September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಂದಾರು, ಮೈರೋಳ್ತಡ್ಕ, ಪೆರ್ಲ -ಬೈಪಾಡಿ, ಕುಂಟಾಲಪಲ್ಕೆ, ಮೊಗ್ರು, ಪದ್ಮುಂಜ ಪ್ರದೇಶದಲ್ಲಿ ಏರ್ ಟೆಲ್ ನೆಟ್ವರ್ಕ್ ಸಮಸ್ಯೆ: ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಪ್ರತಿಭಟನೆ ಬಗ್ಗೆ ಸ್ಥಳೀಯರ ಆಗ್ರಹ

ಬಂದಾರು: ಬಂದಾರು ಗ್ರಾಮದ ಮೈರೋಳ್ತಡ್ಕ, ಪಾಣೆಕಲ್ಲು ನಲ್ಲಿ ಏರ್ ಟೆಲ್ ಟವರ್ ಇದ್ದು ಮೈರೋಳ್ತಡ್ಕ, ಪಾಣೆಕಲ್ಲು, ಕುಂಟಾಲಪಲ್ಕೆ, ಕಡೆಗಳಲ್ಲಿ ಹಾಗೂ ಮೊಗ್ರು ಗ್ರಾಮದ ಮುರದಲ್ಲಿ ಏರ್ ಟೆಲ್, ಬಿ.ಎಸ್.ಎನ್ ಎಲ್ ಟವರ್ ಇದ್ದು ಮೊಗ್ರು, ಮುಗೇರಡ್ಕ, ಉಂತನಾಜೆ
ಕಣಿಯೂರು ಗ್ರಾಮದ ಪದ್ಮುಂಜ, ವ್ಯಾಪ್ತಿಯಲ್ಲಿ ನೆಟ್ ವರ್ಕ್ ಸಿಗದೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ವಿದ್ಯಾರ್ಥಿಗಳಿಗೆ, ವರ್ಕ್ ಫ್ರಮ್ ಹೋಂ ಉದ್ಯೋಗಿಗಳಿಗೆ, ದೈನದಿಂದ ವ್ಯವಹಾರಕ್ಕೆ ಶಾಲೆಗಳಲ್ಲಿ, ಯಾವುದೇ ಸಂದರ್ಭದಲ್ಲಿ ಸರಿಯಾಗಿ ನೆಟ್ ವರ್ಕ್ ಸಿಗದೆ ತುಂಬಾ ಅಯೋಮಯ ಪರಿಸ್ಥಿತಿ ನಿರ್ಮಾಣವಾಗಿದೆ.

ಟವರ್ ಇರುವ ಜಾಗದಿಂದ 1 ಕಿ.ಮೀ ದೂರಕ್ಕೆ ನೆಟ್ವರ್ಕ್ ಸಿಗುವುದಿಲ್ಲ ಸ್ವತಃ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಮನವರಿಕೆ ಮಾಡಿ ಕೊಟ್ಟರೂ ಏನೂ ಪ್ರಯೋಜನವಿಲ್ಲ. ಈ ಒಂದು ಟವರಿನ ಕಾರ್ಯರೂಪ ಸರಿಪಡಿಸಿ ಸಾರ್ವಜನಿಕರ ಉಪಯೋಗಕ್ಕೆ ಬರುವ ಹಾಗೆ ಮಾಡಿಕೊಡಬೇಕಾಗಿ ಸ್ಥಳೀಯ ನಿವಾಸಿ ಮುಹಮ್ಮದ್ ರವರು ತಿಳಿಸಿದ್ದಾರೆ.

ಆದಷ್ಟು ಬೇಗ ನೆಟ್ವರ್ಕ್ ಸಮಸ್ಯೆ ಸರಿ ಮಾಡದೇ ಇದ್ದಲ್ಲಿ ಪ್ರತಿಭಟನೆ ಮಾಡುವ ಬಗ್ಗೆ ಸ್ಥಳೀಯರು ತೀರ್ಮಾನಿಸಿದ್ದಾರೆ.


Related posts

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ರಕ್ತೇಶ್ವರಿ ಗುಡಿ, ಶ್ರೀ ನಾಗದೇವರ ಕಟ್ಟೆ, ಹಾಗೂ ಶ್ರೀ ಪಂಜುರ್ಲಿ ದೈವದ ಕಟ್ಟೆಗಳಿಗೆ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಟೈಲರ್ ಅಸೋಸಿಯೇಶನ್ ವತಿಯಿಂದ ಗುರುವಾಯನಕೆರೆ ಡಾ| ವೇಣುಗೋಪಾಲ ಶರ್ಮರವರಿಗೆ ಸನ್ಮಾನ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಬೆಳಕು ಕಾರ್ಯಕ್ರಮ

Suddi Udaya

ಎಲ್.ಸಿ.ಆರ್ ವಿದ್ಯಾಸಂಸ್ಥೆಯಲ್ಲಿ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿ‌‌ ಸಂಘದ ಉದ್ಘಾಟನೆ ಹಾಗೂ ಓರಿಯೆಂಟೇಷನ್ ಕಾರ್ಯಕ್ರಮ

Suddi Udaya

ಕೊಕ್ಕಡ: ಮನೆಯಲ್ಲಿಟ್ಟ ಚಿನ್ನಾಭರಣ ಕಳ್ಳತನ

Suddi Udaya

ಭತ್ತದ ತಳಿ ಸಂರಕ್ಷಕ ದೇವರಾವ್ ಅವರಿಗೆ ಪ್ರಶಸ್ತಿ ಪ್ರದಾನ

Suddi Udaya
error: Content is protected !!