September 6, 2026
ಅಪಘಾತಸಂಘ-ಸಂಸ್ಥೆಗಳುಸಮಸ್ಯೆ

ಲಾಯಿಲ ಗ್ರಾ.ಪಂ. ಉಪಾಧ್ಯಕ್ಷೆ ಸುಗಂಧಿ ಜಗನ್ನಾಥ್ ರವರ ಮನೆ ಕುಸಿತ ಸಂಸದ ಬ್ರಿಜೇಶ್ ಚೌಟ & ಶಾಸಕ ಹರೀಶ್ ಪೂಂಜ ಭೇಟಿ

ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಸುಗಂಧಿ ಜಗನ್ನಾಥ್ ಇವರ ಮನೆ ತಡ ರಾತ್ರಿ 1.30ಕ್ಕೆ ಕುಸಿದಿರುವ ಘಟನೆ ನಡೆದಿರುತ್ತದೆ.

ಈ ಸಂದರ್ಭದಲ್ಲಿ ಮನೆಯಲ್ಲಿ ಸುಗಂಧಿ ಇವರ ಪತಿ ಜಗನ್ನಾಥ್, ಮಗ ಅನಿಲ್, ಸೊಸೆ ಮಧುರ ಪುಟ್ಟ ಮಕ್ಕಳು ಮಲಗಿದ್ದರು. ಗೋಡೆ ಬಿರುಕು ಬಿಟ್ಟ ಶಬ್ದ ಕೇಳಿ ಮನೆಯವರು ಎಚ್ಚರ ಗೊಂಡಿದ್ದರಿಂದ ಮನೆಯ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುಸಿತದಿಂದ ಮನೆಯ ನಿತ್ಯ ಬಳಕೆಯ ಸಾಮಗ್ರಿಗಳು, ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗಿವೆ. ವಿಷಯ ತಿಳಿದ ಶಾಸಕ ಹರೀಶ್ ಪೂಂಜ ಹಾಗೂ ಸಂಸದ ಬ್ರಿಜೇಶ್ ಚೌಟ ಭೇಟಿ ನೀಡಿ ಕುಸಿತಗೊಂಡಿದ್ದ ಮನೆಯನ್ನು ವೀಕ್ಷಿಸಿದರು.

ಮನೆಯ ಕೂದಲೆಳೆಯ ಅಂತರದಲ್ಲೇ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು ಕಂಪ್ರೆಸರ್ ಹಾಗೂ ಬ್ರೇಕರ್ ಮೂಲಕ ಕಪ್ಪು ಕಲ್ಲು ತೆರವು ಮಾಡುತ್ತಿದ್ದ ಸಂದರ್ಭದಲ್ಲಿ ಹಾಗೂ ವೈಬ್ರೇಟರ್ ಒತ್ತಡಕ್ಕೆ ಕಳೆದ ಒಂದು ವರುಷಗಳ ಹಿಂದೆಯೇ ಗೋಡೆಯಲ್ಲಿ ಬಿರುಕು ಮೂಡಿದ್ದು ಈ ಬಗ್ಗೆ ಸಂಬಂಧ ಪಟ್ಟ ಹೆದ್ದಾರಿ ಪ್ರಾಧಿಕಾರಕ್ಕೆ ಮನೆಯವರು ಲಿಖಿತ ರೂಪದಲ್ಲಿ ದೂರು ನೀಡಿದ್ದರು. ಪ್ರಾಧಿಕಾರದ ಅಧಿಕಾರಿಗಳು ಈ ಹಿಂದೆಯೇ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Related posts

ದ.ಕ. ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿ ದಯಾನಂದ ನಾಯಕ್, ಪ್ರ. ಕಾರ್ಯದರ್ಶಿಯಾಗಿ ಸುಧಾಕರ್ ಪ್ರಭು ಆಯ್ಕೆ

Suddi Udaya

ಲಾಯಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ

Suddi Udaya

ಪಣಕಜೆ ಮಹಮ್ಮಾಯಿ ಕಟ್ಟೆ ಫ್ರೆಂಡ್ಸ್ ವತಿಯಿಂದ ಅಶಕ್ತ ಕುಟುಂಬಗಳಿಗೆ ಧನ ಸಹಾಯ

Suddi Udaya

ಹತ್ಯಡ್ಕ ಪ್ರಾ.ಕೃ.ಪ. ಸಹಕಾರ ಸಂಘದ ನೂತನ “ಮುದ್ದಿಗೆ ಶಾಖೆ” ಉದ್ಘಾಟನೆ

Suddi Udaya

ಕಲ್ಮಂಜ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Suddi Udaya

ಟ್ಯಾಂಕರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಪುದುವೆಟ್ಟಿನ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು

Suddi Udaya
error: Content is protected !!