26.5 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವುದನ್ನು ತಡೆಯಲು ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮನವಿ

ಬೆಳ್ತಂಗಡಿ: ರಾಷ್ಟ್ರಧ್ವಜವೇ ರಾಷ್ಟ್ರದ ಆತ್ಮವಾಗಿದೆ. ಈ ರಾಷ್ಟ್ರೀಯ ಧ್ವಜಗಳನ್ನು ಅಗಸ್ಟ್ 15 ಮತ್ತು 26 ಜನವರಿಯಂದು ಪ್ರದರ್ಶಿಸಲಾಗುತ್ತದೆ. ಆದರೆ ಅದೇ ದಿನ ಅದೇ ರಾಷ್ಟ್ರಧ್ವಜ ರಸ್ತೆ ಹಾಗೂ ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬರುತ್ತದೆ. ಇದು ನಾವು ರಾಷ್ಟ್ರಕ್ಕೆ ಮಾಡಿದ ಅವಮಾನವಾಗಿದೆ . ಪ್ಲಾಸ್ಟಿಕ್ ರಾಷ್ಟ್ರ ಧ್ವಜಗಳನ್ನು ಮಾರಾಟ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಇದು ಲಾಂಛನಗಳು ಮತ್ತು ಹೆಸರುಗಳ ಕಾಯಿದೆ 1950′ ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯಿದೆ 1971′ ಉಲ್ಲಂಘನೆಯಾಗಿದೆ. ಸಮಿತಿಯು ಹಲವು ವರ್ಷಗಳಿಂದ ರಾಷ್ಟ್ರಧ್ವಜಕ್ಕೆ ಅವಮಾನಿಸುವುದರ ವಿರುದ್ಧ ಜನಜಾಗೃತಿ ಮೂಡಿಸುತ್ತಿದೆ.

ಈ ನಿಟ್ಟಿನಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವುದನ್ನು ತಡೆಯಲು ರಾಷ್ಟ್ರಧ್ವಜ ಗೌರವ ಕೃತಿ ಸಮಿತಿಯನ್ನು ಸ್ಥಾಪಿಸಬೇಕೆಂದು ತಹಶೀಲ್ದಾರಾದ ಪೃಥ್ವಿ ಸಾನಿಕಂ ರವರಿಗೂ ಪ್ಲಾಸ್ಟಿಕ್ ರಾಷ್ಟ್ರ ಧ್ವಜಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರೆ ಕೂಡಲೇ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬೆಳ್ತಂಗಡಿ ಪೊಲೀಸ್ ಠಾಣಾ ಅಧಿಕಾರಿ ಸುಬ್ಬಾಪುರ ಮಠ ರವರಿಗೂ ಹಾಗೂ ಶಾಲೆಗಳಲ್ಲಿ ರಾಷ್ಟ್ರಧ್ವಜವನ್ನು ಗೌರವಿಸಿ ಎಂಬ ಉಪಕ್ರಮವನ್ನು ನಡೆಸಲು ತಾಲೂಕು ಶಿಕ್ಷಣ ಅಧಿಕಾರಿ ಶ್ರೀಮತಿ ತಾರಕೇಸರಿ ರವರಿಗೂ ಮನವಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಉದಯ ಬಿ.ಕೆ ವಕೀಲರು, ಉಮೇಶ್ ಬಂಗೇರ ಕಾರ್ಯದರ್ಶಿಗಳು ಶ್ರೀ ದೇವಿ ಮಹಾಮ್ಮಾಯಿ ಭಜನಾ ಮಂದಿರ ಪಿಲ್ಯ, ಅಕ್ಷಯ್ ಟಿ.ರಾವ್ ವಕೀಲರು ,ಯೋಗೀಶ್ ಕೆಂಬರ್ಜೆ, ಹರ್ಷಿತ್ ವಕೀಲರು ಬೆಳ್ತಂಗಡಿ, ಹರೀಶ್ ಮುದ್ದಿನಡ್ಕ ಉಪಸ್ಥಿತರಿದ್ದರು.

Related posts

ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿ ವಿವೇಕ್ ಎನ್ ಡಿ ಎ ಕ್ಲಿಯರ್

Suddi Udaya

ಉಜಿರೆ ಟಿ.ಬಿ ಕ್ರಾಸ್ ಬಳಿ ಚರಂಡಿಗೆ ಉರುಳಿದ ಪಿಕಪ್

Suddi Udaya

ಬೆಳ್ತಂಗಡಿಯ ಬ್ಲಾಕ್ ಕಾಂಗ್ರೆಸ್, ಯುವ ಕಾಂಗ್ರೆಸ್ ವತಿಯಿಂದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆ

Suddi Udaya

ಜು.28: ಬೆಳ್ತಂಗಡಿ ತುಳುನಾಡ ಒಕ್ಕೂಟದ ವತಿಯಿಂದ ಚೆನ್ನೆಮಣೆ ಗೊಬ್ಬು ಹಾಗೂ ಸಂಧಿ ಪಾರ್ದನ ಸುಗ್ಗಿಪು

Suddi Udaya

ಗಣೇಶೋತ್ಸವದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ನಗದು ಬಹುಮಾನದಲ್ಲಿ ಬಳಂಜ ಶಾಲೆಯ ಶಾಲಾ ಸಭಾಂಗಣದ ಶಾರದಾ ಕಲಾಮಂದಿರಕ್ಕೆ ಎರಡು ಫೋಕಸ್ ಲೈಟುಗಳ ಕೊಡುಗೆ ನೀಡಿದ ವಿದ್ಯಾರ್ಥಿಗಳು

Suddi Udaya

ಕಬ್ಬಡಿ ಆಟಗಾರ ಪ್ರೀತಮ್ ಶೆಟ್ಟಿ ಹೃದಯಾಘಾತದಿಂದ ನಿಧನ

Suddi Udaya
error: Content is protected !!