September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ಓಬಿಸಿ ಮೋರ್ಚಾದ ಸಭೆ

ಬೆಳ್ತಂಗಡಿ: ಓಬಿಸಿ ಮೋರ್ಚಾದ ಸಭೆ ತಾಲೂಕು ಓಬಿಸಿ ಮೋರ್ಚಾದ ಅಧ್ಯಕ್ಷ ರತ್ನಾಕರ ಬುಣ್ಣನ್ ಅಧ್ಯಕ್ಷತೆಯಲ್ಲಿ ಆ.೧ರಂದು ನಡೆಯಿತು.

ಓಬಿಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೆಳ್ತಂಗಡಿ ಓಬಿಸಿ ಮೋರ್ಚಾದ ವೀಕ್ಷಕ ಮೋನಪ್ಪ ದೇವಸ್ಯ ಓಬಿಸಿ ಮೋರ್ಚಾದ ಕಾರ್ಯ ಚಟುವಟಿಕೆ ಬಗ್ಗೆ ಹಾಗೂ ಓಬಿಸಿ ಮೋರ್ಚಾದ ಸಂಘಟನೆಯ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ್ ಕಲ್ಮಂಜ ತಾಲೂಕು ಓಬಿಸಿ ಮೋರ್ಚಾದ ಪದಾಧಿಕಾರಿಗಳ ಸಭೆಗಳ ಬಗ್ಗೆ ಮಾಹಿತಿ ನೀಡಿದರು.

ತಾಲೂಕು ಒಬಿಸಿ ಮೋರ್ಚಾದ ಪ್ರಭಾರಿ ಚಂದ್ರಶೇಖರ್ ಪೆನ್ನೆ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಶಕ್ತಿಕೇಂದ್ರಗಳಿಂದ ಒಬ್ಬೊಬ್ಬರನ್ನು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರನ್ನು ಓಬಿಸಿ ಮೋರ್ಚಾಕ್ಕೆ ಸಂಘಟನೆಯ ದೃಷ್ಟಿಯಿಂದ ಸೇರಿಸಿಕೊಳ್ಳುವಂತೆ ಮಾಹಿತಿ ನೀಡಿದರು.

ಮಂಡಲದ ಪ್ರಭಾರಿಗಳಾದ ಶ್ರೀಮತಿ ಅಶ್ವಿನಿ ನಾಯಕ್ ಸಂಘಟನೆ ದೃಷ್ಟಿಯಿಂದ ಮುಂದಿನ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ತಾಲೂಕು ಓಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುಧೀರ್ ಭಂಡಾರಿ ವೇಣೂರು, ವಿಠಲ ಆಚಾರ್ಯ ಗುರುವಾಯನಕೆರೆ ಹಾಗೂ ಓಬಿಸಿ ಮೋರ್ಚಾದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು

ಪ್ರಧಾನ ಕಾರ್ಯದರ್ಶಿ ಸುಧೀರ್ ಭಂಡಾರಿ ಸ್ವಾಗತಿಸಿ, ಉಪಾಧ್ಯಕ್ಷ ರಾಜೇಶ್ ಮೂಡುಕೋಡಿ ವಂದಿಸಿದರು.

Related posts

ಶ್ರೀ ದುರ್ಗಾ ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್‌ನಲ್ಲಿ ಖರೀದಿಗೆ ವಿಶೇಷ ಡಿಸ್ಕೌಂಟ್

Suddi Udaya

ಬಳಂಜ: ಆನೆಪಿಲ ಚಂದ್ರಾವತಿಯಮ್ಮ ಅಸೌಖ್ಯದಿಂದ ನಿಧನ

Suddi Udaya

ಬೆಳ್ತಂಗಡಿ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ಉಜಿರೆ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯ ಮಾಹಿತಿ ಕಾರ್ಯಗಾರ

Suddi Udaya

ಬೆಳ್ತಂಗಡಿ: ಮಠದಬೈಲು ಕಾಲು ಸಂಕ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

Suddi Udaya

ಡಿ 13-14: ಬಳಂಜ ಶಾಲೆಗೆ ಅಮೃತ ಮಹೋತ್ಸವ ಸಂಭ್ರಮ, ಗುರುವಂದನೆ, 5 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ : ಪತ್ರಿಕಾಗೋಷ್ಠಿಯಲ್ಲಿ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪಿ.ಕೆ ಮಾಹಿತಿ

Suddi Udaya
error: Content is protected !!