ ಎರಡು ದೇಶದಲ್ಲಿ ಇಂಜಿನಿಯರ್ಸ್ ದಿನವಾಗಿ ಆಚರಣೆ ಮಾಡಲಾಗುತ್ತಿದೆ. ಅವರ ಸಾಧನೆ ಹಿಂದೆ ತತ್ವಗಳು ಸೇವಾ ರೀತಿಯಲ್ಲಿ ಮುಂದುವರಿದಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅವಕಾಶ ಸಿಕ್ಕಿದಾಗ ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ನಮ್ಮ ಬದುಕಿಗೆ ಪ್ರಯೋಜನ ಆಗುತ್ತದೆ. ಸಮಾಜದಲ್ಲಿ ಇಂಜಿನಿಯರ್ ಗಳ ಕೊಡುಗೆ ಅಪಾರ ಈಗಿನ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಂಡು ಟೆಕ್ನಿಕಲ್ ಸೇವೆ ಮಾಡಿದರೆ ಯಶಸ್ವಿ ಸಾಧಿಸಲು ಅವಕಾಶ ಇದೆ. ಇದನ್ನು ವಿದ್ಯಾರ್ಥಿ ಜೀವನದಲ್ಲಿಯೇ ಅಳವಡಿಸಿ ಕೊಳ್ಳಬೇಕು ಎಂದರು.


ಪ್ರಾಂಶುಪಾಲರಾದ ಸಂತೋಷ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ ಎಂ ವಿಶ್ವೇಶ್ವರಯ್ಯ ರವರ ಜನ್ಮ ದಿನವನ್ನು ಪ್ರತಿ ವರ್ಷ ಸೆ. 15 ರಂದು ಇಂಜಿನಿಯರ್ಸ್ ದಿನವಾಗಿ ಆಚರಣೆ ಮಾಡುತ್ತಾ ಬರುತ್ತಿದ್ದು ಮಹಾನ್ ವ್ಯಕ್ತಿ ಯಾದ ಅವರ ಜೀವನ ಚರಿತ್ರೆ, ಅವರ ಆದರ್ಶಗಳನ್ನು ತಿಳಿದಾಗ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಸಿಗುವುದು. ವಿವಿಧ ವಿಭಾಗದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಸ್ಪರ್ಧಾ ಮನೋಭಾವದೊಂದಿಗೆ ಭಾಗವಹಿಸಬೇಕು ಎಂದರು.
ಪಾಲಿಟೆಕ್ನಿಕ್ ವ್ಯವಸ್ಥಾಪಕರಾದ ಚಂದ್ರನಾಥ ಜೈನ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಮೇರಿ ಸ್ಮಿತಾ, ರಾಜೇಶ್ ಕೆ ಎ, ದಿನೇಶ್, ಶ್ರೇಯಾಂಕ್ ಜೈನ್, ತೃಪ್ತಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇಂಗ್ಲೀಷ್ ಉಪನ್ಯಾಸಕರಾದ ಶಂಕರ್ ಭಟ್ ಸ್ವಾಗತಿಸಿದರು. ರೆನಿಟಾ ಫೆರ್ನಾಂಡೀಸ್ ವಂದಿಸಿದರು. ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸ್ಪರ್ಧಿ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಜರಿದ್ದರು.

Related posts

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಕಸದಿಂದ ರಸ ಸ್ಪರ್ಧೆ

Suddi Udaya

ಲಾಯಿಲ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಡೆನ್ನಾನ ಡೆನ್ನನ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ: ಯುವವಾಹಿನಿ ಬೆಳ್ತಂಗಡಿ ಘಟಕಕ್ಕೆ ಚತುರ್ಥ ಸ್ಥಾನ

Suddi Udaya

ಲಿಂಗತ್ಯಾರು ಪ್ರದೀನ್ ದೇವಾಡಿಗರಿಗೆ ಧನ ಸಹಾಯ ಹಸ್ತಾಂತರ

Suddi Udaya

ಮೆಥಮೆಟಿಕ್ಸ್ ಒಲೆಂಪಿಯಾಡ್; ರಿಷಿಕಾ ಎಂ ಉಜಿರೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ ಪೃಥ್ವಿ ಜುವೆಲ್ಸ್ ನಲ್ಲಿ ಕಂಠಿ ಉತ್ಸವಕ್ಕೆ ಚಾಲನೆ ಹಾಗೂ ಕೃಷಿ ಸಾಧಕರಿಗೆ ” ಶ್ರೇಷ್ಠ ಕೃಷಿ ಸಾಧಕ ” ಪ್ರಶಸ್ತಿ

Suddi Udaya
error: Content is protected !!