23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವೇಣೂರು : 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಮಾಲೋಚನಾ ಸಭೆ

ವೇಣೂರು: ಫಲ್ಗುಣಿ ಸೇವಾ ಸಂಘ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಜಂಟಿ ಸಮಾಲೋಚನೆಯು ವೇಣೂರು ಪಂಚಾಯತ್ ಸಭಾಭವನದಲ್ಲಿ ಜು.01 ರಂದು ನಡೆಯಿತು.

ಶ್ರೀ ಗಣೇಶೋತ್ಸವ ಬೆಳ್ಳಿ ಹಬ್ಬದ 108 ತೆಂಗಿನಕಾಯಿ ಗಣಹೋಮದ ಕೂಪನನ್ನು ಗಣೇಶೋತ್ಸವ ಸಮಿತಿಯ ಗೌರಾವಾಧ್ಯಕ್ಷ ಡಾ| ಶಾಂತಿ ಪ್ರಸಾದ್ ನಮನ ಕ್ಲಿನಿಕ್ ಇವರು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಫಲ್ಗುಣಿ ಸಂಘದ ಅಧ್ಯಕ್ಷ ವಿ. ಎಸ್ ಜಯರಾಜ್‌ರವರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಭಾಸ್ಕರ್ ಪೈ, ಅಧ್ಯಕ್ಷ ಜಗದೀಶ್ಚಂದ್ರ ಡಿ.ಕೆ, ಕಾರ್ಯದರ್ಶಿ ಪ್ರಶಾಂತ್ ಹೆಗ್ಡೆ ಕುಂಟಲ್ಮಾರು ಮತ್ತು ಸುದೀಪ್ ಪಟವರ್ಧನ್, ಕೋಶಾಧಿಕಾರಿ ಶ್ರೀಕಾಂತ್ ಉಡುಪ ಹಾಗೂ ಜಂಟಿ ಸಮಿತಿಗಳ ಎಲ್ಲಾ ಸದಸ್ಯರುಗಳು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಕಾಶಿನಾಥ ಹೆಗ್ಡೆ ಮತ್ತು ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.

ವೇಣೂರಿನ ಎಲ್ಲಾ ವ್ಯಾಪಾರಸ್ಥರು ತಮ್ಮ ಸಂಸ್ಥೆಗಳು, ಮನೆಗಳನ್ನು ವಿಧ್ಯುದ್ದೀಪಾಲಂಕಾರದಿಂದ ವೇಣೂರು ನಗರವನ್ನು ಕಂಗೊಳಿಸಿ 25ನೇ ವರ್ಷದ ಗಣೇಶೋತ್ಸವವನ್ನು ವೇಣೂರಿನ ಹಬ್ಬವನ್ನಾಗಿ ಆಚರಿಸಲು ತೀರ್ಮಾನಿಸಲಾಯಿತು.

Related posts

ಗೇರುಕಟ್ಟೆ ಪತಂಜಲಿ ಯೋಗ ಶಾಖೆಯಲ್ಲಿ ರಕ್ಷಾಬಂಧನ ಆಚರಣೆ

Suddi Udaya

ವಿದ್ವತ್ ಪಿಯು ಕಾಲೇಜಿನಲ್ಲಿ ಸುನೀತ ವಿಲಿಯಮ್ಸ್ ರವರಿಗೆ ಗೌರವ ಸಮರ್ಪಣೆ

Suddi Udaya

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಕೊರಗಪ್ಪ ಗೌಡ ಮುಗೇರಡ್ಕ ರವರ ಚಿಕಿತ್ಸೆಗೆ ನೆರವಾಗಿ

Suddi Udaya

ಕಕ್ಕಿಂಜೆ : ಬೀಟಿಗೆ ಹಯಾತುಲ್ ಇಸ್ಲಾಂ ಮದರಸದ ನೂತನ ಅಧ್ಯಕ್ಷರಾಗಿ ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಡಿ.ಕೆ

Suddi Udaya

ಲಾಯಿಲ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂಘ ಉದ್ಘಾಟನೆ

Suddi Udaya

ಬೆಳ್ತಂಗಡಿಯಲ್ಲಿ ಶ್ರೀ ಪಾರಿಜಾತ ರಿಯಲ್ ಎಸ್ಟೇಟ್ ಶುಭಾರಂಭ

Suddi Udaya
error: Content is protected !!