23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಅಡಿಕೆ ವರ್ತಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಅಡಿಕೆ ವರ್ತಕರ ಜಿಲ್ಲಾ ಸಂಘಟನೆಗೆ ಪೂರ್ವಭಾವಿ ಸಭೆ

ಬೆಳ್ತಂಗಡಿ ತಾಲೂಕು ಅಡಿಕೆ ವರ್ತಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಅಡಿಕೆ ವರ್ತಕರ ಜಿಲ್ಲಾ ಸಂಘಟನೆಗೆ ಪೂರ್ವಭಾವಿ ಸಭೆ ಬೆಳ್ತಂಗಡಿ ಎಪಿಎಂಸಿ ಪ್ರಾಂಗಣದಲ್ಲಿ ನಡೆಯಿತು.

ವರ್ತಕರ ಜಿಲ್ಲಾ ಸಂಘದ ಮುಖಂಡ ಪ್ರಶಾಂತ್ ಶೆಟ್ಟಿ ಮಡಂತ್ಯಾರು ಮಾತನಾಡಿ, ಇಲಾಖೆಗಳ ಕಾನೂನು ಚೌಕಟ್ಟು ಮೀರಿದ ಕ್ರಮಗಳಿಗೆ ಭಯ ಪಡುವ ಅಗತ್ಯವಿಲ್ಲ ಮತ್ತು ವ್ಯವಸ್ಥೆಯಲ್ಲಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸಂಘಟಿತವಾಗಿ ಪ್ರಶ್ನೆ ಮಾಡೋಣ ಎಂದರು.


ಜಿಲ್ಲಾ ಮುಂದಾಳು ರೂಪೇಶ್ ರೈ, ಬೆಳ್ತಂಗಡಿ ತಾಲೂಕು ಅಡಿಕೆ ವರ್ತಕರ ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ಸವಣಾಲು ಭಾಗವಹಿಸಿದ್ದರು.
ಬೆಳ್ತಂಗಡಿ ತಾಲೂಕು ಅಡಿಕೆ ವರ್ತಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ನೂತನ ಅಧ್ಯಕ್ಷರಾಗಿ ಹೇಮಾಶಂಕರ ಶೆಟ್ಟಿ , ಕಾರ್ಯದರ್ಶಿಯಾಗಿ ಸಂಶುದ್ದೀನ್ ಜಾರಿಗೆಬೈಲ್ , ಕೋಶಾಧಿಕಾರಿಯಾಗಿ ಶರತ್ ಮಡಂತ್ಯಾರು, ಉಪಾಧ್ಯಕ್ಷರಾಗಿ ನೀಲೇಶ್ ಕುಮಾರ್ ಪಟೇಲ್ ಮತ್ತು ಅಶ್ರಫ್ ಎಂ.ಹೆಚ್. ಹಾಗೂ ಜತೆ ಕಾರ್ಯದರ್ಶಿಯಾಗಿ ಯಾಕುಬ್ ಎಂ.ಪಿ. ಉರುವಾಲು ಪದವು ಮತ್ತು ಹಕೀಂ ಆಯ್ಕೆಗೊಂಡರು.
ಸುದೀಪ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಸಿರು.

Related posts

ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಪುದುವೆಟ್ಟು: ಮಡ್ಯದಿಂದ ಹೊಳೆಯವರೆಗಿನ ಪಂಚಾಯತ್ ರಸ್ತೆಯ ಅತಿಕ್ರಮಣ: ಜೆಸಿಬಿ ಮೂಲಕ ಪೊಲೀಸ್ ರಕ್ಷಣೆಯೊಂದಿಗೆ ಗ್ರಾಮ ಪಂಚಾಯತ್ ನಿಂದ ತೆರವು ಕಾರ್ಯ

Suddi Udaya

ಬಂದಾರು, ಮೈರೋಳ್ತಡ್ಕ, ಪೆರ್ಲ -ಬೈಪಾಡಿ, ಕುಂಟಾಲಪಲ್ಕೆ, ಮೊಗ್ರು, ಪದ್ಮುಂಜ ಪ್ರದೇಶದಲ್ಲಿ ಏರ್ ಟೆಲ್ ನೆಟ್ವರ್ಕ್ ಸಮಸ್ಯೆ: ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಪ್ರತಿಭಟನೆ ಬಗ್ಗೆ ಸ್ಥಳೀಯರ ಆಗ್ರಹ

Suddi Udaya

ಉರುವಾಲು: ಹಲೇಜಿ ನಿವಾಸಿ ಮೋನಪ್ಪ ಮೂಲ್ಯ ನಿಧನ

Suddi Udaya

ಭಾರೀ ಮಳೆಗೆ ಉಜಿರೆ ಶಿವಾಜಿನಗರದಲ್ಲಿ ಗುಡ್ಡ ಕುಸಿತ: ಮನೆಯವರು ಅಪಾಯದಿಂದ ಪಾರು

Suddi Udaya

ಎಸ್.ಡಿ.ಎಂ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಶಿಕ್ಷಣ, ಸಂಶೋಧನೆ, ಮತ್ತು ಉದ್ಯಮಶೀಲತೆ ಕಾರ್ಯಾಗಾರ

Suddi Udaya
error: Content is protected !!