September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಾಲಾ ಕಾಲೇಜು

ಬೆಳ್ತಂಗಡಿ: ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ ಸ್ಕೌಟ್ ಗೈಡ್ ವಿಶ್ವ ಸ್ಕಾರ್ಪ್ ದಿನಾಚರಣೆ ಹಾಗೂ ಸನ್ ರೈಸ್ ದಿನಾಚರಣೆ

ಬೆಳ್ತಂಗಡಿ: ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ ಗೈಡ್ ವಿಶ್ವ ಸ್ಕಾರ್ಪ್ ದಿನಾಚರಣೆ ಹಾಗೂ ಸನ್ ರೈಸ್ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿ ಜಿಲ್ಲಾ ಸಹಾಯಕ ಆಯುಕ್ತ ಬಿ ಸೋಮಶೇಖರ್ ಶೆಟ್ಟಿ ಸ್ಕೌಟ್ ಗೈಡ್ ಸ್ಕಾರ್ಫ್ ತೊಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಸ್ಕೌಟ್ ಗೈಡ್ ಸಮಾಜದಲ್ಲಿ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದೆ ಶಿಸ್ತು, ಜವಾಬ್ದಾರಿಯುತ ಕಾರ್ಯ, ನಾಯಕತ್ವ ಗುಣ ಮಕ್ಕಳಲ್ಲಿ ಬೆಳೆಯಬೇಕು ಸಮಾಜದಲ್ಲಿ ವಿದ್ಯಾರ್ಥಿಗಳು ಯಾವ ರೀತಿ ಬಾಳಬೇಕು ಎಂಬುದನ್ನು ಸ್ಕೌಟ್ ಗೈಡ್ ನಿಂದ ಕಲಿಯಬಹುದು ಎಂದು ತಿಳಿಸಿದರು.

ಮಕ್ಕಳು ಸ್ಕೌಟ್ ಗೈಡ್ ನಿಂದ ಪಡೆದ ಅನುಭವ, ಸ್ಕೌಟ್ ಗೈಡ್‌ನೊಂದಿಗೆ ತನ್ನ ಪ್ರಯಾಣ ಇದರ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಸ್ಕೌಟ್ಸ್ ಗೈಡ್ಸ್ ಪ್ರತಿಜ್ಞೆಯನ್ನು ಪುನರ್ ಉಚ್ಚರಿಸಿದರು. ಕಿರು ನಾಟಕದ ಮೂಲಕ ಹಿರಿಯರಿಗೆ ಸಹಾಯ ಮಾಡುವ ಸಮುದಾಯ ಚಟುವಟಿಕೆಯ ಬಗ್ಗೆ ಮನವರಿಕೆ ಮಾಡಲಾಯಿತು.

ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ಹೇಮಲತಾ ಎಂ.ಆರ್. ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿಯ ಕಾರ್ಯದರ್ಶಿ ಪ್ರಮೀಳಾ ಪೂಜಾರಿ ಉಪಸ್ಥಿತರಿದ್ದರು.

ಗೈಡ್ ವಿದ್ಯಾರ್ಥಿಗಳಾದ ಪ್ರಾಪ್ತಿ ವಿ. ಶೆಟ್ಟಿ ನಿರೂಪಿಸಿ, ಸಂಜನಾ ಸ್ವಾಗತಿಸಿ, ಪರಿಣಿತ ಧನ್ಯವಾದವಿತ್ತರು.
ಸ್ಕೌಟ್ ಗೈಡ್ ಶಿಕ್ಷಕರುಗಳಾದ ನೀತಾ ಕೆ.ಎಸ್.,ಕಾರುಣ್ಯ, ಗೀತ ಪಿ, ಜಯಲಕ್ಷ್ಮಿ, ಮಂಜುನಾಥ, ಜಯರಾಮ್, ರಮ್ಯಾ, ಪ್ರಮೀಳಾ ಎನ್ ಸಹಕರಿಸಿದರು.

Related posts

ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ಬೆಳ್ತಂಗಡಿ ಕ್ಷೇತ್ರದ ಸಾಮಾನ್ಯ ಸಭೆ

Suddi Udaya

ಕಬಡ್ಡಿ ಪಂದ್ಯಾಟ: ಕುವೆಟ್ಟು ಸ.ಉ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ

Suddi Udaya

ಬೆಳ್ತಂಗಡಿಯಲ್ಲಿ ಶ್ರೀ ಸಾಯಿ ರೇಕಿ ತರಬೇತಿ ಕೇಂದ್ರ ಶುಭಾರಂಭ

Suddi Udaya

ಉಜಿರೆ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನ ಎನ್ ಎಸ್ ಎಸ್ ಘಟಕದಿಂದ ಕೃಷಿ ಮಾಹಿತಿ ಮತ್ತು ಕೆಸರು ಗದ್ದೆ ಕೂಟ ಕಾರ್ಯಕ್ರಮ

Suddi Udaya

ತೋಟತ್ತಾಡಿ ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘ ಮಹಿಳಾ ಬಿಲ್ಲವ ವೇದಿಕೆಯ ನೂತನ ಸಮಿತಿ ರಚನೆ

Suddi Udaya

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಮಡಂತ್ಯಾರಿನಲ್ಲಿ ಉಚಿತ ಯೋಗ ಶಿಕ್ಷಣ ಶಿಬಿರ

Suddi Udaya
error: Content is protected !!