28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಡ್ಯಾರಬೆಟ್ಟು ಕ್ಷೇತ್ರದ ಅನುವಂಶೀಕ ಆಡಳಿತ ಮೊಕ್ತೇಸರ ಜೀವಂಧರ್ ಕುಮಾರ್ ರವರಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವೇಣೂರು ಇದರ ಬೆಳ್ಳಿಹಬ್ಬ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ವೇಣೂರು: ಫಲ್ಗುಣಿ ಸೇವಾ ಸಂಘ ವೇಣೂರು ಇದರ ಸಹಯೋಗದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವೇಣೂರು ಇದರ ಬೆಳ್ಳಿಹಬ್ಬ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಶ್ರೀ ಕ್ಷೇತ್ರ ಪಡ್ಯಾರಬೆಟ್ಟುವಿನ ಅನುವಂಶೀಯ ಆಡಳಿತ ಮೊಕ್ತೇಸರರಾದ ಎ ಜೀವಂಧರ ಕುಮಾರ್ ಅವರು ಶ್ರೀ ಕ್ಷೇತ್ರ ಪಡ್ಯಾರಬೆಟ್ಟುವಿನಲ್ಲಿ ಆ.8 ರಂದು ಬಿಡುಗಡೆಗೊಳಿಸಿ ಶುಭಹಾರೈಸಿದರು.

ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಮುಂದಾಳು ಜಗದೀಶ್ಚಂದ್ರರವರ ಅಧ್ಯಕ್ಷತೆಯಲ್ಲಿ,ವೇಣೂರಿನ ಪ್ರಸಿದ್ದ ವೈದ್ಯ ಡಾ‌.ಶಾಂತಿ ಪ್ರಸಾದ್ ಮತ್ತು ಉದ್ಯಮಿ ಕೆ.ಭಾಸ್ಕರ್ ಪೈ ಇವರ ಗೌರವ ಅಧ್ಯಕ್ಷತೆಯಲ್ಲಿ ವೇಣೂರಿನ ಬೆಳ್ಳಿಹಬ್ಬದ ಸಾರ್ವಜನಿಕ ಶ್ರೀ ಗಣೇಶೋತ್ಸವ ಎರಡು ದಿನ ವಿಜೃಂಭಣೆಯಿಂದ ನಡೆಯಲಿದೆ.

ಈ ಸಂದರ್ಭದಲ್ಲಿ ಫಲ್ಗುಣಿ ಸೇವಾ ಸಂಘದ ಅಧ್ಯಕ್ಷ ಜಯರಾಜ್ ವಿ ಯಸ್, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವ ಅಧ್ಯಕ್ಷ ಡಾ| ಶಾಂತಿ ಪ್ರಸಾದ್, ಅಧ್ಯಕ್ಷರಾದ ಜಗದೀಶ್ಚಂದ್ರ ಡಿ ಕೆ, ಉಪಾಧ್ಯಕ್ಷರುಗಳಾದ ಪ್ರಶಾಂತ್ ಹೆಬ್ಬಾರ್ , ಸುದತ್ ಜೈನ್, ಕಾರ್ಯದರ್ಶಿ ಪ್ರಶಾಂತ್ ಹೆಗ್ಡೆ, ಕೋಶಾಧಿಕಾರಿ ಶ್ರೀಕಾಂತ ಉಡುಪ, ಜೊತೆ ಕಾರ್ಯದರ್ಶಿಗಳಾದ ಅರುಣ್ ಐಂದಲ್ಕೆ , ಪ್ರಸಾದ್ ಜೈನ್, ಸ್ವಾಗತ ಸಮಿತಿ ಸದಸ್ಯರಾದ ಸುಂದರ ಹೆಗ್ಡೆ, ಉಮೇಶ್ ನಡ್ತಿಕಲ್ ,ಶ್ರೀಪತಿ ಉಪಾಧ್ಯಾಯ,ಸಮಿತಿ ಸದಸ್ಯರಾದ ಪ್ರಸನ್ನ ಹೆಬ್ಬಾರ್, ಧನಂಜಯ ಜೈನ್ ಮೂಡುಕೋಡಿ, ಪ್ರಮೋದ್ ಕುಮಾರ್, ಗಂಗಾಧರ ಆಚಾರ್ಯ, ಹೇಮಂತ ಭಟ್, ಸುಧೀರ್ ಬಜಿರೆ, ಸಜೇಶ್ ಪೆರ್ಮಾಣು, ಪ್ರವೀಣ್ ಭಂಡಾರಿ ಶ್ರೀ ಕ್ಷೇತ್ರ ಪಡ್ಯಾರಬೆಟ್ಟಿನ ವಿಶ್ವಾಸ್ ಜೈನ್ ಉಪಸ್ಥಿತರಿದ್ದರು.

Related posts

ನಾಲ್ಕೂರು: ಬೊಳ್ಳಾಜೆ ನಿವಾಸಿ ಸೀತು ನಿಧನ

Suddi Udaya

ಅಲಂಕೃತಗೊಂಡ ನಾರಾವಿ ಸಖಿ ಮತದಾನ ಕೇಂದ್ರದಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ

Suddi Udaya

ಅಂತರಾಜ್ಯ ಗಣಿತ ಜ್ಞಾನ ತರಬೇತಿ ಕಾರ್ಯಕ್ರಮ

Suddi Udaya

ಜಿ.ಪಂ. ಉಪ ಕಾರ್ಯದರ್ಶಿ ಆನಂದ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಸಿಕ ಕೆ.ಡಿ.ಪಿ.ಸಭೆ

Suddi Udaya

ಉಜಿರೆ: ಎಸ್. ಡಿ. ಎಂ ಆಂ.ಮಾ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ

Suddi Udaya

ಬಲ್ಲಾಳರಾಯನ ದುರ್ಗಕ್ಕೆ ಟ್ರಕ್ಕಿಂಗ್ ಬಂದು ಕಾಡಿನ ಮಧ್ಯೆ ದಾರಿ ತಪ್ಪಿದ ಕಾಲೇಜು ವಿದ್ಯಾರ್ಥಿಗಳ ತಂಡ

Suddi Udaya
error: Content is protected !!