32.9 C
ಪುತ್ತೂರು, ಬೆಳ್ತಂಗಡಿ
March 6, 2026
ಅಪರಾಧ ಸುದ್ದಿರಾಷ್ಟ್ರೀಯ ಸುದ್ದಿವರದಿ

ಮೃತದೇಹ ಹೂತು ಹಾಕಿದ ಪ್ರಕರಣ ಮೊದಲು ಗುರುತಿಸಿದ ಸ್ಥಳದಲ್ಲಿ ಮೊದಲ ದಿನದ ಕಾರ್ಯಾಚರಣೆ ಮುಕ್ತಾಯ

ಬೆಳ್ತಂಗಡಿ: ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ ಬಳಿ ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಮಿನಿ ಹಿಟಾಚಿ ಸತತ ಕಾರ್ಯಾಚರಣೆ ನಡೆಸಿದರೂ ಕಳೇಬರ ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

13 ಮಂದಿ ಪೌರಕಾರ್ಮಿಕರ ಸಹಾಯದಿಂದ ಆರಂಭದಲ್ಲಿ ಪಿಕ್ಕಾಸು, ಹಾರೆಯಲ್ಲಿ ಬೆಳಗ್ಗೆ 12.30 ಕ್ಕೆ ಆರಂಭವಾದ ಅಗೆಯುವ ಕೆಲಸ ಮಧ್ಯಾಹ್ನ 2.30 ರವರೆಗೆ ನಡೆಯಿತು. ಕಳೇಬರ ಅಲ್ಲೆಲ್ಲೂ ಸಿಗದ ಸಮಯದಲ್ಲಿ ದೂರುದಾರ ಮತ್ತಷ್ಟು ಅಗೆಯುವಂತೆ ಒತ್ತಾಯಿಸಿದರು. ಕಡೆಗೆ ತನಿಖಾಧಿಕಾರಿ ಅನುಚೇತ್ ಸೂಚನೆಯಂತೆ ಮಿನಿ ಹಿಟಾಚಿ ಕರೆಸಲಾಯಿತು. ಮಧ್ಯಾಹ್ನ 3.30 ರಿಂದ ಆರಂಭವಾದ ಹಿಟಾಚಿ ಕಾರ್ಯಾಚರಣೆ ಈವರೆಗೆ ನಿಂತಿಲ್ಲ. ನಿರಂತರ ಕಾರ್ಯಾಚರಣೆಯಿಂದ ಹೊಂಡದ ರೂಪವಾಗಿದೆ.

ಅನಾಮಿಕ ಗುರುತಿಸಿದ ಮೊದಲ ಸ್ಥಳದಲ್ಲೇ ಕಳೇಬರ ಸಿಗದಿರುವುದು, ಜತೆಗೆ ಮಳೆಯಿಂದಾಗಿ ಹೊಂಡದಲ್ಲಿ ಒರತೆ ನೀರು ತುಂಬುತ್ತಿರುವುದರಿಂದ ಕಾರ್ಯಾಚರಣೆಗೆ ತೊಡಕಾಗಿದೆ. ಕಾರ್ಯಾಚರಣೆಗೆ ಇದೀಗ ಶ್ವಾನ ದಳದ ಎಂಟ್ರಿಯಾಗಿದೆ. ಕಾರ್ಮಿಕರು ಹಾಗೂ ಹಿಟಾಚಿ ಕಾರ್ಯಾಚರಣೆ ನಡೆಸಿದರೂ ಸಿಗದ ಕಳೇಬರಹ ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಇಂದು ಒಟ್ಟು 4 -5 ಗಂಟೆಗಳ ಕಾರ್ಯಾಚರಣೆ ನಡೆಸಿದರು ಕಳೇಬರಹ ಸಿಗದೆ ಇದ್ದು ಕಾರ್ಯಾಚರಣೆಗೆ ಮೊದಲ ಹಿನ್ನಡೆಯಾಗಿದ್ದು ಇಂದಿನ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

Related posts

ನಾರಾವಿ ವರ್ಗಾವಣೆಗೊಂಡ ಪ್ರಾಂಶುಪಾಲರಿಗೆ ಬೀಳ್ಕೊಡುಗೆ

Suddi Udaya

ಮಾಜಿ ಶಾಸಕ ಕೆ. ವಸಂತ ಬಂಗೇರ ರವರಿಗೆ ಅಂತಿಮ ನಮನ ಸಲ್ಲಿಸಿದ ಮಾಜಿ ಸಚಿವ ಕೆ. ಗಂಗಾಧರ ಗೌಡ

Suddi Udaya

ಕಾಜೂರು ಮಹಿಳಾ ಶರೀಅತ್ ಕಾಲೇಜು ಪದವಿ ಪ್ರದಾನ ಸಮಾರಂಭ: 14 ಮಂದಿಗೆ ‘ಅರ್ರಾಹಿಮ’ ಪದವಿ ಪ್ರದಾನ

Suddi Udaya

ಉಜಿರೆ: ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ ಗುಡ್ಡಗಾಡು ಓಟ

Suddi Udaya

ಗುರುವಾಯನಕೆರೆ: ಅನಾರೋಗ್ಯದಿಂದ ಬಳಲುತ್ತಿರುವ ಆಟೋ ಚಾಲಕ ರಾಜೇಶ್ ಪೂಜಾರಿಯವರಿಗೆ ಕುವೆಟ್ಟು ಬಿಜೆಪಿ ಶಕ್ತಿ ಕೇಂದ್ರ ಹಾಗೂ ಸಾಯಿರಾಮ್ ಫ್ರೆಂಡ್ಸ್ ಶಕ್ತಿನಗರ ವತಿಯಿಂದ ರೂ. 25 ಸಾವಿರ ವೈದ್ಯಕೀಯ ನೆರವು ಹಸ್ತಾಂತರ

Suddi Udaya

ತಾಲೂಕು ಹಬ್ಬಗಳ ಆಚರಣೆ ಸಮಿತಿಯಿಂದ ಡಾ|| ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ

Suddi Udaya
error: Content is protected !!