September 6, 2026
Uncategorized

ಸುಲ್ಕೇರಿ ಬಂಟರ ಯಾನೆ ನಾಡವರ ಸಂಘ ಗ್ರಾಮ ಸಮಿತಿಯಿಂದ ಆಟಿಡೊಂಜಿ ದಿನ

ಸುಲ್ಕೇರಿ : ಸುಲ್ಕೇರಿ ಮಹಮ್ಮಾಯಿ ಸಭಾಭವನದಲ್ಲಿ ಬಂಟರ ಯಾನೆ ನಾಡವರ ಸಂಘ ಗ್ರಾಮ ಸಮಿತಿ ಸುಲ್ಕೇರಿಯ ಆಟಿಡೊಂಜಿ ದಿನ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮವನ್ನು ಗ್ರಾಮ ಸಮಿತಿಯ ಗೌರವಾಧ್ಯಕ್ಷ ರಾಮ ಶೆಟ್ಟಿ, ರಾಜು ಶೆಟ್ಟಿ ಕೊಕ್ರಾಡಿ ಹಾಗೂ ಬೇಬಿ ಶೆಟ್ಟಿ ಅವರ ಉದ್ಘಾಟಿಸಿದರು.

ವಿವಿಧ ಆಟೋಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ಮಧ್ಯಾಹ್ನ ಶ್ರೀಮತಿ ಪ್ರೀತಿ ಶೆಟ್ಟಿ ಯವರ ಪ್ರಾರ್ಥನೆಯೊಂದಿಗೆ ಸಮಾರೋಪ ಸಮಾರಂಭ ಆರಂಭವಾಯಿತು ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಸಮಿತಿಯ ಅಧ್ಯಕ್ಷ ಮಹಾಬಲ ಶೆಟ್ಟಿ ವಹಿಸಿದ್ದರು.

ವೇದಿಕೆಯಲ್ಲಿ ತಾಲೂಕು ಬಂಟರ ಸಮಿತಿಯ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ, ಪ್ರಕಾಶ್ ಶೆಟ್ಟಿ ನೊಚ್ಚ, ಕಾರ್ಯದರ್ಶಿ ಸುರೇಶ್ ಶೆಟ್ಟಿ, ಕೋಶಾಧಿಕಾರಿ ವಸಂತ ಶೆಟ್ಟಿ, ಉಪಾಧ್ಯಕ್ಷರಾದ ನವೀನ್ ಸಾಮಾನಿ, ತಾಲೂಕು ಯುವ ಬಂಟರ ಅಧ್ಯಕ್ಷ ಪ್ರತೀಕ್ ಶೆಟ್ಟಿ, ಮಹಿಳಾ ಅಧ್ಯಕ್ಷ ವಿಜಯಲಕ್ಷ್ಮಿ ಸಾಮಾನಿ ಹಾಗೂ ನಾರಾವಿ ಬಂಟರ ವಲಯ ಅಧ್ಯಕ್ಷ ರಾಜೇಶ್ ಶೆಟ್ಟಿ ಪೆರಾಡಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿಶಿಷ್ಟ ಸಾಧನೆಯನ್ನು ಮಾಡಿದ ಹಾಗೂ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದವರನ್ನು ಸನ್ಮಾನಿಸಲಾಯಿತು. ಶ್ರೀಮತಿ ಸ್ವಾತಿ ಶೆಟ್ಟಿ ವರದಿ ವಾಚಿಸಿ, ವಿಶ್ವನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರವಿ ಶೆಟ್ಟಿ ಸ್ವಾಗತಿಸಿ, ದಯಾಕರ ರೈ ವಂದಿಸಿದರು.

Related posts

ಕುಕ್ಕೇಡಿ ಗ್ರಾ.ಪಂ.ನಲ್ಲಿ ಉದ್ಯೋಗ ಖಾತರಿ ಯೋಜನೆಯ ‘ಪಂಚ ಅಭಿಯಾನದಡಿ’ ಕೋಟಿ ವೃಕ್ಷ ಅಭಿಯಾನ

Suddi Udaya

ಬೆಳ್ತಂಗಡಿ: ಕೋರ್ಟ್ ರಸ್ತೆಯ ನಿವಾಸಿ ಜಯರಾಮ ನಿಧನ

Suddi Udaya

ಓಡೀಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಚಲನಚಿತ್ರ ತಾರೆ ಶ್ರುತಿ ಭೇಟಿ

Suddi Udaya

ಮರೋಡಿ ಗ್ರಾ.ಪಂನಿಂದ ಪೆರಾಡಿಯಲ್ಲಿ ನಿರ್ಮಿಸಲಾದ ರೂ.5.60 ಲಕ್ಷ ವೆಚ್ಚದ ಸೋಲಾರ್ ದೀಪ ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ

Suddi Udaya

ಪೆರಿಯಡ್ಕ ಬೆಳಾಲು ಶಾಲೆಗೆ ಪ್ರಿಂಟರ್ ಕೊಡುಗೆ

Suddi Udaya
error: Content is protected !!