September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆಯಲ್ಲಿ ರೈತ ತರಬೇತಿ ಕಾರ್ಯಕ್ರಮ

ಬೆಳ್ತಂಗಡಿ : ಜಿಲ್ಲಾ ರೈತ ತರಬೇತಿ ಕೇಂದ್ರ ಬೆಳ್ತಂಗಡಿ ಹಾಗೂ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟ ಉಜಿರೆ ಇವರ ಸಹಯೋಗದಲ್ಲಿ ಒಂದು ದಿನದ ರೈತ ತರಬೇತಿ ಕಾರ್ಯಕ್ರಮ ಉಜಿರೆ ಗ್ರಾಮದ ಕಿರಿಯಾಡಿ ಸದಾಶಿವೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಅರ್ಚಕರಾದ ಕೃಷ್ಣ ಹೊಳ್ಳ ರವರ ಅಧ್ಯಕ್ಷತೆಯಲ್ಲಿ ಆ.6ರಂದು ನಡೆಯಿತು.

ಕೃಷಿ ಸಖಿ ಭಾಗೀರಥಿ ಇವರು ವಾಸ್ತವಿಕವಾಗಿ ಮಾತಾಡಿ ಬೆಳೆ ವಿಮೆ ಬೆಳೆ ಸಮೀಕ್ಷೆಯ ಬಗ್ಗೆ ಹಾಗೂ ರೈತ ತರಬೇತಿಯ ಮಹತ್ವವನ್ನು ತಿಳಿಸಿದರು.

ಸಭೆಯನ್ನು ಉದ್ಘಾಟಿಸಿ ಮಾತಾಡಿದ ಅರ್ಚಕರಾದ ಕೃಷ್ಣ ಹೊಳ್ಳ ಇದು ಬಹಳ ಉತ್ತಮವಾದ ಕಾರ್ಯಕ್ರಮ ನಾವು ರೈತರು ಮಾಡುವ ತಪ್ಪುಗಳನ್ನು ತಿದ್ದಿಕೊಂಡು ಇಂತಹ ತರಬೇತಿಯಲ್ಲಿ ಮಾಹಿತಿ ಪಡೆದು ಅಭಿವೃದ್ಧಿ ಹೊಂದಬೇಕು ಎಂದು ಶುಭ ಹಾರೈಸಿದರು. ಕೃಷಿ ಇಲಾಖೆಯ ನವನೀತ ಮಾತಾಡಿ , ನ್ಯಾಚುರಲ್ ಫಾರ್ಮಿಂಗ್ ಬೆಳೆ ಸಮೀಕ್ಷೆ ಬೆಳೆ ವಿಮೆ ಕೃಷಿ ಇಲಾಖೆಯಲ್ಲಿ ಸಿಗುವ ಸವಲತ್ತುಗಳು ಹಾಗೂ ಅದನ್ನು ಪಡೆದುಕೊಳ್ಳುವ ವಿಧಾನಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾದ ಪ್ರಭಾಕರಮಯ್ಯ ಇವರು ಅಡಿಕೆ ಹಾಗೂ ತೆಂಗು ಗಿಡಗಳಿಗೆ ಬರುವ ರೋಗಗಳು ಹಾಗೂ ಅದನ್ನು ನಿಯಂತ್ರಣ ಮಾಡುವ ವಿಧಾನ ಗಿಡಗಳಿಗೆ ಗೊಬ್ಬರ ಹಾಕುವ ಸಮರ್ಪಕ ವಿಧಾನಗಳು ಬೋರ್ಡೋ ದ್ರಾವಣದ ಮಿಶ್ರಣ ಹಾಗೂ ಅದರ ಪ್ರಾತ್ಯಕ್ಷಿಕೆಯನ್ನು ಮನಮುಟ್ಟುವಂತೆ ರೈತರಿಗೆ ತಿಳಿಸಿದರು. ಪಶುಸಖಿ ಏಕಲತಾ ಇವರು ಪಶು ಇಲಾಖೆಯ ಮಾಹಿತಿ ನೀಡಿದರು.

ಸಭೆಯಲ್ಲಿ ಪಂಚಾಯತ್ ಸದಸ್ಯರಾದ ಶಶಿಕಲಾ ದೇವಪ್ಪ ಗೌಡ , ಮಾಜಿ ಸದಸ್ಯರಾದ ಮಂಜಪ್ಪ ಬಂಗೇರ, ಹಿರಿಯರಾದ ಕೊರಗಪ್ಪ ಗೌಡ , ರೈತರು, ರೈತ ಮಹಿಳೆಯರು ಭಾಗವಹಿಸಿದ್ದರು . ರಾಜೇಶ್ವರಿ ಚಂದ್ರಕಾಂತ್ ಸ್ವಾಗತಿಸಿದರು.

Related posts

ಸುಹಾಸ್ ಶೆಟ್ಟಿ ಪ್ರಕರಣದೊಂದಿಗೆ ಉಳಿದ ಮೂರು ಕೊಲೆ ಪ್ರಕರಣಗಳನ್ನು ಎನ್.ಐ.ಎ (NIA) ಗೆ ಯಾಕೆ ನೀಡಿಲ್ಲ?: ಹರೀಶ್ ಕುಮಾರ್ ಪ್ರಶ್ನೆ

Suddi Udaya

ಕಾಯರ್ತಡ್ಕ: ಹದಗೆಟ್ಟ ರಸ್ತೆ, ಶಿಲಾನ್ಯಾಸಗೊಂಡ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ, ಪ್ರತಿಭಟನೆಗೆ ಗ್ರಾಮಸ್ಥರ ಸಿದ್ದತೆ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya

ರೆಖ್ಯ : ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಕರಕಲಾದ ಮನೆ

Suddi Udaya

ಉಜಿರೆ : ಶ್ರೀ ಧ.ಮಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಗಮಕ ಕಾರ್ಯಕ್ರಮ

Suddi Udaya

ವನಮಹೋತ್ಸವ ಆಚರಣೆ: ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಪರಿಸರದಲ್ಲಿ ಗಿಡ ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ

Suddi Udaya
error: Content is protected !!