37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ ಕ್ಷೇತ್ರ ಹಾಗೂ ಡಾ.ಡಿ. ಹೆಗ್ಗಡೆಯವರ ಜತೆ ನಾವು ನಿಲ್ಲುತ್ತೇವೆ: ಮಾಜಿ ಸಚಿವ ಜನಾರ್ದನ ಪೂಜಾರಿ

ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಜತೆಗೆ ನಾವಿದ್ದೇವೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದರು.

ತೊಕ್ಕೊಟ್ಟಿನಲ್ಲಿ ಸಂಘಟನೆಯೊ೦ದರ ಕಾರ್ಯಕ್ರಮದಲ್ಲಿ ಮಾತನಾಡಿ, ಧರ್ಮಸ್ಥಳದೊಟ್ಟಿಗೆ ಈ ದೇಶ ಅಲ್ಲ, ಜಗತ್ತೇ ಇದೆ. ಇಂದು ನಾನು ಮಾತನಾಡುತ್ತಿದ್ದೇನೆ. ನನ್ನನ್ನು ಜೈಲಿಗೆ ಹಾಕಿ, ಅದಕ್ಕೂ ನಾನು ಸಿದ್ಧನಿದ್ದೇನೆ ಎಂದು ಭಾವುಕರಾದರು.

ಎಸ್‌ಐಟಿಯವರು ಧರ್ಮಸ್ಥಳದ ವಠಾರ ಅಗೆಯುತ್ತಿದ್ದಾರೆ, ಶವ ಹುಡುಕುತ್ತಿದ್ದಾರೆ. ನಿಮಗೆ ಅಲ್ಲಿ ಈವರೆಗೆ ಏನೂ ಸಿಕ್ಕಿಲ್ಲ, ಮುಂದೆಯೂ ಸಿಗುವುದಿಲ್ಲ. ಧರ್ಮಸ್ಥಳ ಹಾಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಮುಖ್ಯಮಂತ್ರಿಯವರೇ ಏನು ಮಾಡುತ್ತಿದ್ದೀರಿ? ನೀವೇಕೆ ಬಾಯಿ ಬಿಡುತ್ತಿಲ್ಲ? ಒಂದು ದೇವಸ್ಥಾನ ಹಾಳು ಮಾಡುವಾಗ ಸಿಎಂ ಮಾತಾಡುತ್ತಿಲ್ಲ. ನಮಗೆ ನಾಚಿಗೆ ಆಗುತ್ತಿದೆ. ಧರ್ಮಸ್ಥಳ ಹಾಳು ಮಾಡಲು ಈ ಪೂಜಾರಿ ಬಿಡುವುದಿಲ್ಲ ಎಂದರು.

Related posts

ಕನ್ಯಾಡಿ II ಸ. ಉ. ಹಿ.ಪ್ರಾ. ಶಾಲೆಯಲ್ಲಿ ನೂತನ ಎಲ್‌ಕೆಜಿ ತರಗತಿ ಶುಭಾರಂಭ

Suddi Udaya

ಕಳಿಯ ಗ್ರಾ.ಪಂ. ನಿಂದ ಯಶಸ್ವಿ ಮಾದರಿ ಜನ ಸ್ನೇಹಿ ಆಧಾರ್ ಕ್ಯಾಂಪ್ & ಅಂಚೆ ಜನ ಸಂಪರ್ಕ ಅಭಿಯಾನ

Suddi Udaya

ಮಡಂತ್ಯಾರು ಗ್ರಾಮ ಪಂಚಾಯತ್ ಆಕರ್ಷಣೀಯ ಸಖೀ ಮತಗಟ್ಟೆ

Suddi Udaya

ಕೊಕ್ಕಡದ‌ಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರರವರ ಕಾರನ್ನು ಚುನಾವಣಾ ಅಧಿಕಾರಿಗಳಿಂದ ತಪಾಸಣೆ

Suddi Udaya

ಬಂದಾರು ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಎಸ್ ಡಿ ಎಂ ಪ.ಪೂ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿ ಸಂಸ್ಕೃತದಲ್ಲಿ ಪೂರ್ಣಾಂಕ

Suddi Udaya
error: Content is protected !!