July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ನಡ ಸ. ಪ.ಪೂ. ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

ನಡ: ಮನುಷ್ಯರಾದ ಮೇಲೆ ಎಲ್ಲವನ್ನೂ ಸಾಧಿಸುವ ಸಾಮರ್ಥ್ಯ, ಧೈರ್ಯ ಇರಬೇಕು. ಗಡಿಯಲ್ಲಿ ಚಳಿ, ಮಳೆಯನ್ನು ಲೆಕ್ಕಿಸದೆ ದೇಶ ಕಾಯುವ ಯೋಧರಿಂದಾಗಿ ನಾವು ನೆಮ್ಮದಿಯ ನಿದ್ರೆ ಮಾಡುತ್ತೇವೆ, ಸೈನಿಕರಾಗಿ ಸೇರಿ ದೇಶಸೇವೆ ಮಾಡಲು ಎಲ್ಲರೂ ಮನಸು ಮಾಡಬೇಕೆಂದು ಮಾಜಿ ವೀರ ಯೋಧ ವಿಕ್ಟರ್ ಕ್ರಾಸ್ಟಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ನಡ ಸ. ಪ. ಪೂ. ಕಾಲೇಜಿನ ಕಲ್ಪನಾ ಚಾವ್ಲಾ ರೇಂಜರ್ಸ್ ಘಟಕದ ವತಿಯಿಂದ ನಡೆಸಿದ ಕಾರ್ಗಿಲ್ ವಿಜಯ ದಿನ-೨೬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಹಿರಿಯ ಉಪನ್ಯಾಸಕಿ ಲಿಲ್ಲಿ ಪಿ.ವಿ. ಉಪಸ್ಥಿತರಿದ್ದರು.

ರೇಂಜರ್ ಶಶಿಕಲಾ ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಅವರ ಧೀರೋದಾತ್ತ ವ್ಯಕ್ತಿತ್ವವನ್ನು ವಿವರಿಸಿದರು. ರೇಂಜರ್ ಸುರಕ್ಷಿತಾ ಅತಿಥಿಗಳನ್ನು ಪರಿಚಯಿಸಿದರು. ರೇಂಜರ್ ಲೀಡರ್ ವಸಂತಿ ಪಿ. ಪ್ರಾಸ್ತಾವಿಸಿದರು. ರೇಂಜರ್ ಸುದಿಶಾ ಸ್ವಾಗತಿಸಿ, ರೇಂಜರ್ ಸಿಂಚನಾ ಕಾರ್ಯಕ್ರಮ ನಿರೂಪಿಸಿ, ರೇಂಜರ್ ಗಾಯತ್ರಿ ವಂದಿಸಿದರು.

Related posts

ಪಟ್ರಮೆ: ಚಾಲಕನ ನಿಯಂತ್ರಣ ತಪ್ಪಿ ಹೊಳೆ ಬದಿಗೆ ಬಿದ್ದ ಕಾರು

Suddi Udaya

ರಾಜ್ಯ ಸರ್ಕಾರ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಕೇವಲ 3 ತಿಂಗಳಲ್ಲಿಗ್ಯಾರಂಟಿಗಳನ್ನು, ಅನುಷ್ಠಾನಗೊಳಿಸಿದೆ:ಎಂಎಲ್ಸಿ ಹರೀಶ್ ಕುಮಾರ್

Suddi Udaya

ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ಹಿರಿಯ ನಾಗರಿಕರಿಗೆ ಸನ್ಮಾನ

Suddi Udaya

ಬೆಳ್ತಂಗಡಿ ಛೇಂಬರ್ ಆಫ್ ಕಾಮರ್ಸ್ ಇದರ ಮಾಸಿಕ ಸಭೆ

Suddi Udaya

ಬಂಗ್ಲೆಗುಡ್ಡೆಯಲ್ಲಿ ಎರಡನೇ ದಿನದ ಕಾಯಾ೯ಚರಣೆ: ಎರಡು ಶವದ ಅವಶೇಷಗಳು ಪತ್ತೆ

Suddi Udaya

ಕಲ್ಮಂಜ: ಮೃತ್ಯುಂಜಯ-ನೇತ್ರಾವತಿ ನದಿಯ ಸಂಗಮ ಸ್ಥಳದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

Suddi Udaya
error: Content is protected !!