September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾರಾವಿ ವರ್ಗಾವಣೆಗೊಂಡ ಪ್ರಾಂಶುಪಾಲರಿಗೆ ಬೀಳ್ಕೊಡುಗೆ

ನಾರಾವಿ: ಸಂತ ಅಂತೋನಿ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪ್ರಾಂಶುಪಾಲರಾಗಿ ಸೇವೆಗೈದ ವಂ.ಡಾ. ಆಲ್ವಿನ್ ಸೆರಾವೋ ರವರಿಗೆ ಬೀಳ್ಕೊಡುಗೆ ಸಮಾರಂಭ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ. ಸ್ವಾ. ಜೆರೋಮ್ ಡಿ’ಸೋಜ ಅವರು ಪ್ರಾಂಶುಪಾಲರಾದ ವಂ.ಡಾ.ಆಲ್ವಿನ್ ಸೆರಾವೋ ಅವರ ಸರಳತೆ, ಮಾನವೀಯ ಗುಣಗಳನ್ನು ಪ್ರಶಂಸಿಸಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಸ್ವಾ. ವಾಲ್ಟರ್ ಡಿ’ಮೆಲ್ಲೊ ಭಾಗವಹಿಸಿದ್ದರು.

ವೇದಿಕೆಯಲ್ಲಿ ಉಪಪ್ರಾಂಶುಪಾಲ ಸಂತೋಷ್ ಸಲ್ದಾನ, ಸಂತ ಅಂತೋನಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂಜಯ್ ಮಿರಾಂದ, ಕಾರ್ಯದರ್ಶಿ ಎವ್ಜಿನ್ ರೋಡ್ರಿಗಸ್, ಸಿಸ್ಟೆರ್ ಪ್ರೆಸಿಲ್ಲಾ ಅಂದ್ರಾದೆ, ನಾರಾವಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲಕೃಷ್ಣ ತುಳುಪುಳೆ, ಸಂತಪಾವ್ಲರ ಇಂಗ್ಲಿಷ್ ಮೀಡಿಯಂ ಶಾಲೆಯ ಮುಖ್ಯಸ್ಥ ರಿಚರ್ಡ್ ಮೋರಸ್, ಸಂತಾಪಾವ್ಲರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಸೋಫಿಯಾ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಕನ್ನಡ ಉಪನ್ಯಾಸಕ ದಿನೇಶ್ ಬಿ ಕೆ ಬಳಂಜ ಪ್ರಾಂಶುಪಾಲರೊಂದಿಗಿನ ಒಡನಾಟವನ್ನು ಹಂಚಿಕೊಂಡರು. ಪೋಷಕರ ಪರವಾಗಿ ಶ್ರೀರಂಗಮಯ್ಯ ಮಾತನಾಡಿದರು. ಉಪಪ್ರಾಂಶುಪಾಲ ಸಂತೋಷ್ ಸಲ್ಡಾನ ಸ್ವಾಗತಿಸಿದರು. ಉಪನ್ಯಾಸಕಿ ಶ್ರೀಮತಿ ಸೋನಿಯಾ ಡಿ’ಸೋಜಾ ವಂದಿಸಿದರು. ಪದವಿ ಕಾಲೇಜಿನ ಉಪನ್ಯಾಸಕ ಅವಿಲ್ ಮೋರಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮಕ್ಕೆ ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸಹಕಾರವಿತ್ತರು.

Related posts

ಸೇವಾಭಾರತಿ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರೀಮತಿ ವಸಂತಿ ಗೌಡ ಇವರಿಂದ ದೇಣಿಗೆ

Suddi Udaya

ಬೆಳಾಲು ಡಿ.ಪಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಹಾಗೂ ವಲಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಕಾರ್ಯಕ್ರಮ

Suddi Udaya

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ

Suddi Udaya

ಕಳೆಂಜ: ಕಟ್ಟಿಗೆ ದಾಸ್ತಾನು ಕಟ್ಟಡಕ್ಕೆ ಉರುಳಿದ ಮರ: ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ತೆರವು

Suddi Udaya

ಧರ್ಮಸ್ಥಳ ಸೊಸೈಟಿಗೆ ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ

Suddi Udaya

ಆ.5: ಸಚಿವ ಯು ಟಿ ಖಾದರ್ ಬೆಳ್ತಂಗಡಿ ಪ್ರವಾಸ

Suddi Udaya
error: Content is protected !!