24.6 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಆಟೋರಿಕ್ಷಾ ಕಾರ್ಮಿಕರ ಬದುಕು ಉಳಿಸಲು ದರ ಪರಿಷ್ಕರಣೆ ಅನಿವಾರ್ಯ: ಬಿ.ಎಂ.ಎಸ್

ಮಂಗಳೂರು: ಆಟೋರಿಕ್ಷಾ ಚಾಲಕ-ಮಾಲಕರು ಎದುರಿಸುತ್ತಿರುವ ತೀವ್ರ ಆರ್ಥಿಕ ಸಂಕಷ್ಟವನ್ನು ಗಮನಿಸಿ, ತಕ್ಷಣ ಆಟೋರಿಕ್ಷಾ ಪ್ರಯಾಣ ದರವನ್ನು ಪರಿಷ್ಕರಿಸಬೇಕು ಎಂದು ಭಾರತೀಯ ಮಜ್ದೂರ್ ಸಂಘ (BMS) ಆಗ್ರಹಿಸಿತು.

ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ, ಭಾರತೀಯ ಮಜ್ದೂರ್ ಸಂಘ (BMS) ಸಂಯೋಜಿತ ಮೋಟಾರ್ ಮತ್ತು ಜನರಲ್ ಮಜ್ದೂರ್ ಸಂಘದ ಪರವಾಗಿ ಜಿಲ್ಲಾ ಅಧ್ಯಕ್ಷ ವಕೀಲರಾದ ಅನಿಲ್ ಕುಮಾರ್ ಯು. ಅವರು ಸಂಘದ ನಿಲುವನ್ನು ಸಮಗ್ರವಾಗಿ ಮಂಡಿಸಿದರು.

, ಕಳೆದ ಹಲವು ವರ್ಷಗಳಿಂದ ಆಟೋರಿಕ್ಷಾ ಬಾಡಿಗೆ ದರ ಪರಿಷ್ಕರಣೆಯಾಗದಿದ್ದರೂ ಇಂಧನ, LPG, CNG, ವಾಹನ ವಿಮೆ, ಫಿಟ್ನೆಸ್, ತೆರಿಗೆ, ಟೈರ್, ಟ್ಯೂಬ್, ಬ್ಯಾಟರಿ, ಸ್ಪೇರ್ ಪಾರ್ಟ್ಸ್ ಹಾಗೂ ವಾಹನ ನಿರ್ವಹಣಾ ವೆಚ್ಚಗಳು ನಿರಂತರವಾಗಿ ಏರಿಕೆಯಾಗಿವೆ. ಇದರಿಂದ ಸಾವಿರಾರು ಆಟೋರಿಕ್ಷಾ ಕಾರ್ಮಿಕರ ಜೀವನೋಪಾಯ ಗಂಭೀರ ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದರು.

ಕನಿಷ್ಠ ಬಾಡಿಗೆಯನ್ನು (1.5 ಕಿ.ಮೀ.) ₹50 ಹಾಗೂ ನಂತರದ ಪ್ರತಿ ಕಿಲೋಮೀಟರ್‌ಗೆ ₹30 ನಿಗದಿಪಡಿಸಬೇಕು. ಕಾಯುವ ದರ, ರಾತ್ರಿ ಬಾಡಿಗೆ ಹಾಗೂ ಲಗೇಜ್ ದರವನ್ನು ಪರಿಷ್ಕರಿಸಬೇಕು. ಗ್ರಾಮಾಂತರ ಮತ್ತು ಮಹಾನಗರ ಪ್ರದೇಶಗಳ ಕಾರ್ಯಾಚರಣಾ ವೆಚ್ಚ ಹಾಗೂ ಸೇವೆಯ ಸ್ವರೂಪ ಭಿನ್ನವಾಗಿರುವುದರಿಂದ ಪ್ರತ್ಯೇಕ ಬಾಡಿಗೆ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಇಂಧನ ದರ ಏರಿಕೆಗೆ ಅನುಗುಣವಾಗಿ ಸ್ವಯಂಚಾಲಿತ ದರ ಪರಿಷ್ಕರಣೆ ವ್ಯವಸ್ಥೆ ಜಾರಿಗೆ ತರಬೇಕು. LPG ಮತ್ತು CNG ಇಂಧನದ ನಿರಂತರ ಲಭ್ಯತೆಯನ್ನು ಖಚಿತಪಡಿಸಬೇಕು. ಟೈರ್, ಟ್ಯೂಬ್, ಬ್ಯಾಟರಿ, ಸ್ಪೇರ್ ಪಾರ್ಟ್ಸ್ ಹಾಗೂ ಇತರೆ ವಾಹನ ನಿರ್ವಹಣಾ ಸಾಮಗ್ರಿಗಳ ಮೇಲೆ ರಿಯಾಯಿತಿ ಅಥವಾ ಸಹಾಯಧನ ನೀಡಲು ಸಂಬಂಧಪಟ್ಟ ಇಲಾಖೆಗಳ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಬಿ.ಎಮ್.ಎಸ್ ಮನವಿ ಮಾಡಿತು.

