26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಮಹಿಳಾ ವೇದಿಕೆಯ ನೇತೃತ್ವದಲ್ಲಿ 4 ನೇ ವರ್ಷದ ವರಮಹಾಲಕ್ಷ್ಮೀ ವ್ರತ ಪೂಜೆ

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಮಹಿಳಾ ವೇದಿಕೆಯ ನೇತೃತ್ವದಲ್ಲಿ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ (ನಿ ) ಉಜಿರೆ ಹಾಗೂ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘ (ರಿ ) ಉಜಿರೆ ಇವರ ಸಹಯೋಗದೊಂದಿಗೆ 4 ನೇ ವರ್ಷದ ವರಮಹಾಲಕ್ಷ್ಮೀ ವ್ರತ ಪೂಜೆಯು ಎಸ್. ಪಿ ಆಯಿಲ್ ಮಿಲ್ ವಠಾರದಲ್ಲಿ ಇಂದು ಜರಗಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶ್ರೀಮತಿ ಸೀತಮ್ಮ ದೇವಿದಾಸ್ ಗೌಡ ಮಾಲ್ದಡ್ಕ ಸಹಶಿಕ್ಷಕಿ ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಚಾರ್ಮಾಡಿ ಇವರು ಆಗಮಿಸಿ ವರಮಹಾಲಕ್ಷ್ಮಿ ವ್ರತದ ಮಹತ್ವ ವನ್ನು ಸಾರಿದರು.

ವೇದಿಕೆಯಲ್ಲಿ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಉಜಿರೆ ಇದರ ಅಧ್ಯಕ್ಷ ರಂಜನ್ ಜಿ ಗೌಡ ಮಾತನಾಡಿ ಇನ್ನು ಹೆಚ್ಚು ಕಾರ್ಯಕ್ರಮ ಮಾಡುವ ಶಕ್ತಿ ನೀಡಲಿ ಎಂದು ಹಾರೈಸಿದರು. ವಿಜಯ ಗೌಡ ವೇಣೂರು ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ದಾಮೋದರ ಗೌಡ ಸುರುಳಿ ಶ್ರೀಮತಿ ಸೌಮ್ಯಲ ತ ಜಯಂತ ಗೌಡ ಗುರಿಪಳ್ಳ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶ್ರೀಮತಿ ಗೀತಾ ಚಿದಾನಂದ ಗೌಡ ಬಡೆಕೊಟ್ಟು ಇವರು ಸ್ವಾಗತಿಸಿ, ಬೆಳ್ತಂಗಡಿ ತಾಲೂಕು ಮಹಿಳಾ ವೇದಿಕೆಯ ಅಧ್ಯಕ್ಷೆಯಾದ ಶ್ರೀಮತಿ ಅಪರ್ಣ ಶಿವಕಾಂತ ಗೌಡ ಅಧ್ಯಕ್ಷತೆ ವಹಿಸಿ ಧನ್ಯವಾದವಿತ್ತರು. ಶ್ರೀಮತಿ ಅನುಪಮಾ ಸತೀಶ್ ಗೌಡ ಮಾಳಿಗೆಮನೆ ಕಾರ್ಯಕ್ರಮ ನಿರೂಪಿಸಿದರು.

Related posts

ಬೂಡುಮುಗೇರು ಶ್ರೀದುರ್ಗಾಪರಮೇಶ್ವರಿದೇವರಬ್ರಹ್ಮಕಲಶಾಭಿಷೇಕ

Suddi Udaya

ಬೆಳ್ತಂಗಡಿ ತಾಲೂಕಿನ ಕೃಷಿಕರಿಗೆ ರೂ. 48.28 ಕೋಟಿ ಬೆಳೆ ವಿಮೆ ಮಂಜೂರು: ಶಾಸಕ ಹರೀಶ್ ಪೂಂಜ

Suddi Udaya

ಮರ ಬಿದ್ದರು, ವಿದ್ಯುತ್ ವ್ಯತ್ಯಾಸವಾದರೂ ಸಮರ್ಪಕವಾಗಿ ಸ್ಪಂದಿಸದ ಮೆಸ್ಕಾಂ ಇಲಾಖೆ: ಮಿತ್ತಬಾಗಿಲು ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಆರೋಪ:ಎರಡು ತಿಂಗಳೊಳಗೆ ಜೆಜೆಎಂ ಕೆಲಸ ಪೂರ್ಣವಾಗದಿದ್ದರೆ ಕಚೇರಿ ಎದರು ಧರಣಿ: ಗ್ರಾ‌ಪಂ ಅಧ್ಯಕ್ಷ ವಿನಯಚಂದ್ರ

Suddi Udaya

ಕೊಟ್ಟಿಗೆಹಾರ: ದೇವರ ಮನೆ ಪ್ರವಾಸಕ್ಕೆ ಹೋದ ಬೆಳ್ತಂಗಡಿಯ ಯುವಕ ನಾಪತ್ತೆ ಪ್ರಕರಣ: ಕೊಯ್ಯೂರು ಪರಿಸರದಲ್ಲಿ ಪತ್ತೆಯಾದ ಯುವಕ ದೀಕ್ಷಿತ್ ಪೂಜಾರಿ

Suddi Udaya

ಉಜಿರೆ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೇವಸ್ಥಾನ ಶ್ರೀ ಕ್ಷೇತ್ರ ಎರ್ನೋಡಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ದಿ. ಎನ್ ಪದ್ಮನಾಭ ಮಾಣಿಂಜ ರವರ ಮೊದಲ ವರ್ಷದ ಪುಣ್ಯಸ್ಮರಣೆ ಆಚರಣೆ

Suddi Udaya
error: Content is protected !!