September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಆಟಿದ ಕಮ್ಮೆನ

ಬೆಳ್ತಂಗಡಿ: ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಮಹಿಳಾ ಸಂಚಾಲನ ಸಮಿತಿ ಬೆಳ್ತಂಗಡಿ ತಾಲೂಕು ಆತಿಥ್ಯದಲ್ಲಿ ಆ.02 ರಂದು ಆಟಿದ ಕಮ್ಮೆನ ಕಾರ್ಯಕ್ರಮವು ಬೆಳ್ತಂಗಡಿಯ ಗುರುನಾರಾಯಣ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ನೆರವೇರಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಘಟಕದ ಸಲಹೆಗಾರರಾದ ಸುಧಾಮಣಿ ಆರ್ ಮಾತನಾಡಿ ಆಟಿ ತಿಂಗಳ ವಿಶೇಷತೆಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ ವಹಿಸಿದ್ದರು. ವೇದಿಕೆಯಲ್ಲಿ ಮಹಿಳಾ ಸಂಚಾಲನ ಸಮಿತಿಯ ಪ್ರಧಾನ ಸಂಚಾಲಕಿ ಶ್ರೀಮತಿ ಲೀಲಾವತಿ ಪಣಕಜೆ, ಘಟಕದ ಕಾರ್ಯದರ್ಶಿ ಮಧುರ ರಾಘವ್ ಉಪಸ್ಥಿತರಿದ್ದರು.


ಕಾರ್ಯಕ್ರಮದ ಮೊದಲು ಘಟಕದ ಸದಸ್ಯರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕುಮಾರಿ ಶ್ರುತ ಮುಂಡೂರು ಗಾದೆ ಮಾತುಗಳನ್ನು ತಿಳಿಸಿದರು. ಘಟಕದ ಸದಸ್ಯರಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಸಂಚಾಲಕರಾದ ಅಶೋಕ ಕಲ್ಮಂಜ ಸ್ವಾಗತಿಸಿ, ಶ್ವೇತಾ ಯುವರಾಜ್ ಮಣಿಕೆ ನಿರೂಪಿಸಿ, ಲೀಲಾವತಿ ಪಣಕಜೆ ಧನ್ಯವಾದವಿತ್ತರು. ಕಾರ್ಯಕ್ರಮದ ನಂತರ ಘಟಕದ ಸದಸ್ಯರು ತಯಾರಿಸಿದ ಆಟಿ ತಿಂಗಳ ಸುಮಾರು 30 ಬಗೆಯ ವಿವಿಧ ತಿಂಡಿ ತಿನಿಸುಗಳೊಂದಿಗೆ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.

Related posts

ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಮಂಗಳೂರು: ಉಪಾಧ್ಯಕ್ಷರಾಗಿ ಆನಂದ ಗೌಡ ಪಿ.ಹೆಚ್., ಕಾರ್ಯದರ್ಶಿಯಾಗಿ ನವೀನಚಂದ್ರ ಗೌಡ

Suddi Udaya

ವಿಧಾನ ಪರಿಷತ್ ಕಲಾಪ; ಬಿ-ಖಾತೆಯಿಂದ ಪ್ರಯೋಜನವಾಗುತ್ತಿಲ್ಲ, ಫಾರ್ಮ್-3 ನೀಡಲು ಪ್ರತಾಪಸಿಂಹ ನಾಯಕ್ ಆಗ್ರಹ

Suddi Udaya

ನ್ಯಾಯತರ್ಪು: ಪಲ್ಲಾದೆ ಕೆರೆಯಲ್ಲಿ ಶವ ಪತ್ತೆ

Suddi Udaya

ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣ: ಪತ್ನಿ ಸೌಮ್ಯ ಶೆಟ್ಟಿಯನ್ನು ಬಂಧಿಸಿದ ಕಾರ್ಕಳ ಪೊಲೀಸರು

Suddi Udaya

ಗುರುವಾಯನಕೆರೆ: ದ.ಕ. ಜಿಲ್ಲಾ ಸಹಕಾರ ಭಾರತಿ ಮಹಿಳಾ ಅಭ್ಯಾಸ ವರ್ಗ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಹೋರಾಟಗಳಿಗೆ ಬೆಳ್ತಂಗಡಿ ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ವತಿಯಿಂದ ಬೆಂಬಲ

Suddi Udaya
error: Content is protected !!