ಆಟೋರಿಕ್ಷಾ ಚಾಲಕರು ಹೆಚ್ಚಿನ ಲಾಭವನ್ನು ಕೇಳುತ್ತಿಲ್ಲ; ತಮ್ಮ ದುಡಿಮೆಗೆ ತಕ್ಕ ನ್ಯಾಯಯುತ ಪ್ರತಿಫಲವನ್ನು ಮಾತ್ರ ಕೇಳುತ್ತಿದ್ದಾರೆ. ಕಾರ್ಮಿಕರ ಬದುಕು ಭದ್ರವಾದರೆ ಮಾತ್ರ ಸಾರ್ವಜನಿಕರಿಗೆ ಗುಣಮಟ್ಟದ ಹಾಗೂ ಸುರಕ್ಷಿತ ಸಾರಿಗೆ ಸೇವೆ ಒದಗಿಸಲು ಸಾಧ್ಯ ಎಂದು ಅನಿಲ್ ಕುಮಾರ್ ಯು. ಹೇಳಿದರು.

ಸಭೆಯಲ್ಲಿ ಮಂಡಿಸಲಾದ ವಿವಿಧ ಸಂಘಟನೆಗಳ ಬೇಡಿಕೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು, ಎಲ್ಲಾ ಮನವಿಗಳನ್ನು ಸಮಗ್ರವಾಗಿ ಪರಿಶೀಲಿಸಿ ನಿಯಮಾನುಸಾರ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಬಿಎಮ್.ಎಸ್ ಜಿಲ್ಲಾ ಕಾರ್ಯದರ್ಶಿ ಗೋಪಾಲ ಕೃಷ್ಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತಕುಮಾರ್ ಮನಿಹಳ್ಳ, ಜಿಲ್ಲಾ ಉಪಾಧ್ಯಕ್ಷ ನಾರಾಯಣ ಪೂಜಾರಿ, ಬಂಟ್ವಾಳದ ಶ್ರೀಕಾಂತ್, ಪುತ್ತೂರಿನ ಹೇಮಂತ್ ಕುಮಾರ್, ಸಚಿನ್, ಸೀತಾರಾಮ್, ಬೆಳ್ತಂಗಡಿಯ ಕೃಷ್ಣ, ಪ್ರಶಾಂತ್, ವಸಂತ ವೇಣೂರು, ಮೂಡಬಿದ್ರೆಯ ದೀಪಕ್ ರಾಜ್, ನವೀನ್, ರಾಜೇಶ್, ಸುಳ್ಯದ ಪ್ರಕಾಶ್ ಎಂ.ಎಸ್., ನಾರಾಯಣ ಹಾಗೂ ಬಜ್ಪೆಯ ನಾಗೇಶ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಬಿ.ಎಮ್.ಎಸ್ ಪದಾಧಿಕಾರಿಗಳು ಭಾಗವಹಿಸಿದ್ದರು.

ಭಾರತೀಯ ಮಜ್ದೂರ್ ಸಂಘವು ಆಟೋರಿಕ್ಷಾ ಕಾರ್ಮಿಕರ ನ್ಯಾಯಯುತ ಹಕ್ಕುಗಳಿಗಾಗಿ ಮುಂದೆಯೂ ಸಂಘಟಿತ ಹೋರಾಟ ಹಾಗೂ ರಚನಾತ್ಮಕ ಸಂವಾದವನ್ನು ಮುಂದುವರಿಸಲಿದೆ ಎಂದು ತಿಳಿಸಿದೆ.

Related posts

ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ನಾಯಕಿಯಾಗಿ ಕು. ನಿಶಾ ಜಿ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವ: ಚಪ್ಪರ ಮುಹೂರ್ತ

Suddi Udaya

ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅಂಬೇಡ್ಕರ್ ದಿನಾಚರಣೆ

Suddi Udaya

ತಾಲೂಕು ಮಟ್ಟದ ಖೋ ಖೋ ಪಂದ್ಯಾಟ: ಅಳದಂಗಡಿ ಸರಕಾರಿ ಪ್ರೌಢಶಾಲಾ ಬಾಲಕರ ಹಾಗೂ ಬಾಲಕಿಯರ ತಂಡ ದ್ವಿತೀಯ

Suddi Udaya

ಮಂಜೊಟ್ಟಿ- ಮಂಚಕಲ್ಲುವಿನಲ್ಲಿ ಧರೆಗುರುಳಿದ ಮರ, ಸಂಚಾರಕ್ಕೆ ತೊಂದರೆ

Suddi Udaya

ಬಳಂಜದಲ್ಲಿ 4ನೇ ವರ್ಷದ ವೈಭವದ ಶ್ರೀ ಶಾರದೋತ್ಸವ ಸಂಭ್ರಮ: ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದ ಶಾಸಕ ಹರೀಶ್ ಪೂಂಜ

Suddi Udaya
error: Content is protected !!