27.9 C
ಪುತ್ತೂರು, ಬೆಳ್ತಂಗಡಿ
March 6, 2026
Uncategorized

ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ – ಧರ್ಮಸ್ಥಳ ಸ್ವ ಸಹಾಯ ಸಂಘಗಳ ಒಕ್ಕೂಟದಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಭಾಷೆಯಿಂದ ಸಂಸ್ಕೃತಿ ಉಳಿಯಲು ಸಾಧ್ಯ: ಪ್ರಸಾದ್ ಶೆಟ್ಟಿ ಎಣಿಂಜೆ

ಬೆಳ್ತಂಗಡಿ: ತುಳುವರ ಸಂಸ್ಕ್ರತಿ ಆಚಾರ ವಿಚಾರ, ಆಹಾರ ಪದ್ದತಿ ವಿಭಿನ್ನವಾದದ್ದು, ತುಳು ಭಾಷೆ ಉಳಿದರೆ ಮಾತ್ರ ಇದೆಲ್ಲ ಉಳಿಯಲು ಸಾಧ್ಯ ಆದ್ದರಿಂದ ಈ ಕಾಲಘಟ್ಟದಲ್ಲಿ ತುಳು ನಾಡಿನ ತುಳು ಭಾಷೆಯ ಮಹತ್ವವನ್ನು ಯುವ ಜನರಿಗೆ ತಿಳಿಸುವ ಅವಶ್ಯಕತೆ ಹಿರಿಯರಾದ ನಮಗಿದೆ ಎಂದು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಎಣಿಂಜೆ ಅಭಿಪ್ರಾಯ ಪಟ್ಟರು.

ಅವರು ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ, ಧರ್ಮಸ್ಥಳ ಸ್ವ ಸಹಾಯ ಸಂಘಗಳ ಒಕ್ಕೂಟ ವತಿಯಿಂದ ಆ.3 ರಂದು ಮುಂಡಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಕೃತಿದತ್ತವಾದ ಆಹಾರಗಳನ್ನು ನಮ್ಮ ಹಿರಿಯರು ಸೇವಿಸುತ್ತಿದ್ದುದರಿಂದ ಯಾವುದೇ ರೋಗವಿಲ್ಲದೇ ಹಲವಾರೂ ವರ್ಷ ನೆಮ್ಮದಿಯಿಂದ ಬಾಳಿ ಬದುಕುತಿದ್ದರು. ಆದರೆ ಬದಲಾದ ಈಗಿನ ಕಾಲಘಟ್ಟದಲ್ಲಿ ಆಹಾರದೊಟ್ಟಿಗೆ ವಿಷವನ್ನು ಸೇವಿಸುವ ಅನೀವಾರ್ಯ ಸ್ಥಿತಿಗೆ ನಾವು ಬಂದ್ದು ತಲುಪಿದ್ದೇವೆ. ಅದ್ದರಿಂದಲೇ ರೋಗದೊಂದಿಗೆ ನಾವು ಬದುಕುವಂತಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಜಿರೆ ಸ.ಹಿರಿಯ.ಪ್ರಾಥಮಿಕ ಶಾಲೆಯ ಶಿಕ್ಷಕ ಕೂಸಪ್ಪ ಗೌಡ ಮಾತನಾಡಿ, ತುಳುನಾಡಿನ ಆಹಾರ ಪದ್ಧತಿ, ನಮ್ಮ ಹಿರಿಯರು ಬದುಕುತಿದ್ದ ಶಿಸ್ತು ಬದ್ಧ ಜೀವನದ ಬಗ್ಗೆ ಮಾಹಿತಿ ನೀಡಿದ ಅವರು ಯುವಜನತೆ ಮೊಬೈಲ್ ದಾಸರಾಗುತ್ತಿರುವುದು ದುರಂತ, ನಾವೆಲ್ಲರೂ ನಮ್ಮ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವ ಕೆಲಸ ಚಿಕ್ಕಂದಿನಿಂದಲೇ ಮಾಡಬೇಕು. ಟಿ.ವಿ. ಮೊಬೈಲ್ ಹೆಚ್ಚು ನೋಡದಂತೆ ಜಾಗ್ರತೆ ವಹಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಅಧ್ಯಕ್ಷ ಶೀನಪ್ಪ ಗೌಡ ವಹಿಸಿದ್ದರು. ವೇದಿಕೆಯಲ್ಲಿ ಒಕ್ಕೂಟಗಳ ಪರವಾಗಿ ಶ್ರೀಮತಿ ಹೇಮಾವತಿ ಹಾಗೂ ಶ್ರೀಮತಿ ಕಸ್ತೂರಿ ಉಪಸ್ಥಿತರಿದ್ದರು. ಯಂಗ್ ಚಾಲೆಂಜರ್ಸ್ ಉಪಾಧ್ಯಕ್ಷ ವಿಜಯ ಕುಮಾರ್ ಸ್ವಾಗತಿಸಿ ಕೋಶಾಧಿಕಾರಿ ಸಾಂತಪ್ಪ ಧನ್ಯವಾದವಿತ್ತರು.

ಯಂಗ್ ಚಾಲೆಂಜರ್ಸ್ ಸಂಚಾಲಕ ನಾಮದೇವ ರಾವ್ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯಕ್ರಮದಲ್ಲಿ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.

Related posts

ಬಳಂಜ ಶಾಲಾ ಪ್ರಾರಂಭೋತ್ಸವ, ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ

Suddi Udaya

ಉಜಿರೆ: ಎಸ್.ಡಿ.ಟಿ.ಯು ಚಾಲಕ ಹಾಗೂ ಮಾಲಕರ ಸಂಘದ ವಾರ್ಷಿಕ ಮಹಾಸಭೆ

Suddi Udaya

ಸಿಯೋನ್ ಆಶ್ರಮ: ಉಚಿತ ದಂತ ಚಿಕಿತ್ಸಾ ಹಾಗೂ ಆರೋಗ್ಯ ತಪಾಸಣಾ ಶಿಬಿರ

Suddi Udaya

ಕೊಯ್ಯೂರು ಮಾಧವ ಶೆಟ್ಟಿಗಾರ್ಮನೆ ಬಳಿ ಗುಡ್ಡ ಕುಸಿತಸ್ಥಳಕ್ಕೆ ಗ್ರಾ.ಪಂ ಕಾಯ೯ದಶಿ೯ ಪರಮೇಶ್ವರ್ ಭೇಟಿ – ಪರಿಶೀಲನೆ

Suddi Udaya

ಗೇರುಕಟ್ಟೆ : ಪುಂಡಿಕಲ್ ಕುಕ್ಕು ನಲ್ಲಿ 16ನೇ ವರ್ಷದ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ ಹಾಗೂ ಧಾರ್ಮಿಕ ಉಪನ್ಯಾಸ

Suddi Udaya

ಮಂಗಳೂರು ವಿ.ವಿ ರಾಣಿ ಅಬ್ಬಕ್ಕ ಅಧ್ಯಯನ ಪೀಠದ ಸಲಹಾ ಸಮಿತಿಯ ನಾಮ ನಿರ್ದೇಶಿತ ಸದಸ್ಯರಾಗಿ ಯೋಗೀಶ್ ಕೈರೋಡಿಆಯ್ಕೆ

Suddi Udaya
error: Content is protected !!