September 6, 2026
Uncategorized

ಧಮ೯ಸ್ಥಳ ಸೇರಿ ವಿವಿಧ ಠಾಣೆಯಲ್ಲಿ ದಾಖಲಾದ ಪ್ರಕರಣಗಳ ಅಂತರ್ ರಾಜ್ಯ ದರೋಡೆ ಪ್ರಕರಣಗಳ ಕುಖ್ಯಾತ ಆರೋಪಿಯ ದಸ್ತಗಿರಿ

ಬೆಳ್ತಂಗಡಿ: ಧರ್ಮಸ್ಥಳ ಠಾಣೆ,
ಉಪ್ಪಿನಂಗಡಿ ಠಾಣೆ ಸೇರಿದಂತೆ ವಿವಿಧ ಠಾಣೆಯಲ್ಲಿ ದಾಖಲಾದ
ಪ್ರಕರಣಗಳ ಆರೋಪಿತನಾಗಿ, ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಹಲವಾರು ವರ್ಷಗಳಿಂದ
ತಲೆ ಮರೆಸಿಕೊಂಡಿದ್ದ ಆರೋಪಿಸಿಯನ್ನು ಉಪ್ಪಿನಂಗಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ನಗರ ಠಾಣಾ ಅಕ್ರ:200/2017
ಕಲಂ:392 ಐ.ಪಿ.ಸಿ, 25 27 ಆರ್ಮ್ಸ್ ಆಕ್ಟ್ ಪ್ರಕರಣದಲ್ಲಿ ಆರೋಪಿತನಾಗಿ, ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಹಲವಾರು ವರ್ಷಗಳಿಂದತಲೆಮರೆಸಿಕೊಂಡಿದ್ದ ಕೇರಳ, ತ್ರಿಶೋರ್ ಜಿಲ್ಲೆಯ ನಿವಾಸಿ ಇಲಿಯಾಸ್ ಪಿ.ಎ ಎಂಬಾತನನ್ನು, ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಅರುಣ್ ನಾಗೇಗೌಡ ರವರ ಮಾರ್ಗದರ್ಶನದಲ್ಲಿ, ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕರಾದ ಕೌಶಿಕ್ ರವರ ನೇತೃತ್ವದ, ಹೆಚ್.ಸಿ 685 ಪ್ರಶಾಂತ್ ರೈ, ಹೆಚ್.ಸಿ 1028 ಗಣೇಶ್, ಸಿಪಿಸಿ 1944 ಮ್ಯಾಥ್ಯೂ ವರ್ಗೀಸ್ ಹಾಗೂ ಸಿಪಿಸಿ 2283 ಶ್ರೀಶೈಲ ಎಂ.ಕೆ ರವರನ್ನು ಒಳಗೊಂಡ ವಿಶೇಷ ತಂಡವು ಕೇರಳದಲ್ಲಿ ದಸ್ತಗಿರಿ ಮಾಡಿ, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ಸದ್ರಿ ಆರೋಪಿತನ ವಿರುದ್ಧ ಪುತ್ತೂರು ನಗರ ಠಾಣೆ , ಉಪ್ಪಿನಂಗಡಿ ಠಾಣೆ, ಧರ್ಮಸ್ಥಳ ಠಾಣೆಗಳಲ್ಲಿ ಪ್ರಕರಣಗಳಿದ್ದು, ಅಲ್ಲದೇ ಕೇರಳ ರಾಜ್ಯದ ತ್ರಿಶೋರ್ ಜಿಲ್ಲೆಯಲ್ಲಿ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಸುಮಾರು 20 ಪ್ರಕರಣಗಳು ದಾಖಲಾಗಿರುತ್ತದೆ.

Related posts

ಪದ್ಮುಂಜ : ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಪೂರ್ವ ತಯಾರಿ ಕಾಮಗಾರಿಗಳ ವೀಕ್ಷಣೆ

Suddi Udaya

ಬಳಂಜ: ರಾಜ್ಯ ಮಡಿವಾಳರ ಸಂಘದ ವತಿಯಿಂದ ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ವಿತರಣೆ

Suddi Udaya

ಪುಂಜಾಲಕಟ್ಟೆ ಪ್ರ.ದ. ಕಾಲೇಜು: ಯೂತ್ ಹೆಲ್ತ್ ಮತ್ತು ನ್ಯೂಟ್ರಿಷನ್ ವಿಶೇಷ ಉಪನ್ಯಾಸ

Suddi Udaya

ಗೋಪಾಲಕೃಷ್ಣಶೆಟ್ಟಿ ನೆತ್ತರಇವರಿಗೆ ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ ಅವಾರ್ಡ್

Suddi Udaya

ಕುಪ್ಪೆಟ್ಟಿ ಸಮೀಪ ಗುಡ್ಡ ಜರಿದು ಅಪಾಯದ ಸ್ಥಿತಿ ನಿರ್ಮಾಣ

Suddi Udaya

ನಿಯಂತ್ರಣ ತಪ್ಪಿ ಆಪೆ ರಿಕ್ಷಾ ಪಲ್ಟಿ: ಪ್ರಯಾಣಿಕರಿಗೆ ಗಾಯ

Suddi Udaya
error: Content is protected !!