ಕೊಕ್ಕಡ: ಜೆಸಿಐ ಕೊಕ್ಕಡ ಕಪಿಲಾ ಘಟಕದ ವಲಯ 15ರ ಪ್ರಾಂತ್ಯ E ಯ ವಲಯ ಉಪಾಧ್ಯಕ್ಷ ಸುಹಾಸ್ ಎ.ಪಿಎಸ್ ಮರಿಕೆಯವರು LAV (LO Assistance visit) ಕಾರ್ಯಕ್ರಮವನ್ನು ಸಂತ ಜಾನರ ಹಿ ಪ್ರಾ ಶಾಲೆ ಕೌಕ್ರಾಡಿಯಲ್ಲಿ ಆ.6ರಂದು ನಡೆಯಿತು.

ಈ ಸಂದರ್ಭದಲ್ಲಿ ಅವರು ಘಟಕದಲ್ಲಿ ಇದುವರೆಗೆ ನಡೆದ ಕಾರ್ಯಕ್ರಮಗಳ ಪರಿಶೀಲನೆ ನಡೆಸಿದರು ಹಾಗೂ ಮುಂದೆ ನಡೆಸಬೇಕಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ವಲಯ ಉಪಾಧ್ಯಕ್ಷ ಆಯುಷ್ ಜೈನ್ ಸಭೆಗೆ ಪರಿಚಯಿಸಿದರು.
ಜೆಸಿ ಧನುಷ್ ಮತ್ತು ಜೇಸಿಂತಾ ಡೆಸೋಜಾ ಕಾರ್ಯಕ್ರಮದ ಕುರಿತು ಅನಿಸಿಕೆ ಹೇಳಿದರು. ಮಾರ್ಗದರ್ಶಕರಾದ ಜೋಸೆಫ್ ಪಿರೇರಾ, ಪೂರ್ವಧ್ಯಕ್ಷರಾದ ಶ್ರೀದರ್ ರಾವ್, ನಿಕಟಪೂರ್ವ ಅಧ್ಯಕ್ಷ ಸಂತೋಷ ಜೈನ್, ವಿಕ್ಟರ್, ದೀಪಾ, ಜೇನವಿವ್, ಕೊಕ್ಕಡದ ವಕೀಲರಾದ ಶ್ರೀಮತಿ ಧನ್ಯ ಕೇವಳ, ಪೂರ್ವ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಜೆಸಿಐ ಕುಟುಂಬದ ಎಲ್ಲ ಸದಸ್ಯರು ಭಾಗವಹಿಸಿ, ಕಾರ್ಯಕ್ರಮದ ಉದ್ದೇಶಕ್ಕೆ ಸಾಥ್ ನೀಡಿದರು.
ಕಾರ್ಯಕ್ರಮವನ್ನು ಘಟಕದ ಅಧ್ಯಕ್ಷೆ ಶೋಭಾ ಪಿ.ಬಿ ಸ್ವಾಗತಿದರು. ಜೆಸಿ ವಾಣಿಯನ್ನು ಜೋಯೆಲ್ ಪೀರೆರಾ ವಾಚಿಸಿ ಸಭೆಯನ್ನು ಕಾರ್ಯದರ್ಶಿ ಚಂದನಾ ಜೈನ್ ವಂದಿಸಿದರು.











