25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ- ರಕ್ಷಕ ಸಂಘದ ವಾರ್ಷಿಕ ಮಹಾಸಭೆ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ 2025-26ನೇ ಶೈಕ್ಷಣಿಕ ಸಾಲಿನ ಶಿಕ್ಷಕ-ರಕ್ಷಕ ಸಂಘದ ಮಹಾಸಭೆಯು ಆ. 6ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಸಭಾಭವನದಲ್ಲಿ ಶಿಕ್ಷಕ ವೃಂದದವರು ಪ್ರಾರ್ಥನಾ ಗೀತೆಯನ್ನು ಹಾಡುವುದರ ಮೂಲಕ ಪ್ರಾರಂಭವಾಯಿತು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶಾಲಾ ಸಂಚಾಲಕರಾದ ವಂ|ಸ್ವಾ| ಸ್ಟ್ಯಾನಿ ಗೋವಿಯಸ್ ರವರು ವಹಿಸಿದ್ದರು. ಈ ಸಭೆಗೆ ಸಂಪನ್ಮೂಲ ವ್ಯಕ್ತಿಗಳಾಗಿ ಕೆನರಾ ಕಮ್ಯುನಿಕೇಶನ್ ಸೆಂಟರ್ ಮಂಗಳೂರಿನ ನಿರ್ದೇಶಕರಾದ ವಂ|ಸ್ವಾ| ಅನಿಲ್ ಐವನ್ ಫೆರ್ನಾಂಡಿಸ್ ರವರು ಆಗಮಿಸಿ “ಡಿಜಿಟಲ್ ಯುಗದಲ್ಲಿ ಮಕ್ಕಳ ಸುರಕ್ಷತೆ ಮತ್ತು ಮಾರ್ಗದರ್ಶಿ” ಎಂಬ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದರು. ಸಹಶಿಕ್ಷಕಿ ಜೋಸ್ವಿಟ ಡಿಸೋಜ ರವರು ಸಂಪನ್ಮೂಲ ವ್ಯಕ್ತಿಗಳ ಪರಿಚಯವನ್ನು ಸಭೆಗೆ ಮಾಡಿದರು. ಕಾರ್ಯಕ್ರಮಕ್ಕೆ ಪುಂಜಾಲಕಟ್ಟೆ ವಲಯದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಚೇತನ ರವರು ಆಗಮಿಸಿ “ಮೌಲ್ಯಾಧಾರಿತ ಮೌಲ್ಯಮಾಪನ” ಎಂಬ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದರು.

ಶಾಲಾ ಮುಖ್ಯೋಪಾಧ್ಯಾಯರಾದ ವಂ|ಸ್ವಾ|ದೀಪಕ್ ಲಿಯೋ ಡೇಸರವರು ಶಾಲಾ ನಿಯಮಗಳು ಹಾಗೂ ಹೆತ್ತವರ ಸಲಹೆ ಸೂಚನೆಗಳಿಗೆ ಉತ್ತರವನ್ನು ನೀಡಿದರು. ಶಿಕ್ಷಕ-ರಕ್ಷಕ ಸಂಘದ ಎಲ್ಲಾ ಮಾಜಿ ಪದಾಧಿಕಾರಿಗಳಿಗೆ ಗಿಡವನ್ನು ನೀಡುವುದರ ಮೂಲಕ ಧನ್ಯವಾದಗಳನ್ನು ಅರ್ಪಿಸಲಾಯಿತು. 2025-26ನೇ ಶೈಕ್ಷಣಿಕ ಸಾಲಿನ ಪದಾಧಿಕಾರಿಗಳ ಚುನಾವಣೆಯನ್ನು ಮುಖ್ಯೋಪಾಧ್ಯಾಯರಾದ ವಂ|ಸ್ವಾ|ದೀಪಕ್ ಲಿಯೋ ಡೇಸರವರು ನೆರವೇರಿಸಿ ನಂತರ ದೀಪ ಬೆಳಗಿಸುವುದರ ಮೂಲಕ 2025-26ನೇ ಶೈಕ್ಷಣಿಕ ಸಾಲಿನ ಶಿಕ್ಷಕ-ರಕ್ಷಕ ಸಂಘವನ್ನು ಉದ್ಘಾಟಿಸಲಾಯಿತು.

