ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಮಹಾವಿದ್ಯಾಲಯದ ಉಜಿರೆಯ ವಾಣಿಜ್ಯ ಶಾಸ್ತ್ರ ವಿಭಾಗ ಮತ್ತು ಎಸ್.ಡಿ.ಎಮ್-ರೋಟರಿ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ (HRD) ಕೇಂದ್ರ ಜಂಟಿಯಾಗಿ“ಆಧುನಿಕ ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಯೋಗಾರ್ಹತಾ ಕೌಶಲ್ಯ ಮತ್ತು ಅವಕಾಶಗಳ ವಾಸ್ತವತೆ” ಈ ವಿಚಾರದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ತೃತೀಯ ಬಿಕಾಂ ವಿದ್ಯಾರ್ಥಿಗಳಿಗಾಗಿ ಆ. 8ರಂದು ಎಸ್.ಡಿ.ಎಮ್ ಕಾಲೇಜಿನ ಆಡಿಟೋರಿಯಂ ನಲ್ಲಿ ನಡೆಯಿತು.

ಬೆಂಗಳೂರಿನ Reliance Skilling Academy ಸಂಸ್ಥೆಯ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ ಪ್ರೀತಂ ಪ್ರಸಾದ್ ಎಸ್ ರವರು ಸಂಪನ್ಯೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿ ಅವರು ಇಂದಿನ ವೇಗವಾಗಿ ಬದಲಾಗುತ್ತಿರುವ ಉದ್ಯೋಗ ಕ್ಷೇತ್ರದಲ್ಲಿ ಕೇವಲ ಶೈಕ್ಷಣಿಕ ಅರ್ಹತೆಗಳು ಸಾಕಾಗುವುದಿಲ್ಲ. ಆಧುನಿಕ ಉದ್ಯೋಗ ಮಾರುಕಟ್ಟೆಯು ವಾಸ್ತವಾಗಿ ಸ್ವಯಂಚಾಲಿತ ಜಾಗತೀಕರಣ ಹಾಗೂ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನಗಳು ರೂಪಿಸುತ್ತಿದ್ದು, ಇದು ಹೊಸ ಅವಕಾಶಗಳೊಂದಿಗೆ ತೀವ್ರ ಸ್ಪರ್ಧೆಯನ್ನೂ ತಂದಿದೆ. ಪದವೀಧರರು ತಮ್ಮ ಕೌಶಲ್ಯಗಳನ್ನು ಕೈಗಾರಿಕಾ ಅಗತ್ಯಗಳಿಗೆ ಹೊಂದಿಸಿಕೊಳ್ಳಬೇಕು, ನಿರಂತರ ಕಲಿಕೆಯಿಂದ ಇದು ಸಾಧ್ಯ ಮತ್ತು ಬದಲಾಗುತ್ತಿರುವ ಕೆಲಸದ ಪರಿಸರಗಳಿಗೆ ಹೊಂದಿಕೊಳ್ಳಬೇಕು, ಆಗ ಮಾತ್ರ ಅವರು ಪ್ರಸ್ತುತ ಮತ್ತು ಸ್ಪರ್ಧಾತ್ಮಕವಾಗಿರಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಪ್ರಾಂಶುಪಾಲರಾದ ಪ್ರೊ ವಿಶ್ವನಾಥ ಪಿ ರವರು ಮಾರ್ಗದರ್ಶನದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ ರತ್ನವತಿ ಕೆ ರವರು ಕಾರ್ಯಕ್ರಮದಲ್ಲಿ ಉಪಸ್ಥಿತಿಯಲ್ಲಿ ಎಸ್.ಡಿ.ಎಮ್-ರೋಟರಿ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ (HRD) ಕೇಂದ್ರವು ನಿರ್ದೇಶಕರಾದ ಡಾ ನಾಗರಾಜ ಪೂಜಾರಿ ಕಾರ್ಯಕ್ರಮವನ್ನು ಸಂಘಟಿಸಿದ್ದರು ಮತ್ತು ವೃತ್ತಿ ಮಾರ್ಗದರ್ಶನ ಕೇಂದ್ರದ ಸದಸ್ಯರು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಸಹಕಾರ ನೀಡಿದರು.











