23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿವರಾಮ ಕಾರಂತರ ಸ್ಮರಣೆ

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಳ್ತಂಗಡಿ ಘಟಕ ಇವುಗಳ ಆಶ್ರಯದಲ್ಲಿ ಜು.31 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಇಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕತರ ಉಪನ್ಯಾಸಮಾಲೆ – 3 ಇದರ ಅಡಿಯಲ್ಲಿ ಶಿವರಾಮ ಕಾರಂತರ ಸ್ಮರಣೆ ಕಾರ್ಯಕ್ರಮ ನಡೆಯಿತು.

ಪ್ರಧಾನ ಭಾಷಣಕಾರರಾಗಿ ಎಸ್ ಡಿ ಎಂ ಕಾಲೇಜು ಉಪನ್ಯಾಸಕ ಡಾ. ರಾಜೇಶ್ ಆಗಮಿಸಿ ಕಾರಂತರ ಬದುಕಿನ ವಿವಿಧ ಮಜಲುಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯದುಪತಿ ಗೌಡ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸುಕುಮಾರ್ ಜೈನ್, ಹಿರಿಯ ಉಪನ್ಯಾಸಕರಾದ ಆನಂದ ಡಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕರಾದ ಡಾ. ಗಣೇಶ್ ಭಟ್ ಹಾಗೂ ಡಾ. ಅಮೃತ ರಶ್ಮಿ ಕಾರ್ಯಕ್ರಮ ಸಂಯೋಜಿಸಿದರು. ಮನ್ವಿತಾ ಮತ್ತು ತಂಡದಿಂದ ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮವು ಕುಮಾರಿ ರಕ್ಷಾ ನಿರೂಪಿಸಿ, ಕುಮಾರಿ ಸಮಿತ ಸ್ವಾಗತಿಸಿ ಧನುಶ್ರೀ ವಂದನಾರ್ಪಣೆ ಗೈದರು.

Related posts

ವೇಣೂರು ಪೊಲೀಸ್ ಠಾಣೆಯ ಎಎಸ್ಐ ಆಗಿ ಬೆನ್ನಿಚ್ಛನ್ ಅಧಿಕಾರ ಸ್ವೀಕಾರ

Suddi Udaya

ಗುರುವಾಯನಕೆರೆ-ಉಜಿರೆ ನ್ಯೂ ಸಿಟಿ ಎಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ಶೇ.40ರಷ್ಟು ಡಿಸ್ಕೌಂಟ್ ಸೇಲ್

Suddi Udaya

ಸ್ವರ್ಣ ಜೇಸಿ ಸಪ್ತಾಹ: ಗೋಲ್ಡನ್ ಜೆಸಿಐ ಡ್ಯಾನ್ಸಿಂಗ್ ಸ್ಟಾರ್ ಸ್ಪರ್ಧೆಯಲ್ಲಿ ರಿತ್ವಿಕ್ ಕೆ. ಪಿ ಬೆಳ್ತಂಗಡಿ ಪ್ರಥಮ ಸ್ಥಾನ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದ ಪಾಲನಾ ಸಮಿತಿಯಿಂದ ನೂತನವಾಗಿ ಆಯ್ಕೆಗೊಂಡ ಧರ್ಮಾಧ್ಯಕ್ಷರಿಗೆ ಸ್ವಾಗತ

Suddi Udaya

ಬಳಂಜ: ಎಲ್ಯೊಟ್ಟು ನಿವಾಸಿ ಸೋಮನಾಥ ಪೂಜಾರಿ ನಿಧನ

Suddi Udaya

ಯಶೋಧ ಕೃಷ್ಣ ವೀಡಿಯೋ ಸ್ಪರ್ಧೆ: ಕಲ್ಮಂಜದ ರಿದ್ವಿ ಡಿ.ಆರ್ ಹಾಗೂ ಭಕ್ತಿ ಜಿ. ವಿನ್ನರ್

Suddi Udaya
error: Content is protected !!