32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಮುಂಡಾಜೆ ಪ್ರಾ.ಕೃ.ಪ. ಸ. ಸಂಘದಲ್ಲಿ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ 145ನೇ ಜನ್ಮದಿನ ಆಚರಣೆ

ಮುಂಡಾಜೆ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಪಿತಾಮಹರೆಂದೇ ಖ್ಯಾತರಾದ ಮೊಳಹಳ್ಳಿ ಶಿವರಾಯರ145ನೇ ಜನ್ಮದಿನವನ್ನು ಶ್ರದ್ಧೆಯಿಂದ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಆಚರಿಸಲಾಯಿತು.

ಪ್ರತಿಷ್ಠೆಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕನ್ನು ಒಳಗೊಂಡಂತೆ ಹಲವಾರು ಸಂಘ-ಸಂಸ್ಥೆಗಳ ಸ್ಥಾಪಕರಾಗಿದ್ದ ಮೊಳಹಳ್ಳಿ ಅವರು ಗ್ರಾಮೀಣ ಪ್ರದೇಶಗಳಿಗೆ ಬಂದು ಅಲ್ಲಲ್ಲಿ ಸಹಕಾರಿ ಸಂಘಗಳ ಸ್ಥಾಪನೆಗೆ ಕಾರಣೀಭೂತರಾಗಿದ್ದರು. ರೈತರ ದುರ್ಬಲ ವರ್ಗದವರ ಮಹಿಳೆಯರ ಕುರಿತು ಅಪಾರ ಕಾಳಜಿ ಹೊಂದಿದ್ದ ಶಿವರಾಯರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲ ಕ್ರಮಿಸಬೇಕಾಗಿದೆ ಎಂದು ನಾರಾಯಣ ಫಡಕೆ ಮುಂಡಾಜೆ ತಿಳಿಸಿದರು.

ಮುಂಡಾಜೆ ಪ್ಯಾಕ್ಸ್ ನ ನಿರ್ದೇಶಕ ಕಜೆ ವೆಂಕಟೇಶ್ವರ ಭಟ್ ಮಾತನಾಡಿ, ಮೊಳಹಳ್ಳಿ ಶಿವರಾಯರ ದೂರ ದೃಷ್ಟಿಯಿಂದ ಇಂದು ಸಹಕಾರಿ ಕ್ಷೇತ್ರ ಚೆನ್ನಾಗಿ ಬೆಳೆದಿದ್ದು ನಾವೆಲ್ಲ ಸಹಕಾರಿ ಕ್ಷೇತ್ರದ ಮೂಲಕ ಬೆಳೆಯುತ್ತಿದ್ದೇವೆ ಎಂದರು.ರಬ್ಬರ್ ಸೊಸೈಟಿ ಉಜಿರೆಯ ಉಪಾಧ್ಯಕ್ಷ ಅನಂತ ಭಟ್ ಮಾತನಾಡಿ ಇಂದು ಹೆಚ್ಚಿನ ಸಂಘಗಳು ಸೇವೆಯ ಬದಲು ಲಾಭದ ದೃಷ್ಟಿಕೋನ ಇಟ್ಟುಕೊಂಡಿರುವುದು ಸರಿಯಲ್ಲ. ಸಂಘಗಳ ಮುಖ್ಯ ಉದ್ದೇಶ ಸೇವೆಯಾಗಿರಬೇಕು ಎಂದು ತನ್ನ ಆಶಯ ವ್ಯಕ್ತಪಡಿಸಿದರು.

ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಪ್ರಕಾಶ್ ನಾರಾಯಣ, ಮೊಳಹಳ್ಳಿ ಅವರ ಕಲ್ಪನೆಯ ಸಹಕಾರಕ್ಕೆ ನಮ್ಮ ಸಂಘ ರೈತರ ಬಳಿ ಹೋಗಿ ಎಲ್ಲ ವ್ಯವಹಾರಗಳನ್ನು ನಡೆಸುವ ನಿಟ್ಟಿನಲ್ಲಿ ಶೀಘ್ರವೇ ಚಾರ್ಮಾಡಿಯಲ್ಲಿ ಪೂರ್ಣ ಪ್ರಮಾಣದ ಶಾಖೆಯನ್ನು ಆರಂಭಿಸಲಿದ್ದೇವೆ ಎಂದು ತಿಳಿಸಿದರು. ಸಂಘದ ಆಡಳಿತ ಮಂಡಳಿ ಸದಸ್ಯ ಚನ್ನಕೇಶವ ಹಾಗೂ ಸಂಘದ ಸದಸ್ಯರು, ಸಿಬ್ಬಂದಿಗಳು ಭಾಗವಹಿಸಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಪರಾಂಜಪೆ ವಂದಿಸಿದರು. ಶಾಖಾ ವ್ಯವಸ್ಥಾಪಕ ಡೇವಿಸ್ ಬಾಬು ಎಮ್ ಸುಷ್ಮಾ ಸ್ನೇಹಾ, ಅಶ್ವಿನ್ , ಪ್ರಸಾದ್ ಉಪಸ್ಥಿತರಿದ್ದರು.

Related posts

ಮದ್ದಡ್ಕ ಮುಖ್ಯರಸ್ತೆಯಲ್ಲಿ ಕೆಟ್ಟು ನಿಂತ ಕೆ.ಎಸ್.ಆರ್.ಟಿ.ಸಿ ಬಸ್ಸು: ಟ್ರಾಫಿಕ್ ಜಾಮ್, ವಾಹನ ಸವಾರರ ಪರಾದಾಟ: ಬದಲಿ ರಸ್ತೆಗಳನ್ನು ಬಳಸಿಕೊಂಡು ಸಂಚಾರಿಸುವಂತೆ ಸೂಚನೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ಜನಪ್ರತಿನಿಧಿ ನೆಲೆಯಿಂದ ಶಾಸಕರಿಂದ ಆಮಂತ್ರಣ ಅನಾವರಣ : ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಸರ್ವ ನೆರವಿನ ಭರವಸೆ

Suddi Udaya

ಅಳದಂಗಡಿ: ಜೋಪಡಿಯಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ಆಸರೆಯಾದ ಅಳದಂಗಡಿ ಗ್ರಾ.ಪಂ ಪ್ರೇಮರವರ ಮನೆ ದುರಸ್ಥಿ, ಮೇಲ್ಛಾವಣಿಗೆ ಶೀಟ್ ಅಳವಡಿಕೆ, ಸುದ್ದಿ ಉದಯ ಪತ್ರಿಕೆಯ ವರದಿಗೆ ಸಾರ್ವಜನಿಕರಿಂದ ಮೆಚ್ಚುಗೆ

Suddi Udaya

ವಿ.ಪ. ಮಾಜಿ ಶಾಸಕ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ರವರ ಮುತುವರ್ಜಿಯಿಂದ ಸರಕಾರದ ವಿಶೇಷ ರೂ.50 ಲಕ್ಷ ಅನುದಾನದಿಂದ ಗೇರುಕಟ್ಟೆ – ಹೇರೋಡಿ ಕಾಂಕ್ರೀಟ್ ರಸ್ತೆ ಶಿಲಾನ್ಯಾಸ

Suddi Udaya

ಮುಂಡಾಜೆ ರಾಷ್ಟ್ರೀಯ ಹೆದ್ದಾರಿಗೆ ಬಿದ್ದ ಮರ ತೆರವು

Suddi Udaya
error: Content is protected !!