23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುರುವಾಯನಕೆರೆ: ವೇದವ್ಯಾಸ ಶಿಶು ಮಂದಿರದಲ್ಲಿ ಆಟಿದ ಕೂಟ

ಗುರುವಾಯನಕೆರೆ: ಸಂಸ್ಕೃತಿಯ ಪಾಲನೆಯತ್ತ ಹೊಸ ಬೆಳಕನ್ನು ಹರಡುವ ನಿಟ್ಟಿನಲ್ಲಿ ನಮ್ಮ ವೇದವ್ಯಾಸ ಶಿಶು ಮಂದಿರದ ವತಿಯಿಂದ ಆಟಿದ ಕೂಟ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಮುಂಡಕೋಡಿ, ಪೆರ್ಲ ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಸೇವಂತಿ ಬಿ ಕೆ ಚೆನ್ನೆಮಣೆ ಆಡುವ ಮುಖಾಂತರ ಕಾರ್ಯಕ್ರಮವನ್ನ ಉದ್ಘಾಟಿಸಿ ತುಳುನಾಡಿನಲ್ಲಿ ಆಟಿ ತಿಂಗಳಲ್ಲಿ ನಡೆಯುವ ವಿವಿಧ ಪದ್ಧತಿಯ ಬಗ್ಗೆ ಹಾಗೆ ಆಟಿ ತಿಂಗಳಲ್ಲಿ ಮಾಡುವ ವಿವಿಧ ತಿಂಡಿ ತಿನಿಸುಗಳ ಬಗ್ಗೆ ತಿಳಿಸುವ ಮೂಲಕ ಮುಂದಿನ ಮಕ್ಕಳಿಗೆ ಇದರ ಅರಿವನ್ನು ಮೂಡಿಸುವ ಅವಶ್ಯಕತೆ ಇದೆ ಎಂದು ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದವ್ಯಾಸ ಶಿಶುಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಇಂದುಮತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಮಾರು 28 ಬಗೆಯ ವಿವಿಧ ಖಾದ್ಯಗಳನ್ನು ಪೋಷಕರು ತಯಾರಿಸಿ ತಂದಿದ್ದರು ಹಾಗೆ ಮಕ್ಕಳಿಗೆ ಮತ್ತು ಪೋಷಕರಿಗೆ ವಿವಿಧ ಬಗೆಯ ಆಟೋಟ ಸ್ಪರ್ಧೆಗಳನ್ನ ಶಿಶು ಮಂದಿರದ ಮಾತಾಜಿಗಳಾದ ಶ್ರೀಮತಿ ಅಶ್ವಿನಿ ಮತ್ತು ಶ್ರೀಮತಿ ರಮ್ಯಾ ಹಾಗೂ ಶ್ರೀಮತಿ ಮಂಗಳ ರತ್ನಾಕರ್ ನಡೆಸಿಕೊಟ್ಟರು.

ಮಾತೃ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಸ್ವಾತಿ ಸ್ವಾಗತಿಸಿದರು.ಮಾತೃ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಮಮಿತಾ ಸುಧೀರ್ ವಂದಿಸಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀಮತಿ ಸುಧಾಮಣಿ ಕಾರ್ಯಕ್ರಮ ನಿರೂಪಿಸಿದರು.

Related posts

ಬಂದಾರು: ಬಟ್ಲಡ್ಕ ಜುಮಾ ಮಸೀದಿಯ ಜಮಾಅತ್ ಮಹಾಸಭೆ: ನೂತನ ಸಮಿತಿ ರಚನೆ

Suddi Udaya

ಸರಕಾರದಿಂದ 2024ರ ಸಾರ್ವತ್ರಿಕ ರಜೆ ದಿನ ಪ್ರಕಟ

Suddi Udaya

ಜೆಸಿಐ ಭಾರತದ ವಲಯ 15ರ ಉಪಾಧ್ಯಕ್ಷರಾಗಿ ಬೆಳ್ತಂಗಡಿ ಘಟಕಾಧ್ಯಕ್ಷ ಶಂಕರ್ ರಾವ್ ಆಯ್ಕೆ

Suddi Udaya

ಉಜಿರೆ: ಶ್ರೀ ಧ.ಮಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಜೀವನ ಕೌಶಲ್ಯ ಕಾರ್ಯಾಗಾರ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಸನ್ ನಿಂದ ಹಿರಿಯ ಛಾಯಾಗ್ರಾಹಕ ಎನ್ ಎ ಗೋಪಾಲ್ ರಿಗೆ ಸನ್ಮಾನ

Suddi Udaya

ಡಿ.13: ಕಕ್ಕಿಂಜೆಯಲ್ಲಿ ಮರ್ಹೂಂ ಅಝ್ಲೀನ್ ಸಿದ್ದೀಕ್ ಸ್ಮರಣಾರ್ಥ ರಕ್ತದಾನ ಶಿಬಿರ

Suddi Udaya
error: Content is protected !!