September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಲಾಯಿಲ: ದಯಾ ವಿಶೇಷ ಶಾಲೆಯಲ್ಲಿ ಪೋಷಕರ ಸಭೆ

ಲಾಯಿಲ: ದಯಾ ವಿಶೇಷ ಶಾಲೆಯಲ್ಲಿ ವಿಶೇಷ ಮಕ್ಕಳ ಪೋಷಕರ ಸಭೆಯು ಆ. 2 ರಂದು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ವಂ.ಫಾ.ವಿನೋದ್ ಮಸ್ಕರೇನಸ್ ರವರು, ಶಾಲೆಯ ಆಪ್ತಸಮಾಲೋಚಕರಾದ ಮಿಸ್. ಮೆರಿನ್ ಹಾಗೂ ಪೋಷಕ ಪ್ರತಿನಿಧಿಯಾಗಿ ಶುಭಕರ್ ಉಪಸ್ಥಿತರಿದ್ದರು. ವಂ.ಫಾ. ವಿನೋದ್ ಮಸ್ಕರೇನಸ್ ರವರು ದಯಾ ವಿಶೇಷ ಶಾಲೆಯು ಹೇಗೆ ವಿಭಿನ್ನವಾಗಿ ವಿಶೇಷ ಮಕ್ಕಳಿಗಾಗಿ ವಿನೂತನವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಿಸ್ವಾರ್ಥ ಸೇವೆಯನ್ನು ಮಾಡುವುದರೊಂದಿಗೆ ಮಕ್ಕಳಿಗೆ ನೀಡಲಾಗುತ್ತಿರುವ ಫಿಸಿಯೋಥೆರಪಿ ಹಾಗೂ ವಾಕ್ ಮತ್ತು ಶ್ರವಣ ಥೆರಪಿಗಳನ್ನು ನುರಿತ ವೈಧ್ಯರ ಸಹಾಯದೊಂದಿಗೆ ನೀಡಲಾಗುತ್ತಿದೆ. ಪ್ರತೀ ದಿನವೂ ಮಕ್ಕಳು ಈ ಎಲ್ಲಾ ಸೌಲಭ್ಯಗಳನ್ನು ಪಡೆಯುವುದರೊಂದಿಗೆ ಮಕ್ಕಳು ತಮ್ಮ ದೈನಂದಿನ ಚಟುವಟಿಕೆಗಳನ್ನು ತಾವೇ ನಿಭಾಯಿಸಿಕೊಳ್ಳುವ ಸಾಮರ್ಥ್ಯವನ್ನು ಅವರಲ್ಲಿ ಬೆಳೆಸಲು ಸಹಾಯಕವಾಗುತ್ತದೆ. ಇದರೊಂದಿಗೆ ನಮ್ಮ ಪೋಷಕರನ್ನೂ ಸಶಕ್ತಗೊಳಿಸುವ ನಿಟ್ಟಿನಲ್ಲಿ ಸಂಸ್ಥೆಯು ಪೋಷಕರಿಗೆ ವಿವಿಧ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ತರಬೇತಿಯನ್ನು ನೀಡಲು ತೀರ್ಮಾನಿಸಿದ್ದು, ಆಸಕ್ತ ಪೋಷಕರು ಸಂಸ್ಥೆಗೆ ಭೇಟಿ ನೀಡಿ ತರಬೇತಿಯನ್ನು ಪಡೆದು ತಮ್ಮ ಕುಟುಂಬದ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ಶ್ರಮಿಸುವಂತೆ ತಿಳಿಸಿದರು.

ಮೆರಿನ್ ರವರು 2025-26 ರ ಶಾಲಾ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ, ಪೋಷಕರಿಂದ ಸಲಹೆ ಸೂಚನೆಗಳನ್ನು ಪಡೆಯುವುದರೊಂದಿಗೆ ಮುಂಬರುವ ವರ್ಷದ ಕಾರ್ಯ ವಿಧಾನಗಳನ್ನು ಚರ್ಚಿಸಿದರು. ತರಗತಿವಾರು ಮಕ್ಕಳ ಪ್ರಗತಿಯನ್ನು ಶಿಕ್ಷಕರೊಂದಿಗೆ ಚರ್ಚಿಸಿ, ಮನೆಯಲ್ಲಿ ಮಕ್ಕಳ ಶೈಕ್ಷಣಿಕ ಮತ್ತು ಇನ್ನಿತರ ಚಿಕಿತ್ಸೆಗಳ ಅನುಸರಣೆಯನ್ನು ಮಾಡುವ ಕುರಿತಾಗಿ ಪೋಷಕರಿಗೆ ತಿಳಿಸಲಾಯಿತು. ಕಚೇರಿ ಸಹಾಯಕ ಕಿರಣ್ ಮಿರಾಂದ ಸ್ವಾಗತಿಸಿ, ಕಳೆದ ಮಾಸಿಕ ಸಭೆಯ ವರದಿಯನ್ನು ವಾಚಿಸಿದರು. ಮಿಸ್. ಮೆರಿನ್ ರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Related posts

ಸವಣಾಲು ಸರಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಸರಕಾರದ ರಚನೆ

Suddi Udaya

ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿರುವ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವದ ಪಡೆದ ಬಿಲ್ಲವ ಸಂಘ ಬೇಹರಿನ್ ಅಧ್ಯಕ್ಷ ಹರೀಶ್ ಪೂಜಾರಿ

Suddi Udaya

ಜಾತಿ ಗಣತಿ ಸಮೀಕ್ಷೆಯಲ್ಲಿ ಗೌಡ ಸಮಾಜ ಬಾಂಧವರು ಜಾತಿ ಕಾಲಂ ನಲ್ಲಿ ಒಕ್ಕಲಿಗ , ಉಪಜಾತಿಯ ಕಾಲಂ ನಲ್ಲಿ ಗೌಡ ಎಂದು ನಮೂದಿಸುವಂತೆ ಗೌಡರ ಯಾನೆ ಒಕ್ಕಲಿಗ ಸೇವಾ ಸಂಘದ ಗೌರವಾಧ್ಯಕ್ಷ ಹೆಚ್ ಪದ್ಮಗೌಡ ಹೇಳಿಕೆ

Suddi Udaya

ಮದ್ದಡ್ಕ ತಾಯಿ ಪಿಲಿಚಾಮುಂಡಿ ದೈವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಪ್ರಶ್ನಾ ಚಿಂತನೆ

Suddi Udaya

ಕಾಯರ್ತಡ್ಕ ಪ್ರೌಢಶಾಲೆಗೆ ಶೌಚಾಲಯ ಹಸ್ತಾಂತರ

Suddi Udaya

ಬೆಳ್ತಂಗಡಿ : ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಾಟಕ್ಕೆ ಉಜಿರೆ ಎಸ್.ಡಿ.ಎಮ್ ಕಾಲೇಜಿನ ವಿದ್ಯಾರ್ಥಿನಿ ಚಂದ್ರಿಕಾ ಆಯ್ಕೆ

Suddi Udaya
error: Content is protected !!