September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ

ಉಜಿರೆ: ಆ10. ಬೆಳ್ತಂಗಡಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಹಾಗೂ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ (ರಿ) ಸಹಭಾಗಿತ್ವದಲ್ಲಿ ಬೆಳ್ತಂಗಡಿ ತಾಲೂಕಿನ ಶಾಲಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆ.10 ರಂದು “ರೋಟಾಲಯ” ಸಂಗೀತ ಸ್ಪರ್ಧೆಯನ್ನು ಬೆಳ್ತಂಗಡಿಯ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದಲ್ಲಿ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳು ಭಾಗವಹಿಸಿ, ಪ್ರೌಢಶಾಲೆ ವಿಭಾಗದ ವೈಯಕ್ತಿಕ ಭಾವಗೀತೆ ಸ್ಪರ್ಧೆಯಲ್ಲಿ 10ನೇ ತರಗತಿ ಸ್ವಸ್ತಿಶ್ರೀ ದ್ವಿತೀಯ, ಪ್ರಾಥಮಿಕ ವಿಭಾಗದಲ್ಲಿ 4ನೇ ತರಗತಿ ಸನ್ನಿಧಿ ಪ್ರಥಮ ಹಾಗೂ ದೇಶಭಕ್ತಿಗೀತೆ ಸಮೂಹ ಗಾಯನ ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದು ವಿಜೇತರಾಗಿರುತ್ತಾರೆ.

ಭಾಗವಹಿಸಿದ ಹಾಗೂ ವಿಜೇತರಾದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದಿಂದ ಅಭಿನಂದಿಸಲಾಯಿತು.

Related posts

ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಮಹಾಸಭೆಯಲ್ಲಿ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ಪ್ರಶಸ್ತಿ

Suddi Udaya

ರೋಟರಿ ಕ್ಲಬ್ ವತಿಯಿಂದ ಅಮೂಲ್ ಸಾವಯುವ ಗೊಬ್ಬರದ ಪ್ರಾತ್ಯಕ್ಷಿಕೆ

Suddi Udaya

ಉಜಿರೆ ಬೆನಕ ಸೆಂಟರ್ ನಲ್ಲಿ ದಾದಿಯರ ದಿನಾಚರಣೆ

Suddi Udaya

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ, ರೋವರ್ಸ್ – ರೇಂಜರ್ಸ್ ಘಟಕ ಹಾಗೂ ವಾಣಿಜ್ಯ ಸಂಘದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ರೋಟರೀ ಕ್ಲಬ್ ನಿಂದ ರೂ. 40 ಲಕ್ಷ ಮೌಲ್ಯದ ಕೊಡುಗೆ

Suddi Udaya

ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಶೃಂಗೇರಿ ಶಾರದಾ ಮಠಕ್ಕೆ ಭೇಟಿ, ಪುಂಡಿ ಪಣವು ಸಮರ್ಪಣೆ

Suddi Udaya
error: Content is protected !!