ಮಾಜಿ ಉಪಾಧ್ಯಕ್ಷ ವಿನಯ್ ಡಿಸೋಜ ರವರು ಮಾತನಾಡಿ ನಾವು ಪೋಷಕರಾದವರು ತಮ್ಮ ಮಕ್ಕಳಿಗೆ ನಮ್ಮ ಶಾಲೆ ಮತ್ತು ಶಿಕ್ಷಕರ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕೆಂದು ಹೇಳಿದರು. ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ರವಿಂದ್ರ ರೈ ರವರು ಮಾತನಾಡಿ ಶಾಲೆಯ ಏಳಿಗೆಗೆ ಶ್ರಮಿಸುವುದಾಗಿ ಭರವಸೆಯನ್ನಿತ್ತರು. ನೂತನವಾಗಿ ನೇಮಕಗೊಂಡ ಎಲ್ಲಾ ಪದಾಧಿಕಾರಿಗಳಿಗೆ ಹೂವನ್ನು ನೀಡುವುದರ ಮೂಲಕ ಅಭಿನಂದಿಸಲಾಯಿತು. ಶಾಲಾ ಸಹಶಿಕ್ಷಕಿಯರಾದ ಶ್ರೀಮತಿ ರಮ್ಯಾಲತಾ ಮತ್ತು ಶೀಮತಿ ಸವಿತಾ ರವರು ೨೦೨೪- ೨೫ನೇ ಶೈಕ್ಷಣಿಕ ವರ್ಷದ ಸಭೆಯ ವರದಿಯನ್ನು ಮಂಡಿಸಿದರು. ಸಹ ಶಿಕ್ಷಕಿಯಾದ ಶೀಮತಿ ಐಡಾ ಡಿಕುನ್ಹಾ ರವರು ೨೦೨೪-೨೫ನೇ ಶೈಕ್ಷಣಿಕ ಸಾಲಿನ ಲೆಕ್ಕಪತ್ರವನ್ನು ಸಭೆಗೆ ಮಂಡಿಸಿದರು. ಸಹ ಶಿಕ್ಷಕಿಯರಾದ ಶ್ರೀಮತಿ ವಿನ್ನಿ ಲೋಬೋ ಮತ್ತು ಶ್ರೀಮತಿ ಮೇಘಶ್ರೀ ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀಮತಿ ಮಲ್ಲಿಕಾ ಸ್ವಾಗತಿಸಿ, ಶ್ರೀಮತಿ ಸೌಮ್ಯಾ ಧನ್ಯವಾದವನ್ನು ಸಮರ್ಪಿಸಿದರು.

Related posts

ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ ಬೆಳ್ತಂಗಡಿ ತಾ.ಪಂ. ನಲ್ಲಿ ಬಾಲ ಕಾರ್ಮಿಕ ನಿರ್ಮೂಲನೆ ಕುರಿತು ಪ್ರಮಾಣ ವಚನ

Suddi Udaya

ಜ.25: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಪಿ.ಯು.ಶಿಕ್ಷಣ : ಭವಿಷ್ಯದ ಅವಕಾಶಗಳ ಕುರಿತು ಮಾರ್ಗದರ್ಶನ ಕಾರ್ಯಕ್ರಮವು

Suddi Udaya

ಕುಕ್ಕೇಡಿ ಗ್ರಾಮದ ಪಾಳ್ಯ ದರ್ಖಾಸು ನಿವಾಸಿ ವಿಶ್ವನಾಥ ವಿಷ ಸೇವಿಸಿ ಅತ್ಮಹತ್ಯೆ

Suddi Udaya

ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ ಹೆಚ್.ಎಸ್ ವರ್ಗಾವಣೆ

Suddi Udaya

ಶಿಶಿಲ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ವೇಣೂರು ಎಕ್ಸೆಲ್ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭೋತ್ಸವ

Suddi Udaya
error: Content is protected !!